ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿಳಿಗೆ 71 ಸಾವಿರ ನೀಡಿದರೂ ಗಿಳಿ ಹಾಗಿರಲಿ ಒಂದು ಪುಕ್ಕ ಕೂಡ ಸಿಕ್ಕಿಲ್ಲ

By Nayana
|
Google Oneindia Kannada News

ಬೆಂಗಳೂರು, ಜುಲೈ 2: ದಿನನಿತ್ಯ ಅನೇಕ ಆನ್‌ಲೈನ್‌ನಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ಮೊಬೈಲ್‌ ಬದಲಿಗೆ ಕಲ್ಲು ಬಂದಿದ್ದು, ಅಥವಾ ಕ್ಯಾಮರಾ ಬದಲು ಬಾಕ್ಸ್‌ ಮಾತ್ರ ಬಂದಿದ್ದು ಹೀಗೆ ಹಲವು ನಿದರ್ಶನಗಳಿವೆ. ಆದರೆ ಜೀವಂತ ಗಿಳಿಯನ್ನು ಖರೀದಿಸಲು ಹೋಗಿ 71,500ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆನ್‌ಲೈನ್‌ ಮೂಲಕ ವಸ್ತುಗಳನ್ನು ಖರೀದಿಸುವಾಗ ತುಂಬಾ ಜೋಪಾನವಾಗಿರಬೇಕಾಗುತ್ತದೆ. ಆದರೆ ವೆಬ್‌ಸೈಟ್‌ ಮೂಲಕವಲ್ಲದೆ ಅಪರಿಚಿತರೊಂದಿಗೆ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿ ಮಾಡುವುದು ಒಳ್ಳೆಯದಲ್ಲ.

ಪತಿಯ ಅಕ್ರಮ ಸಂಬಂಧ ಬಯಲುಮಾಡಿದ ಗಿಣಿರಾಮ! ಪತಿಯ ಅಕ್ರಮ ಸಂಬಂಧ ಬಯಲುಮಾಡಿದ ಗಿಣಿರಾಮ!

ಸರ್ಜಾಪುರ ರಸ್ತೆಯ ವಿಜಯಕುಮಾರ್‌ ಲೇಔಟ್‌ ನಿವಾಸಿಯಾಗಿರುವ ಶ್ರೀಜಾ ದಾಸ್‌ ವಂಚನೆಗೆ ಒಳಗಾದವರು, ಗಿಳಿ ಖರೀದಿಸಲು ಇಂಡಿಯಾ ಮಾರ್ಟ್‌ನಲ್ಲಿ ಶ್ರೋಜಾ ದಾಸ್‌ ಹುಡುಕಾಟ ನಡೆಸುತ್ತಿದದಾಗ ಜೂನ್‌ 21ರಂದು ಅಪರಿಚಿತ ವ್ಯಕ್ತಿ ಪಡಿಚಯವಾಗಿ, ಶ್ರೀಜಾ ಅವರಿಗೆ ಗಿಳಿ ಕೊಡುವುದಾಗಿ ಹೇಳಿದ್ದಾರೆ.

Many cheated on purchase of parrot through online

ಪೋಲಿ ಪೋಲಿ ಮಾತನಾಡುವ ಮುದ್ದಿನ ಗಿಳಿ

ನಂತರ ಫೇಸ್‌ಬುಕ್‌ ಹಾಗೂ ವಾಟ್ಸ್‌ಅಪ್‌ ಮೂಲಕ ಸಂಪರ್ಕ ಮಾಡಿಕೊಂಡು ಗಿಳಿ ಕಳುಹಿಸುವುದಾಗಿ ವಿವಿಧ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ನಲ್ಲಿ ಹಂತ ಹಂತವಾಗಿ 71,500 ರೂ. ಜಮೆ ಮಾಡಿಸಿಕೊಂಡಿದ್ದಾನೆ. ಇಷ್ಟೊಂದು ಹಣ ಏತಕ್ಕಾಗಿ ಎಂದು ಕೇಳಿದಾಗ ಜೀವಂತ ಗಿಳಿ ಸಾಗಿಸಲು ವಿಶೇಷ ಪ್ಯಾಕ್‌ ಬೇಕಾಗಿದೆ ಎಂದು ಸಬೂಬು ಹೇಳಿದ್ದಾನೆ. ಈ ಕುರಿತು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

English summary
In a strange incident, Sreeja Das, resident of Sarjapur was cheated by unknown who had offered parrot sale through online. Cyber crime police have registered a case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X