Bengaluru Rain: ನಗರದಲ್ಲಿ ಬುಧವಾರ ಸಹ ವ್ಯಾಪಕ ಮಳೆ ಸಾಧ್ಯತೆ, ಆಗಸ್ಟ್ 26ರವರೆಗೆ ಭಾರೀ ಮಳೆ ಎಚ್ಚರಿಕೆ

ಬೆಂಗಳೂರು, ಆಗಸ್ಟ್ 21: ರಾಜ್ಯದ ವಿವಿಧ ಕಡೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಆಗಾಗ ದರ್ಶನ ಕೊಡುತ್ತಿದೆ. ಸಂಜೆ ಹೊತ್ತಿಗೆ ಶುರುವಾಗುವ ಜೋರು ಮಳೆಯಿಂದಾಗಿ ರಾತ್ರಿಯಿಡಿ ಸಮಸ್ಯೆ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ನಗರಾದ್ಯಂತ ವಾಟರ್‌ಲಾಗಿಂಗ್ ಸಮಸ್ಯೆಗೆ ಮುಕ್ತಿ ಯಾವಾಗ ಎಂದು ವಾಹನ ಸವಾರರು ಸೇರಿದಂತೆ ನಾಗರಿಕರು ಪ್ರಶ್ನಿಸಿದ್ದಾರೆ.

ಮಂಗಳವಾರ ಸಂಜೆಯಿಂದ ಇಂದು ಬುಧವಾರ ಬೆಳಗ್ಗೆವರೆಗೆ ನಗರದ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ದಾಖಲಾಗಿದೆ. ಈ ಪೈಕಿ ವಿ.ನಾಗೇನಹಳ್ಳಿಯಲ್ಲಿ ಅತ್ಯಧಿಕ ಮಳೆ (35mm) ದಾಖಲಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್‌ ಮಧ್ಯಭಾಗದಿಂದ ದೈನಂದಿನ ಮಳೆ ಮುಂದುವರಿಯುತ್ತಿದೆ. ಇಂದು ಬುಧವಾರ ಸಹ ಅಲ್ಲಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.

Many Roads Flooded Due Rain In Bengaluru Rain Will Continue Until August 26th Forecast

ಹವಾಮಾನ ಇಲಾಖೆ ಪ್ರಕಾರ, ಕರ್ನಾಟಕ ಕರಾವಳಿಯ ಪೂರ್ವ ಮಧ್ಯ ಅರೇಬಿಯನ್ ಸಮುದ್ರದಿಂದ ಮಾಲ್ಡೀವ್ಸ್ ಪ್ರದೇಶದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ಎತ್ತರದಲ್ಲಿ ಸುಳಿಗಾಳಿ ಸುತ್ತುವರಿದೆ. ಇನ್ನೂ ರಾಯಲಸೀಮಾ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ವರೆಗೆ ವಿಸ್ತರಣೆಗೊಳ್ಳುತ್ತಿದ್ದ ಸ್ಥಿತಿ ತಗ್ಗಿದೆ.

ಅಲ್ಲದೇ ರಾಯಲಸೀಮಾ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯಿಂದ ತಮಿಳುನಾಡಿನಾದ್ಯಂತ ಕೊಮೊರಿನ್ ಪ್ರದೇಶದವರೆಗೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ವರೆಗೆ ವಿಸ್ತರಿಸಿರುವ ಸ್ಟ್ರಪ್ ಸದ್ಯಕ್ಕೆ ಕಡಿಮೆ ತೀವ್ರತೆಯಿಂದ ಕೂಡಿದೆ. ಇದೆಲ್ಲ ಕಾರಣದಿಂದಾಗಿ ಬೆಂಗಳೂರು ಹಾಗೂ ರಾಜ್ಯದ ಇನ್ನಿತರ ಕಡೆಗಳಲ್ಲಿ ವ್ಯಾಪಕ ಮಳೆ ಕಾಣಬಹುದಾಗಿದೆ. ಮಳೆ ಬಂದು ನಿಂತರ ಬಳಿಕ ಸೆಕೆಯ, ಕರಾವಳಿಯಂತಹ ವಾತಾವರಣ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದೆ.

ನೆನ್ನೆಯಿಂದ ಇಂದು ಬೆಳಗ್ಗೆವರೆಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ, ರಸ್ತೆ ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗಿ ತೊಂದರೆ ಆಗಿದೆ. ವಾಹನ ಸವಾರರು ಹೈರಾಣಾಗಿದ್ದಾರೆ.

Many Roads Flooded Due Rain In Bengaluru Rain Will Continue Until August 26th Forecast

ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?

ನಗರದ ವಿ.ನಾಗೇನಹಳ್ಳಿ 35 ಮಿಲಿ ಮೀಟರ್, ಕೊಡುಗೇಹಳ್ಳಿ 30 ಮಿ.ಮೀ., ರಾಧಾಕೃಷ್ಣ ಟೆಂಪಲ್‌ವಾರ್ಡ್ 30ಮಿ.ಮೀ., ಎಚ್‌ಬಿಆರ್ ಬಡಾವಣೆ 18.5 ಮಿ.ಮೀ., ಬಾಣಸವಾಡಿ 18.5ಮಿ.ಮೀ., ಮನೋರಾಯನಪಾಳ್ಯ 17ಮಿ.ಮೀ., ಕುಶಾಲನಗರ 17ಮಿ.ಮೀ., ಕೆಂಗೇರಿ 15.5ಮಿ.ಮೀ., ರಾಜಮಹಲ್ ಗುಟ್ಟಹಳ್ಳಿ 13.5ಮಿ.ಮೀ., ದಯಾನಂದನಗರ 11.5 ಮಿ.ಮೀ. ಮತ್ತು ಆರ್‌ಆರ್‌ ನಗರ ಮತ್ತು ಕೆಂಗೇರಿಯಲ್ಲಿ ತಲಾ 11ಮಿಲಿ ಮೀಟರ್ ಮಳೆ ದಾಖಲಾಗಿದೆ.

ಬೆಂಗಳೂರು ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಇಂದು ಬುಧವಾರ ಸಹ ಅಲ್ಲಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಆಗಸ್ಟ್ 26ರವರೆಗೆ ನಗರದ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ. ವಿಚಿತ್ರವೆಂದರೆ ತಾಪಮಾನದಲ್ಲಿ ಇಳಿಕೆ ಆಗುವುದಿಲ್ಲ. ಪರಿಣಾಮ ಸೆಕೆಯ ವಾತಾವರಣ ಕಂಡು ಬರಲಿದೆ. ಗರಿಷ್ಠ ತಾಪಮಾನ 31 ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+