ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುಷಾ ಮೂರ್ತಿ ಎಂಬ ಅಪ್ಪಟ ಕನಸುಗಾರ್ತಿ

By ಮಲೆನಾಡಿಗ
|
Google Oneindia Kannada News

ಪ್ರತಿದಿನ ಬೀಳುವ ಕನಸಿನಲ್ಲಿ ಸಿಗುವ ಕಲ್ಪನೆಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ಕಥೆಯಾಗಿ ವಿಸ್ತರಿಸುವ ಸುಖಾನುಭವವೇ ಬೇರೆ. ಕನಸು ಕಲ್ಪನೆಗಳ ಲೋಕದಲ್ಲಿ ತೇಲುತ್ತಾ ತನ್ನದ ಆದ ಊಹಾ ಪ್ರಪಂಚದಲ್ಲಿ ಸಿಗುವ ಹೊಸ ಪಾತ್ರಗಳನ್ನು ಕಾದಂಬರಿ ರೂಪದಲ್ಲಿ ಆಕೆ ತಂದಾಗ ಇನ್ನೂ 6ನೇ ತರಗತಿ ಪರೀಕ್ಷೆ ಮುಗಿದಿರಲಿಲ್ಲ. ಮೊದಲ ಕಾದಂಬರಿ ಬರೆದು ಮುಗಿಸಿ ಅದು ಪ್ರಕಟಗೊಂಡಾಗ ಅಕೆ 10ನೇ ತರಗತಿ ಓದುತ್ತಿದ್ದಳು. 'ಮೆಡೂಸಾ' ಎಂಬ ಕಾದಂಬರಿ ಮೂಲಕ ಅನುಷಾ ಎಂಬ ಬೆಂಗಳೂರಿನ ಹುಡುಗಿ ಅತ್ಯಂತ ಕಿರಿಯ ಇಂಗ್ಲೀಷ್ ಕಾದಂಬರಿಗಾರ್ತಿ ಎಂಬ ಪಟ್ಟಕ್ಕೇರಿಬಿಟ್ಟಳು.

ಸರಿ ಸುಮಾರು ದಶಕದ ನಂತರ ಅನುಷಾ ಮತ್ತೆ ತಮ್ಮ ಮನಸ್ಸಿನ ಭಾವನೆಗಳನ್ನು ಪ್ರತಿಬಿಂಬವಾಗಿಸಿ ಓದುಗರತ್ತ ಹಿಡಿದಿದ್ದಾರೆ 'ಮೀ' ಎಂಬ ಹೆಸರಿನಲ್ಲಿ ಎರಡನೇ ಕೃತಿಯನ್ನು ಹೊರತರುತ್ತಿದ್ದಾರೆ. ಮೊದಲನೇ ಕೃತಿ ಬರೆದಾಗ ಇದ್ದ ಹಿಂಜರಿಕೆ, ಮುಗ್ಧ ಭಾವನೆ ಈಗಲೂ ಈಕೆಯಲ್ಲಿದೆ. ಕಿರಿಯ ವಯಸ್ಸಿನ ಕಾದಂಬರಿಗಾರ್ತಿ ಎಂಬ ಹೆಗ್ಗಳಿಕೆ ಬೆನ್ನ ಹಿಂದಿಟ್ಟುಕೊಂಡಿದ್ದರೂ ಬೀಗದೆ ಹೊಸತನ ಕಾದಂಬರಿಯನ್ನು ನೀಡಲು ಮುಂದಾಗಿದ್ದಾರೆ ಅನುಷಾ ಕೃಷ್ಣಮೂರ್ತಿ.

ಮೊದಲ ಕಾದಂಬರಿ ಹೊರ ಬಂದಾಗ ನನಗಿನ್ನೂ 15 ತುಂಬಿರಲಿಲ್ಲ. ಎರಡನೇ ಕಾದಂಬರಿ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಏಕೆಂದರೆ ಇದರಲ್ಲಿ ನನ್ನನ್ನೇ ನಾನು ಕಾಣುತ್ತಿದ್ದೇನೆ. 2005ರಲ್ಲಿ Medusa-a good,a bad,a secret ಪ್ರಕಟಗೊಂಡಿತು. ಇದರ ಜತೆಗೆ ದಿ ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್, ವಿಜಯ ಕರ್ನಾಟಕ, ಕನ್ನಡಪ್ರಭ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ನನ್ನ ಕವನಗಳು ಪ್ರಕಟಗೊಂಡಿವೆ. ಸತತ ಬರವಣಿಗೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎನ್ನುತ್ತಾರೆ. ಇವರ ಎರಡನೇ ಕಾದಂಬರಿ 'Me' ಮಾರ್ಚ್ ವೇಳೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಕನ್ನಡದ ಹುಡುಗಿ ಇಂಗ್ಲೀಷ್ ಕಾದಂಬರಿಗಾರ್ತಿ ಅನೂಷಾ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

