ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿಗೆ ಮೆಟ್ರೋ ರೈಲು ಸೇವೆ ಹೆಚ್ಚಳ

ಬೆಂಗಳೂರು, ಡಿಸೆಂಬರ್ 5: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಮಾರ್ಗದಲ್ಲಿ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು ಪ್ರಯಾಣಿಕರ ದಟ್ಟಣೆ ವಿಪರೀತವಾಗಿದೆ.

ಅದರಲ್ಲೂ ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಕಾರಣ ಮೆಜೆಸ್ಟಿಕ್‌ ಹಾಗೂ ಬೈಯಪ್ಪನಹಳ್ಳಿ ನಡುವೆ ಬೆಳಗ್ಗೆ 9ರಿಂದ 10.30ರವರೆಗೆ ಹೆಚ್ಚುವರಿ ಟ್ರಿಪ್‌ಗಳನ್ನು ಆರಂಭಿಸಲಾಗಿದೆ.

ಹೊಸದಾಗಿ ಆರಂಭಿಸಿರುವ ಸೇವೆಯಿಂದಾಗಿ ಈ ಎರಡೂ ನಿಲ್ದಾಣಗಳ ಮಧ್ಯೆ ಸಂಚರಿಸುವ ರೈಲುಗಳ ಟ್ರಿಪ್ 9ರಿಂದ 11ಕ್ಕೆ ಏರಿಕೆಯಾಗಿದೆ.

Metro service frequency increased between Majestic- Baiyappanahalli

ಜೊತೆಗೆ ಮೂರು ನಿಮಿಷಗಳ ಅಂತರದಲ್ಲಿ ರೈಲು ಬರಲಿದೆ.ಜತೆಗೆ ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿಯತ್ತ ಸಾಗುವ ರೈಲು ನಾಲ್ಕು ನಿಮಿಷದ ಬದಲು ಐದು ನಿಮಿಷಕ್ಕೆ ಒಂದರಂತೆ ಸೇವೆಯನ್ನು ನೀಡಲಿದೆ.

ಈ ಮಾರ್ಗದಲ್ಲಿ ಆರು ಬೋಗಿಗಳುಳ್ಳ ರೈಲು ಐದು ಬಾರಿ ಸಂಚರಿಸಲಿದೆ. ಅದರ ಟ್ರಿಪ್‌ಗಳನ್ನು ಶೀಘ್ರವೇ ಹೆಚ್ಚಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.ಎಂಆರ್‌ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಮುಂದಾಗಿದೆ. ಆದ್ದರಿಂದ, ರೈಲು ನಿಲ್ದಾಣದ ಪ್ಲಾಟ್‌ ಫಾರಂಗಳಲ್ಲಿ ಹಳಿಯ ಸಮೀಪ ಗಾಜಿನ ಬಾಗಿಲುಗಳನ್ನು ಅಳವಡಿಸಲಿದೆ.

ಈಗಾಗಲೇ ವಿದೇಶಗಳಲ್ಲಿ ರೈಲ್ವೇ ಟ್ರ್ಯಾಕ್ ಸಮೀಪ ಗಾಜಿನ ಬಾಗಿಲು ಅವಳವಡಿಕೆ ಮಾಡಲಾಗಿದ್ದು, ಇದು ಯಶಸ್ವಿಯಾಗಿದೆ. ಇದರಿಂದಾಗಿ ಆಕಸ್ಮಿಕವಾಗಿ ಪ್ರಯಾಣಿಕರು ಟ್ರ್ಯಾಕ್‌ಗೆ ಬೀಳುವುದು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಡೆ ಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+