• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಡಾ ಪೂರ್ವಿ ಜಯರಾಜ್‌

|

ಬೆಂಗಳೂರು ಮಾರ್ಚ್‌ 23: ಕೋವಿಡ್‌ 19 ಸಂಕಷ್ಟ ಕಾಲದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಖ್ಯಾತ ವೈದ್ಯೆ ಡಾ ಪೂರ್ವಿ ಜಯರಾಜ್‌ ಹೇಳಿದ್ದಾರೆ.

ನಗರದ ಖಾಸಗಿ ಹೋಟೇಲ್‌ನಲ್ಲಿ ಲಯನ್ಸ್‌ ಕ್ಲಬ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್‌ 317ಎ ವತಿಯಿಂದ ಆಯೋಜಿಸಲಾಗಿದ್ದ ಪ್ರಾಂತೀಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೋವಿಡ್‌ ಸಾಂಕ್ರಾಮಿಕ ರೋಗದ ಕಾರಣವಾಗಿ ಹಲವಾರು ಜನರು ಡಿಪ್ರೆಷನ್‌ ಹಾಗೂ ಒತ್ತಡಕ್ಕೆ ಒಳಗಾಗುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಟ್ಟುಕೊಳ್ಳುವುದು ಬಹಳ ಮುಖ್ಯ ವಿಷಯವಾಗಿದೆ. ಮಾನಸಿಕವಾಗಿ ಆರೋಗ್ಯವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರಿಂದ ದೈಹಿಕವಾಗಿಯೂ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಲಯನ್ಸ್‌ ಕ್ಲಬ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್‌ 317ಎ ವತಿಯಿಂದ ಆಯೋಜಿಸಲಾಗಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌, ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಮಷಿನ್‌ ಹಾಗೂ ಶುದ್ದು ಕುಡಿಯುವ ನೀರು ಒದಗಿಸುವ ಆರ್‌ ಓ ವಾಟರ್‌ ಪ್ಯೂರಿಫೈರ್‌ಗಳನ್ನು ವಿತರಿಸಿ ಮಾತನಾಡಿದ ರೀಜನ್‌ ಚೇರ್‌ ಪರ್ಸನ್‌ ಲಯನ್‌ ಡಾ. ಸತ್ಯವತಿ ಬಸವರಾಜು, ಲಯನ್ಸ್‌ ಕ್ಲಬ್‌ ವತಿಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಕಳೆದ ಕೆಲವು ತಿಂಗಳ ಹಿಂದೆ ಕನಕಪುರದಲ್ಲಿ ಕಲ್ಯಾಣೀಯನ್ನ ಶುದ್ದೀಕರಿಸಿ ಪುನಶ್ಚೇತನ ಮಾಡಿದ್ದೇವೆ. ನಮ್ಮ ರೀಜನ್‌ ವತಿಯಿಂದ ಸಮಾಜಮುಖಿಯಾದ ಇನ್ನು ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

   ಮಹಾರಾಷ್ಟ್ರಕ್ಕೆ ತೆರಳುವ ಮತ್ತು ಬೆಳಗಾವಿಗೆ ಬರುವ 120 ಬಸ್‌ಗಳ ಸಂಚಾರ ತಾತ್ಕಾಲಿಕ ಸ್ಥಗಿತ | Oneindia Kannada

   ಕಾರ್ಯಕ್ರಮದಲ್ಲಿ ಪಿಎಂಜೆಏಫ್‌ ಡಿಸ್ಟಿಕ್ಟ್ರ ಗವರ್ನರ್‌ ಲಯನ್‌ ಡಾ. ಜಿ ಎ ರಮೇಶ್‌, ಪಿಎಂಜೆಎಫ್‌ ಲಯನ್‌ ಡಾ.ಪ್ರಭಾ ಮೂರ್ತಿ, ಎಂಜೆಎಫ್‌ ಲಯನ್‌ ಡಾ ಶ್ರೀವಿದ್ಯಾ ಸೇರಿದಂತೆ ಹಲವು ಉಪಸ್ಥಿತರಿದ್ದರು.

   English summary
   Mental health is more important during Covid19 situation said Dr Purvi Jayaraj.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X