ಅತ್ಯಂತ ಕಿರಿಯ ಇಂಗ್ಲೀಷ್ ಕಾದಂಬರಿಗಾರ್ತಿ

ಅತ್ಯಂತ ಕಿರಿಯ ಇಂಗ್ಲೀಷ್ ಕಾದಂಬರಿಗಾರ್ತಿ

ಅನುಷಾ 6ನೇ ಕ್ಲಾಸಿನಲ್ಲಿ ಮೆಡೂಸಾ ಕಾದಂಬರಿ ಬರೆದು 2005ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಪ್ರಕಟಣೆಯಾಗಿ ಸುದ್ದಿಯಾಯ್ತು. ಅತ್ಯಂತ ಕಿರಿಯ ಇಂಗ್ಲೀಷ್ ಕಾದಂಬರಿಗಾರ್ತಿ ಎಂಬ ಕೀರ್ತಿಯೂ ಸಿಕ್ಕಿತು.

ಕನ್ನಡ ವಾತಾವರಣದಲ್ಲಿ ಬೆಳೆದ ಹುಡುಗಿ ಇಂಗ್ಲೀಷ್ ಕಾದಂಬರಿ ಬರೆದಿದ್ದು ಕೊಂಡು ಅನೇಕ ಮಂದಿ ಅಚ್ಚರಿಗೊಂಡರು. ಬೆಂಗಳೂರಿನ ಸೈಂಟ್ ಜಾನ್ ಹೈಸ್ಕೂಲ್ ನಲ್ಲಿ ಹಾಗೂ ನ್ಯಾಷನಲ್ ಕಾಲೇಜ್ ಬಸವನಗುಡಿ ಸೇರಿದ ಮೇಲೂ ಬರವಣಿಗೆ ಮುಂದುವರೆಯಿತು. ಅನುಷಾ ಅವರ ಅಮ್ಮ ಗೃಹಿಣಿಯಾಗಿದ್ದು, ತಂದೆ ಕೃಷ್ಣಮೂರ್ತಿ ಕನ್ನಡ ಕಿರುತೆರೆಯಲ್ಲಿ ಸೀರಿಯಲ್ ನಿರ್ದೇಶಕರಾಗಿದ್ದಾರೆ.

2011ರಲ್ಲಿ ಬಿ.ಇ ಎಲೆಕ್ಟ್ರಾನಿಕ್ಸ್ ಮುಗಿಸಿದ ಅನುಷಾ ತಯಾನಾ ಸಾಫ್ಟ್ ವೇರ್ ಸಲ್ಯೂಷನ್ಸ್ ನಲ್ಲಿ ಉದ್ಯೋಗಿಯಾಗಿದ್ದರು. ನಂತರ ಬರವಣಿಗೆಯೇ ನನ್ನ ಬದುಕು ಎಂಬ ಆಶಯ ಹೊತ್ತುಕೊಂಡು ಒನ್ ಇಂಡಿಯಾ ಸಂಸ್ಥೆ ಸೇರಿಕೊಂಡಿದ್ದಾರೆ. ಒನ್ ಇಂಡಿಯಾ ಸಂಸ್ಥೆಯ ಎಜುಕೇಷನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಷಾಗೆ ಸಸ್ಪೆನ್ಸ್ ಚಿತ್ರಗಳು ತುಂಬಾ ಇಷ್ಟ. ಇದು ಅವರ ಕೃತಿಗಳಲ್ಲೂ ಕಾಣಬಹುದಾಗಿದೆ.

