ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಆರ್ ಸಿಎಲ್ ನೌಕರರು ಹಾಗೂ ಅಧಿಕಾರಿಗಳ ಸಂಧಾನ ಸಭೆ

|
Google Oneindia Kannada News

ಬೆಂಗಳೂರು, ಮಾರ್ಚ್ 26: ಬಿಎಂಆರ್ ಸಿಎಲ್ ನೌಕರರು ಹಾಗೂ ಅಧಿಕಾರಿಗಳ ನಡುವೆ ಇಂದು(ಮಾ.26) ಬಿಎಂಆರ್ ಸಿಎಲ್ ಕಾರ್ಮಿಕರ ಮುಷ್ಕರ ಹಾಗೂ ಅವರ ಬೇಡಿಕೆಗಳ ವಿಚಾರವಾಗಿ ಸಂಧಾನ ಸಭೆ ನಡೆಯಲಿದೆ.

ಬಿಎಂಆರ್ ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು, ವೇತನ ಪರಿಷ್ಕರಣೆ, ಕನ್ನಡಿಗರು ಹಾಗೂ ಹಿಂದಿ ಭಾಷಿಕರ ನಡುವೆ ತಾರತಮ್ಯ ನಿಲ್ಲಿಸುವೂ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ನೌಕರರು ಮುಷ್ಕರ ನಡೆಸಲು ತೀರ್ಮಾನಿಸಿದ್ದರು.

ಮಾರ್ಚ್ 22ರಂದು 'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರವಿಲ್ಲ ಮಾರ್ಚ್ 22ರಂದು 'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರವಿಲ್ಲ

ಆದರೆ, ಹೈಕೋರ್ಟ್ ಸೂಚನೆ ಮೇರೆಗೆ ಮುಷ್ಕರವನ್ನು ಸದ್ಯಕ್ಕೆ ನಡೆಸದಿರಲು ತೀರ್ಮಾನಿಸಿದ್ದ ನೌಕರರು, ಸಂಧಾನ ಮಾಡಿಕೊಂಡು ಸಮಸ್ಯೆ ಬಗೆ ಹರಿಸಿಕೊಳ್ಳಲು ಮುಂದಾಗಿದ್ದಾರೆ.

Mediation meeting between BMRCL officers and workers today

ಈಗಾಗಲೇ ಬಿಎಂಆರ್ ಸಿಎಲ್ ಕಚೇರಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿದೆ. ಕೇಂದ್ರ ಕಾರ್ಮಿಕ ಆಯೋಗದ ನೇತೃತ್ವದಲ್ಲಿ ಎರಡು ಬಾರಿ ಸಭೆ ನಡೆದಿದೆ.ಆದರೂ ಈ ಸಭೆಗಳಲ್ಲಿ ಯಾವುದೇ ನಿರ್ಧಾರ ಸಾಧ್ಯವಾಗಿಲ್ಲ. ಸೋಮವಾರದಿಂದ ವಾರಕ್ಕೆ ಮೂರು ಸಭೆ ಮಾಡಿ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೊದಲ ಸಭೆಯಲ್ಲಿ ಮಾಡತುಕತೆ ಯಶಸ್ವಿಯಾಗಬಹುದು ಎಂದು ನೌಕರರು ನಿರೀಕ್ಷಿಸಿದ್ದಾರೆ. ಈ ಬಾರಿ ಹೈಕೋರ್ಟ್ ಸೂಚನೆಯಂತೆ ಸಭೆ ನಡೆಯುತ್ತಿದ್ದು ನೌಕರರ ಸಂಘದ ಮುಖಂಡರು ಪಾಲ್ಗೊಳ್ಳಲಿದ್ದಾರೆ.

English summary
After High court order BMRCL officers and workers initiated edition meeting with metro workers. It is related to BMRCL workers association, contract labour system etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X