ಕಾವೇರಿ ಸಮಸ್ಯೆಗೆ 'ಮೇಕೆದಾಟು' ಒಂದೇ ಪರಿಹಾರ: ತಮಿಳುನಾಡು ಯೋಜನೆಯ ಪ್ರಯೋಜನ ಅರಿಯಲಿ: ಎಂಬಿ ಪಾಟೀಲ

ಬೆಂಗಳೂರು: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಒಳ್ಳೆಯ ಮಳೆಯೇ ಆಗಿಲ್ಲ. ಹೀಗಾಗಿ ಈ ವ್ಯಾಪ್ತಿಯ ಜಲಾಶಯಗಳಲ್ಲಿ ನೀರಿಲ್ಲ. ಹೀಗಿರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 4.50 ಟಿಎಂಸಿ ನೀರು ಹರಿಸುವಂತೆ ರಾಜ್ಯಕ್ಕೆ ಹೇಳಿರುವುದು ಸರಿಯಲ್ಲ. ರಾಜ್ಯದಲ್ಲೇ ನೀರಿಲ್ಲ ಸ್ಥಿತಿ ಇದ್ದು, ಆ ರಾಜ್ಯಕ್ಕೆ ನೀರು ಬಿಡುವುದಾದರೆ ಹೇಗೆ? ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು CWRC ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿ CWRC ಆದೇಶಿಸಿದೆ. ಇದರ ಬೆನ್ನಲ್ಲೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ಅವರು, ಕಾವೇರಿ ನೀರಿನ ವಿಚಾರ ಒಂದು, ಕಡೆ ಮೇಕೆದಾಟು ಯೋಜನೆ ವಿರೋಧಿಸುವ ತಮಿಳುನಾಡು ಯೋಜನೆಯಿಂದಾಗುವ ಪ್ರಯೋಜನವನ್ನು ಅರಿಯಬೇಕು ಎಂದು ತಿಳಿಸಿದ್ದಾರೆ.

Mekedatu Project

ನೀರಿನ ಸಂಕಷ್ಟಕ್ಕೆ ಮೇಕೆದಾಟು ನಿರ್ಮಾಣವೇ ಉತ್ತರ

ಉತ್ತಮವಾಗಿ ಮಳೆಯಾದರೆ ಕಾವೇರಿ ನೀರಿನ ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಬರುವುದಿಲ್ಲ. ಅಂತಹ ವರ್ಷಗಳಲ್ಲಿ ನಾವು ನಿಗದಿತ 177 ಟಿಎಂಸಿಗಿಂತ ಹೆಚ್ಚು ನೀರನ್ನೇ ತಮಿಳುನಾಡಿಗೆ ಹರಿಸುತ್ತಿದ್ದೇವೆ. ಆದರೆ ಬರಗಾಲ ಬಂದಾಗ ಯಾವ ಸಂಕಷ್ಟ ಸೂತ್ರವೂ‌ ಇಲ್ಲ. ಇದಕ್ಕೆಲ್ಲ ಮೇಕೆದಾಟು ಜಲಾಶಯ ನಿರ್ಮಾಣವೇ ಉತ್ತರ ಎಂದು ಅವರು ಪ್ರತಿಪಾದಿಸಿದರು.

