ಜೆಲ್ಲಿ ರೂಪದಲ್ಲಿ ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ; ಇಬ್ಬರ ಬಂಧನ

ಬೆಂಗಳೂರು, ಸೆಪ್ಟೆಂಬರ್ 18 : ಮಾದಕ ವಸ್ತು ಲೇಪಿತ ಜೆಲ್ಲಿ, ಚಾಕ್ಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂತಹ ಜೆಲ್ಲಿಗಳು ಮಕ್ಕಳನ್ನು ಸುಲಭವಾಗಿ ಆಕರ್ಷಿಸುತ್ತವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಮಾರಿಜುನಾ ಮಾದಕ ವಸ್ತುವನ್ನು ಲೇಪನ ಮಾಡಿದ್ದ ಚಾಕ್ಲೇಟ್, ಜೆಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಾನ್ ನಿಕೋಲಸ್ ಹಾಗೂ ಇರ್ಫಾನ್ ಶೇಖ್ ಎಂದು ಗುರುತಿಸಲಾಗಿದೆ.

ಚಾಕ್ಲೇಟ್ ಮತ್ತು ಜೆಲ್ಲಿ ಲೇಪಿತ ಡ್ರಗ್ಸ್ ಮಾರಾಟ ಮಾಡುವ ಮೂಲಕ ಆರೋಪಿಗಳು ಮಕ್ಕಳನ್ನು ಸೆಳೆಯುತ್ತಿದ್ದರು. ಆರೋಪಿಗಳಿಂದ ಸುಮಾರು 4 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Marijuana Laced Jellies Sale 2 Drug Peddlers Arrested

ಬಂಧಿತ ಆರೋಪಿಗಳಿಂದ ಎಲ್‌ಎಸ್‌ಡಿ ಪೇಪರ್ಸ್, ಎಕ್ಸ್‌ಟೆಸಿ ಹಾಗೂ ಟಿಎಚ್‌ಸಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ಆರೋಪಿಗಳ ಬಂಧನವನ್ನು ಖಚಿತಪಡಿಸಿದ್ದಾರೆ.

ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಗುರುವಾರ 3 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. 90 ಕೆಜಿ ಮಾರಿಜುನಾ ಸೇರಿದಂತೆ 50 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+