ಮೆಟ್ರೋ ಸುರಂಗ ಕಾಮಗಾರಿ ಫೆಬ್ರವರಿಯಿಂದ ಆರಂಭ: ಪೂರ್ಣ ಮಾಹಿತಿ

ಬೆಂಗಳೂರು, ಜನವರಿ 7: ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುರಂಗ ಕೊರೆಯುವ ಯಂತ್ರಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ.

ಸುರಂಗ ಮಾರ್ಗ ನಿರ್ಮಾಣ ಗುತ್ತಿಗೆ ಪಡೆದಿರುವ ಸಂಸ್ಥೆ ಈ ತಿಂಗಳಲ್ಲಿ 4 ಟನಲ್ ಬೋರಿಂಗ್ ಯಂತ್ರವನ್ನು ಬೆಂಗಳೂರಿಗೆ ತರುತ್ತಿದ್ದು, ಫೆಬ್ರವರಿಯಿಂದ ಕಾಮಗಾರಿ ಆರಂಭಿಸಲಿದೆ.

ನಗರದ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬಲ್ಲ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಕಾಮಗಾರಿ 2023ಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ, ಸುರಂಗ ಮಾರ್ಗದ ಕಾಮಗಾರಿ ವಿಳಂಬವಾದ ಕಾರಣ, ಯೋಜನೆಯ ಅಂತಿಮ ಗಡುವು 2024ಕ್ಕೆ ಮರುನಿಗದಿಗೊಂಡಿದೆ.

Metro Tunnel Work Begins In February

ವೆಲ್ಲಾರ ಜಂಕ್ಷನ್‌ನಿಂದ ಆರಂಭ: ಮೆಟ್ರೋ ಎರಡನೇ ಹಂತದಲ್ಲಿ ಡೈರಿ ವೃತ್ತದಿಂದ ನಾಗಸಂದ್ರದವರೆಗೆ 14 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಮೊದಲಿಗೆ ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರದವರೆಗೆ 2.7 ಕಿ.ಮೀ ಉದ್ದದ ಮಾರ್ಗ ನಿರ್ಮಿಸಲಾಗುತ್ತದೆ.

ಜೊತೆಗೆ ಶಿವಾಜಿನಗರದಿಂದ ಪಾಟರಿ ಟೌನ್‌ವರೆಗಿನ 2.8 ಕಿ.ಮೀ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಯಂತ್ರಗಳು ಪ್ರತಿದಿನ 3ರಿಂದ 5 ಕಿ.ಮೀ ಸುರಂಗ ಕೊರೆಯಲಿದೆ.

ಸುರಂಗ ಮಾರ್ಗ ನಿರ್ಮಾಣ ಗುತ್ತಿಗೆ ಪಡೆದಿರುವ ಸಂಸ್ಥೆ ಈ ತಿಂಗಳಲ್ಲಿ 4 ಟನೆಲ್ ಬೋರಿಂಗ್ ಯಂತ್ರವನ್ನು ಬೆಂಗಳೂರಿಗೆ ತರುತ್ತಿದ್ದು, ಫೆಬ್ರವರಿಯಿಂದ ಕಾಮಗಾರಿ ಆರಂಭವಾಗಲಿದೆ.

ಕೆಲ ದಿನಗಳಲ್ಲಿ ಸುರಂಗ ಕೊರೆಯುವ 2 ಯಂತ್ರಗಳು ಕಾರ್ಯಾರಂಭಿಸಲಿವೆ. ಇವುಗಳ ಪರೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+