65 ಟಿಎಂಸಿ ನೀರು ಸಂಗ್ರಹಿಸುವ ಅಗತ್ಯತೆ

ಕಾವೇರಿ ನೀರು ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನಮಗೆ ಹೆಚ್ಚುವರಿಯಾಗಿ ಸಿಕ್ಕಿದ 14 ಟಿಎಂಸಿ ನೀರೂ ಸೇರಿ ಒಟ್ಟು 65 ಟಿಎಂಸಿ ನೀರನ್ನು ನಾವು ಸಂಗ್ರಹಿಸಿ ಇಟ್ಟುಕೊಳ್ಳಲು ವ್ಯವಸ್ಥೆ ಬೇಕಾಗಿದೆ. ಹೀಗಾಗಿ ನಾನು ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗಲೇ ಮೇಕೆದಾಟು ಯೋಜನೆಯ ಪರಿಕಲ್ಪನೆ ಬಂದಿದೆ. ಯೋಜನೆ ಅನುಷ್ಠಾನದಿಂದ ತಮಿಳುನಾಡಿಗೂ ಪ್ರಯೋಜನವಿದೆ. ಆದರೆ ಅಲ್ಲಿಯ ಆಂತರಿಕ ರಾಜಕಾರಣವು ಇದಕ್ಕೆ ಆಸ್ಪದ ಕೊಡುತ್ತಿಲ್ಲ. ಇದರ ಬದಲು ಅವರು ಮೇಕೆದಾಟು ಜಲಾಶಯದಿಂದ ತಮಿಳುನಾಡಿಗೂ ಲಾಭವಿದೆ ಎನ್ನುವ ಸರಳ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದೆ ಜಲ ಸಂಪನ್ಮೂಲ ಖಾತೆಯನ್ನೂ ನಿರ್ವಹಿಸಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಈಗಿನ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕೂತು, ಈಗಿನ ಬಿಕ್ಕಟ್ಟಿಗೆ ಪರಿಹಾರವನ್ನು ಹುಡುಕಲಿದ್ದಾರೆ. ಕೇಂದ್ರ ಸರ್ಕಾರದ ಸಮಿತಿ ಕೂಡ ಈಗಿನ‌ ನೀರು ಸಂಗ್ರಹಣೆಗೆ ಸಂಬಂಧಿಸಿದ ವಿಡಿಯೋ ಮತ್ತು ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಪಾಟೀಲ ಒತ್ತಾಯಿಸಿದರು.

ಮಾತು ಹಿಂಪಡೆಯಲು ಸಿಎಂ ವಿಜಯ್ ಮನವಿ

ಇತ್ತೀಚೆಗೆ ಕರ್ನಾಟಕ ಭಾಗದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡಿನ ಅನುಮತಿ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಮೊದಲಿನಿಂದಲೂ ಕಾವೇರಿ ನೀರಿನ ವಿಚಾರದಲ್ಲಿ ಖ್ಯಾತೆ ತೆಗೆಯುವ ತಮಿಳುನಾಡು, ಮೇಕೆದಾಟು ಯೋಜನೆ ಸಾಕಾರಕ್ಕೂ ಅಡ್ಡಿಗಾಲು ಹಾಕಿದೆ. ಹೀಗಿರುವಾಗ ಕೇಂದ್ರದ ಮಾತು ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎನ್ನುವಾಗಲೇ ತಮಿಳುನಾಡಿನ ಅನುಮತಿ ಬೇಕಿಲ್ಲ ಎಂಬ ಮಾತು ಹಿಂಪಡೆಯುವಂತೆ ತಮಿಳನಾಡು ಸಿಎಂ ಸಿ.ವಿಜಯ್ ಜೋಸೆಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆ ಮನವಿ ಮಾಡಿದ್ದಾರೆ. ನದಿ ಪಾತ್ರದ ಜನರ ಒಪ್ಪಿಗೆ ಇಲ್ಲದೇ ಯೋಜನೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಿಂದ ಮೇಲ್ಮನವಿ

ಕಾವೇರಿ ನೀರನ್ನು ತಮಿಳುನಾಡಿಗೆ 15 ದಿನ ಹರಿಸುವಂತೆ ನಿರ್ಹವಣಾ ಪ್ರಾಧಿಕಾರ (CWMA) ಆದೇಶಿಸಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪಿಸಿದ್ದು, ನಮ್ಮ ರಾಜ್ಯದಲ್ಲೇ ನೀರಿಲ್ಲದೇ, ಬರ ಪರಸ್ಥಿತಿ ಇದೆ. ಹೀಗಿದ್ದಾಗ ನೀರು ಬಿಡುವುದಾದರೂ ಹೇಗೆ ಎಂದಿರುವ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+