ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕಾಗಿ ಈ ಹೊಸ ಜಾಗದಲ್ಲಿ ಡ್ರೋನ್ ಸರ್ವೇ, ಹೇಗಿದೆ ತಯಾರಿ?
ಇನ್ನೂ ಕಗ್ಗಂಟಾಗಿ ಉಳಿದಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜಾಗದ ವಿಚಾರವು ಗೊಂದಲದ ಗೂಡಾಗಿದೆ. ಆದರೆ ಸದ್ದಿಲ್ಲದೆ ಹಲವು ಜಾಗಗಳನ್ನು ಹೊಸ ಏರ್‌ಪೋರ್ಟ್‌ಗಾಗಿ ಗುರುತಿಸುವ ಕೆಲಸವಂತೂ ನಿಂತಿಲ್ಲ. ಮೊದಲಿಗೆ ಕನಕಪುರ ರಸ್ತೆ ಹಾಗೂ ಕುಣಿಗಲ್ ಬಳಿಯ ಜಾಗಗಳು ಶಾರ್ಟ್‌ಲಿಸ್ಟ್ ಆಗಿದ್ದವು. ಇದೀಗ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಗ್ರಾಮೀಣ ಭಾಗವೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಏನೆಲ್ಲ ತಯಾರಿ ನಡೆಯುತ್ತಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ..
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಬಳಿ ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಿಸಬೇಕು ಎಂಬ ಚರ್ಚೆಗಳು ಶುರುವಾಗಿವೆ. ಇದಕ್ಕೆ ಪೂರಕವಾಗಿ ಸೋಲೂರು ಹೋಬಳಿ ಬಳಿ ಗ್ರಾಮಗಳಲ್ಲಿ ಡ್ರೋನ್ ಸರ್ವೇ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇಲ್ಲಿ ಗ್ರಾಮಗಳ ಮೇಲೆ ಡ್ರೋನ್‌ಗಳ ಹಾರಾಟ ಹೆಚ್ಚಾಗಿದ್ದು, ಏರ್‌ಪೋರ್ಟ್‌ಗೆ ಸ್ಥಳ ಗುರಿತಿಸುವ ಕೆಲಸ ಭರದಿಂದ ಸಾಗಿದೆ ಎಂದು ವರದಿಯಾಗಿದೆ.

ಸೋಲೂರು ಭಾಗದಲ್ಲಿ ಬೀಡುಬಿಟ್ಟಿರುವ ಅಧಿಕಾರಿಗಳ ತಂಡವು ಇಲ್ಲಿನ ಹಳ್ಳಿಗಳ ಮೇಲೆ ಪ್ರತಿನಿತ್ಯವೂ ಸರ್ವೇಗಾಗಿ ಡ್ರೋನ್ ಹಾರಿಸುತ್ತಿದ್ದಾರೆ. ಅಲ್ಲದೆ ಹಲವು ಕಡೆಗಳಲ್ಲಿ ಬಿಳಿ ಬಣ್ಣದಲ್ಲಿ ಚೌಕಾಕಾರದ ಗುರುತುಗಳನ್ನು ಹಾಕಲಾಗುತ್ತಿದೆ. ಮತ್ತೊಂದೆಡೆ ಮಾಗಡಿ ಬಳಿಯ ಮೋಟಗಾನಹಳ್ಳಿ ಪಂಚಾಯಿತಿ ಸಮೀಪದ ಬಸವೇನಹಳ್ಳಿ, ದಾಸೇಗೌಡನ ಪಾಳ್ಯದ ರೈತರು ಇದಕ್ಕೆ ಭಾರಿ ವಿರೋಧವೂ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಯಾವ ಕಾರಣಕ್ಕೂ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದು ಈ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಮುಂದಾಗಿದ್ದಾರೆ.
ದೆಹಲಿಗೂ ಹೋಗಲು ಸಜ್ಜಾದ ರೈತರು
ಅಲ್ಲದೆ ಈ ಭಾಗದ ರೈತರು ವಿಮಾನ ನಿಲ್ದಾಣವನ್ನು ವಿರೋಧಿಸುತ್ತಿದ್ದು, ರಾಜ್ಯ ಸರ್ಕಾರದ ಭೂಸ್ವಾಧೀನ ನೀತಿ ಖಂಡಿಸಿ ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಲು ಕೂಡ ನಿರ್ಧರಿಸಿದ್ದಾರೆ. ಯಾವ ಕಾರಣಕ್ಕೂ ಹಣದ ಆಮಿಷಗಳಿಗೆ ಒಳಗಾಗಬಾರದು, ನಮ್ಮ ಗ್ರಾಮ ಹಾಗೂ ಅನ್ನ ನೀಡುವ ಭೂಮಿಯನ್ನು ಉಳಿಸಿಕೊಳ್ಳಲು ಬೇಕಾದರೂ ದೆಹಲಿಗೂ ಹೋಗಲು ಸಿದ್ಧತೆ ನಡೆಸಿದ್ದಾರೆ. ಸ್ಥಳೀಯವಾಗಿ ರೈತ ಸಂಘಟನೆಗಳು, ಪರಿಸರವಾದಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ಕರೆಸಿ ಪ್ರತಿಭಟನೆ ನಡೆಸಲು ಕೂಡ ಕರಪತ್ರ ಹೊರಡಿಸಲಾಗಿದೆ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಹಾಗೂ ಇದಕ್ಕಾಗಿ ನಡೆಯುತ್ತಿರುವ ಸರ್ವೆಗೆ ತಡೆ ನೀಡಲು ಮಾತುಕತೆ ನಡೆಸಿದ್ದಾರೆ.