ಅನುಷಾಗೆ ಸಿಕ್ಕಿರುವ ಗೌರವ ಮನ್ನಣೆ

ಅನುಷಾಗೆ ಸಿಕ್ಕಿರುವ ಗೌರವ ಮನ್ನಣೆ

* ಶಿವಮೊಗ್ಗದಲ್ಲಿ ನಡೆದ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮಿತ್ರರು ಆಯೋಜಿಸಿದ್ದ 'ದಶಕದ ಶ್ರೇಷ್ಠ ಪುಸ್ತಕಗಳು' ಸ್ಪರ್ಧೆಯಲ್ಲಿ ಅನುಷಾ ಅವರ ಮೆಡೂಸಾ ಕೃತಿಯೂ ನಾಮಾಂಕಣಗೊಂಡಿತ್ತು.
* 2 ಕಾದಂಬರಿ ಜತೆಗೆ 30 ಕ್ಕೂ ಕವನಗಳು, 25ಕ್ಕೂ ಹೆಚ್ಚು ಸಣ್ಣಕಥೆಗಳನ್ನು ರಚಿಸಿದ್ದಾರೆ.
* ಅಪ್ಪಟ ಕನ್ನಡತಿಯಾದರೂ ಇಂಗ್ಲೀಷ್ ನಿರರ್ಗಳವಾಗಿ ಅಕ್ಷರ ರೂಪದಲ್ಲಿ ಹೊರಹೊಮ್ಮಿಸಬಲ್ಲರು.
* ವಿಶ್ವೇಶ್ವರಯ್ಯ ಯುವ ಪ್ರತಿಭೆ ಪುರಸ್ಕಾರ

ಏಕಾಂತಕ್ಕಿಂತ ದೊಡ್ಡ ಸಂಗಾತಿಯಿಲ್ಲ : ಅನುಷಾ

ಏಕಾಂತಕ್ಕಿಂತ ದೊಡ್ಡ ಸಂಗಾತಿಯಿಲ್ಲ : ಅನುಷಾ

ಏಕಾಂತ ಬದುಕಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸಿದೆ. ಚಿಕ್ಕಂದಿನಿಂದ ನಾನು ಅಕ್ಕಪಕ್ಕದ ಮನೆಯವರ ಜತೆ ಬೆರೆಯುತ್ತಿದ್ದದ್ದು ಕಡಿಮೆ. ಅಪ್ಪ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ತುಂಬಾ ತಡವಾಗುತ್ತಿತ್ತು. ಅಮ್ಮ ಕೆಲವೊಮ್ಮೆ ನೆಂಟರಿಷ್ಟರ ಮನೆಗೆ ಹೋಗಿರುತ್ತಿದ್ದರು. ಆಗೆಲ್ಲ ನಾನು ನನ್ನ ರೂಮಿನಲ್ಲಿ ಕುಳಿತು ಬರೆಯಲು ಆರಂಭಿಸಿದೆ.

ನಾಗರಭಾವಿ ಬಳಿ ಇದ್ದ ಮನೆಯ ಹತ್ತಿರ ನನಗೆ ಹೆಚ್ಚಿನ ಗೆಳೆಯ ಗೆಳತಿಯರಿರಲಿಲ್ಲ. ಹೀಗಾಗಿ ನಾನು ಯೋಚಿಸಿದ್ದು, ಚಿಂತಿಸಿದ್ದು ಎಲ್ಲವೂ ನನ್ನ ಬಗ್ಗೆ ಬದುಕಿನ ಬಗ್ಗೆ ಬರವಣಿಗೆಯ ಬಗ್ಗೆ ಮಾತ್ರ. ಹೀಗಾಗಿ ನನ್ನ ಕೃತಿಗಳಲ್ಲಿ ಬದುಕಿನ ಬಗ್ಗೆ ಹೆಚ್ಚು ಒತ್ತು ನೀಡಿರುವುದು ಕಂಡು ಬರುತ್ತದೆ.

ಮೆಡೂಸಾ ಸುಮಾರು 280 ಪುಟ ದಾಟಿತ್ತು ಕೊನೆಗೆ ಪ್ರಿಂಟ್ ಆದಾಗ 94 ಪುಟಕ್ಕಿಳಿಯಿತು. ಮೆಡೂಸಾ ಓದಿದವರು ಆರಂಭದಲ್ಲಿ ಇದು ಹ್ಯಾರಿ ಪಾಟರ್ ಮಾದರಿಯ ಕಲ್ಪನೆ ಕಥೆ ಆಧಾರಿತವೇ ಎಂದರು. ಆದರೆ, ಕಥೆ ಓದುತ್ತಾ ಹೋದಂತೆ ಫ್ಯಾಂಟಸಿ ಮಾಯವಾಗಿ ಪಾತ್ರಗಳು ಜನರ ಮನಸ್ಸು ಮುಟ್ಟಿತು.

