ಫ್ಲವರ್ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ
Recommended Video

ಬೆಂಗಳೂರು, ಆಗಸ್ಟ್ 11: ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಪುಷ್ಪ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 11 ಮತ್ತು 12 ಹಾಗೂ ಆಗಸ್ಟ್ 15ರಂದು ಮೆಟ್ರೋ ದರವನ್ನು ಬಿಎಂಆರ್‌ಸಿಲ್ ಹೆಚ್ಚಳ ಮಾಡಿದೆ.
ಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ, ದಟ್ಟಣೆ ಸಮಸ್ಯೆ ಪರಿಹಾರಕ್ಕಾಗಿ ಬಿಎಂಆರ್‌ಸಿಎಲ್ ಕಾಗದ ರೂಪದ ಟಿಕೆಟ್ ಪರಿಚಯ ಮಾಡಲಿದೆ. ಈ ಮೂರು ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು 30 ರೂ. ನೀಡಿ ಕಾಗದ ರೂಪದ ಟಿಕೆಟ್ ಪಡೆದು ಪ್ರಯಾಣಿಸಬೇಕಾಗಿದೆ.
ಬಿಎಂಆರ್‌ಸಿಎಲ್‌ನ ಈ ನಿರ್ಧಾರದಿಂದ ಹತ್ತಿರದ ಪ್ರಯಾಣಿಕರಿಗೆ ಟಿಕೆಟ್ ದರ ಹೊರೆಯಾಗಲಿದೆ. ಆದರೆ ಬೈಯಪ್ಪನಹಳ್ಳಿ ನಾಯಂಡಹಳ್ಳಿ ಹಾಗೂ ನಾಗಸಂದ್ರ ನಿಲ್ದಾಣಗಳಿಂದ ಸಂಚರಿಸುವ ಜನರಿಗೆ ಸಾಮಾನ್ಯ ದಿನಕ್ಕಿಂತ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಾಗಲಿದೆ.

ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಹೋಗಲು 10 ರೂ. ದರವಿದೆ. ಲಾಲ್‌ಬಾಗ್‌ನಿಂದ ಮುಂದಿನ ಒಂದು ನಿಲ್ದಾಣಕ್ಕೆ ಹೋದರೆ ಟೋಕನ್ 10ರೂ ಪಾವತಿಸಬೇಕು. ಪುಷ್ಪ ಪ್ರದರ್ಶನಕ್ಕೆ ಬರುವವರು ಸಮೀಪದ ನಿಲ್ದಾಣಗಳಿಗೆ ಹೋಗಲು ಪೇಪ್ ಟಿಕೆಟ್ ಖರೀದಿಸಿದರೆ ನಷ್ಟ ಹೊಂದಬೇಕಾಗುತ್ತದೆ. ಪೇಪರ್ ಟಿಕೆಟ್ ಖರೀದಿಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿರುವುದು ಈ ಸೌಲಭ್ಯದ ಮತ್ತೊಂದು ಸಮಸ್ಯೆಯಾಗಿದೆ.












Click it and Unblock the Notifications