ಮಾಗಡಿಯ ಮೋಟಗಾನಹಳ್ಳಿ ಗ್ರಾಮ ಪಂಚಾಯಿತಿಯ ಕಾಟನಪಾಳ್ಯ, ಶ್ರೀರಾಮಪುರ ಕಾಲೊನಿ, ಬೆಟ್ಟಯ್ಯನಪಾಳ್ಯ, ಪುಟ್ಟಯ್ಯನ ಪಾಳ್ಯ. ಗುಡೆಮಾರನಹಳ್ಳಿ, ಪೆಮ್ಮನಹಳ್ಳಿ, ಬಸವನಹಳ್ಳಿ, ಕೋಡಿಹಳ್ಳಿ, ತಿರುಮಲಾಪುರ, ನಾಗನಹಳ್ಳಿ, ಹಕ್ಕಿನಾಳು ಕಾಲೊನಿ, ಶೆಟ್ಟಿ ಪಾಳ್ಯ, ಗರ್ಗೇಶಪುರ, ಬಾಳಯ್ಯನಪಾಳ್ಯ, ಗೆಜ್ಜೆಗಲ್ ಪಾಳ್ಯ, ಕಂಬೇಗೌಡನ ಪಾಳ್ಯ, ಹೊನ್ನಯ್ಯನ ಪಾಳ್ಯ, ದಾಸೇಗೌಡನ ಪಾಳ್ಯ, ಸುತ್ತೆಹಳ್ಳಿ ಪಾಳ್ಯ, ಮರಿಕುಪ್ಪೆ, ಕೆಂಪ ಚಿಕ್ಕನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಈ ಸರ್ವೇ ಕಾರ್ಯ ನಡೆಸಿ, ಚೌಕಾಕಾರದ ಗುರುತುಗಳನ್ನು ಹಾಕಿದ್ದಾರಂತೆ. ಸದ್ದಿಲ್ಲದೆ ಇಲ್ಲಿ ಏರ್‌ಪೋರ್ಟ್‌ಗಾಗಿ ಸ್ಥಳ ಗುರುತಿಸುವಿಕೆ ಕೆಲಸ ನಡೆಯುತ್ತಿದ್ದು, ಬಹುತೇಕ ಇದೇ ಜಾಗದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಮಾಸ್ಟರ್‌ಪ್ಲ್ಯಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ










Click it and Unblock the Notifications