ನನ್ನ ಕಾದಂಬರಿ ನನ್ನ ಪ್ರತಿಬಿಂಬ

ನನ್ನ ಕಾದಂಬರಿ ನನ್ನ ಪ್ರತಿಬಿಂಬ

ಎರಡನೇ ಕಾದಂಬರಿ ಜನರ ಮನಸ್ಸು ಮುಟ್ಟುವಂತೆ ಎಂಬ ನಂಬಿಕೆಯಿದೆ ಎನ್ನುತ್ತಾರೆ. ಅವರ 'ಮೀ' ಕಾದಂಬರಿ ಸಾರಾಂಶ ಇಲ್ಲಿದೆ.

"She has no clue whatsoever so it won't matter describing things about her anyway! But her desire to find things out creates path for her to meet a man she thinks is a bear in a human form. There is someone she knows who is watching her all the time. There are people who speak invariably about her! Strangely she can't seem to see them! She finds herself dusting away a bug or two... someone who isn't there touches her at odd times and she can't seem to stand all this. Was she cursed by a wicked witch or was someone playing about and making a fool out of her? She decides this hairy man she has met can help her. But she has to think... is the man really helping her or plotting things against her?

Never had anyone who knew him better had thought that he could help anyone. Not even his own self! From his days as a kid who was thoroughly bullied and laughed at, to his days as a "firangi-baba" where he made money lying to people in distress and was proud of the fact that he had morphed into an individual who could take care of himself... he had come a long way. His desire to help someone else just to let him know for himself that he was worth something in life that the others did not reckon he might be creates a path for him to meet a girl who utterly needs help. In the bargain between helping her and proving his worth and finding himself in the middle of a mystery he ends up with something that he has no idea about!"

ಅನುಷಾ, ಹರ್ಷಿತಾ ಮುಂದುವರೆಯಲಿ ಪರಂಪರೆ

ಅನುಷಾ, ಹರ್ಷಿತಾ ಮುಂದುವರೆಯಲಿ ಪರಂಪರೆ

ಹಲವು ವರ್ಷಗಳ ಅನುಷಾ ಹೊಂದಿದ್ದ 'ಕಿರಿಯ ಕಾದಂಬರಿಗಾರ್ತಿ ಪಟ್ಟ'ವನ್ನು ಕೆಲ ವರ್ಷಗಳ ಹಿಂದೆ ಹರ್ಷಿತಾ ಮಗ್ದುಮ್ ಮುರಿದಿದ್ದರು.

ಬೆಂಗಳೂರಿನ ಯಲಹಂಕದ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ (2010). ಆದರೆ ಈ ಬಾಲೆ ಭಾರತದ ಅತ್ಯಂತ ಕಿರಿಯ ಕಾದಂಬರಿಗಾರ್ತಿ ಎಂಬ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದ್ದರು. ಬೆಂಗಳೂರು ಪುಸ್ತಕೋತ್ಸವದಲ್ಲಿ ಹರ್ಷಿತಾ ಕಾದಂಬರಿ ಬಗ್ಗೆ ಹೆಚ್ಚಿನ ಪ್ರಚಾರ ಸಿಕ್ಕಿತ್ತು.

ಮೂರನೆ ತರಗತಿಯಲ್ಲಿ ಓದುವಾಗ ಹರ್ಷಿತಾಳಿಗೆ ಕಾದಂಬರಿ ಬರೆಯುವ ಹವ್ಯಾಸ ಹುಟ್ಟುಕೊಂಡಿದ್ದು, ಅನುಷಾರಂತೆ ಕಾದಂಬರಿ ಹೊರ ಬೀಳುವ ಹೊತ್ತಿಗೆ ಹರ್ಷಿತಾ 9ನೇ ತರಗತಿಯಲ್ಲಿದ್ದರು. ದೈನಂದಿನ ಘಟನೆಗಳೇ ಕಾದಂಬರಿ ಬರೆಯಲು ಪ್ರೇರಣೆ ಎಂದು ಹರ್ಷಿತಾ ಹೇಳಿಕೊಂಡಿದ್ದರು. ಹರ್ಷಿತಾ, ಅನುಷಾರಂಥ ಬೆಂಗಳೂರಿನ ಪ್ರತಿಭೆಗಳು ಇನ್ನಷ್ಟು ಬೆಳೆಯಲಿ.

English summary
I had my first novel out when I was 15... working like crazy on the second! I identify myself when I write says Karnataka's youngest English Novelist Anusha K Murthy. Anusha's first novel Medusa-a good,a bad,a secret, published in 2005 in Karnataka. Now Anusha is ready with her second novel "Me'. Here is brief introduction to Oneindia Education employee Anusha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X