"ಕನ್ನಡ ರಾಮಯ್ಯ"ನವರೇ ಕನ್ನಡದ ಸಾಧಕರು ಸಿಗಲಿಲ್ಲವೇ ಎಂದ ಕನ್ನಡಿಗರು!
ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ, ಹಣಕಾಸು ತಜ್ಞ ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ನಾಮಕರಣ ಮಾಡುವುದಕ್ಕೆ ಮುಂದಾಗಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರಸ್ತಾವನೆಗೆ ಕನ್ನಡಿಗರು ಗರಂ ಆಗಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡುವುದಾಗಿ 2025 -26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಏನಿದು ವಿವಾದ ಹಾಗೂ ಯಾಕೆ ವಿರೋಧ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದಲ್ಲೇ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪದ ನಡುವೆ ಇದೀಗ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡಲು ಮುಂದಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರಕ್ಕೆ ಕನ್ನಡಿಗರು ಯಾರೂ ಕಾಣಿಸುತ್ತಿಲ್ಲವೇ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಕನ್ನಡಪರ ಮಾತನಾಡುವ ಪಕ್ಷಗಳು ಹಾಗೂ ರಾಜಕಾರಣಿಗಳು ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕನ್ನಡವನ್ನು ಹಾಗೂ ಕರ್ನಾಟಕದ ಮಹನೀಯರನ್ನು ಮರೆತು ಹೈಕಮಾಂಡ್ ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಇದೇನಾ ಕನ್ನಡ ರಾಮಯ್ಯ ಎಂದರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಪುಟ್ಟ ಎಚ್.ಜಿ ಎನ್ನುವವರು ಎಫ್‌ಬಿಯಲ್ಲಿ ಕರ್ನಾಟಕದಲ್ಲಿ ಸಾಧಕರೇ ಇಲ್ಲ ಎನ್ನುವ ರೀತಿಯಲ್ಲಿ ಕಾಂಗ್ರೆಸ್‌ನವರು ಆಡ್ತಾ ಇರೋದು ಶೋಚನೀಯ. ಅಧಿಕಾರ ಇಲ್ಲದಾಗ ಪ್ರಾದೇಶಿಕತೆ, ಕನ್ನಡ ಪರ ಘೋಷಣೆಗಳು ಮಾಡುವ ಕಾಂಗ್ರೆಸ್ ಪಕ್ಷದವರು ಅಧಿಕಾರ ಸಿಕ್ಕ ಮೇಲೆ ಹೈಕಮಾಂಡ್ ಗುಲಾಮರು. ಎಸ್.ಎಂ ಕೃಷ್ಣ, ಬಂಗಾರಪ್ಪ, ಅರಸು, ಕೆಂಗಲ್ ಅವರಂತಹ ಕಾಂಗ್ರೆಸ್ ನಾಯಕರೇ ಇವರಿಗೆ ಕಾಣ್ತಾ ಇಲ್ಲ. ಇನ್ನೂ ಎಚ್ ನರಸಿಂಹಯ್ಯ ನಂತವರನ್ನು ಮರೆತೆ ಬಿಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹೇಶ್ ಮಠಪತಿ ಅವರು, ಕನ್ನಡ ರಾಮಯ್ಯ 🤗 ಎಂದು ವ್ಯಂಗ್ಯವಾಡಿದ್ದು. ಉತ್ತರದವರಗುಲಾಮರು ಎಂದು ಜರಿದಿದ್ದಾರೆ. ಮಲ್ಲಿಕಾರ್ಜುನ್ ಬಾಸ್ಕರ್ ಎನ್ನುವವರು, ಏನ್ ಕನ್ನಡ ರಾಮಯ್ಯನವರೇ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೆಸರಿಡಲು ಕನ್ನಡದ ಯಾವ ಸಾಧಕರು ಸಿಗಲಿಲ್ಲವೇ ?ಎಂದು ಪ್ರಶ್ನೆ ಮಾಡಿದ್ದಾರೆ.

ಸಂಚಾರಿ ಪ್ರಕಾಶ್ ಎನ್ನುವವರು, Thank you ಕನ್ನಡದ ರಾಮಯ್ಯ Siddaramaiah ನವರೇ... ಉತ್ತರ ಭಾರತದಲ್ಲಿ ಸಾಕಷ್ಟು ವಿವಿ ಗಳಿಗೆ ದೇವೇಗೌಡ್ರ ಹೆಸರಿದೆ...ಮತ್ತೆ ಮನಮೋಹನ ಸಿಂಗ ಅವರು ಹೆಸರ ಇಲ್ಲಿ ಇಡದೆ ಇದ್ದಿದ್ರೆ ತಪ್ಪಾಗುತ್ತೆ.. Very very good👏👏 ಎಂದು ವ್ಯಂಗ್ಯವಾಡಿದ್ದಾರೆ.
ಉರ್ದು ಶಾಲೆಗಳಿಗೆ ಹೆಚ್ಚಿನ ಅನುದಾನ ವಿರೋಧ: ಇನ್ನು ಇನ್ನೊಂದು ವಿಚಾರಕ್ಕೂ ಕನ್ನಡಿಗರು ಅಸಮಾಧಾನಿತರಾಗಿದ್ದಾರೆ. ಕರ್ನಾಟಕ ಬಜೆಟ್‌ನಲ್ಲಿ ಉರ್ದು ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಸಹ ಚರ್ಚೆಗೆ ಕಾರಣವಾಗಿದೆ. ಕರ್ನಾಟಕ ಸರ್ಕಾರ ಈ ಎರಡೂ ನಿರ್ಧಾರಗಳ ಬಗ್ಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಗಿರೀಶ್ ಕುಮಾರ್ ಎನ್ನುವವರು ಕಾಂಗ್ರೆಸ್ ಪಕ್ಷದವರು ಅವರ ಐಷರಾಮಿ ಮನೆಗಳಿಗೆ, ಅವರ ಮಕ್ಕಳು, ಮೊಮ್ಮಕ್ಕಳು, ಕಾಂಗ್ರೆಸ್ ಕಚೇರಿಗಳಿಗೆ ಅವರ ಪಕ್ಷದವರ ಹಿರಿಯರ ಹೆಸರುಗಳನ್ನು ಇಟ್ಟುಕೊಳ್ಳಲಿ. ಈ ಮೂಲಕ ಹೈಕಮಾಂಡ್‍ಗೆ ಅವರ ನೀಯತ್ತು, ತಾಕತ್ತು, ನಿಷ್ಠೆ ತೋರಿಸಲಿ. ಅಧಿಕಾರಕ್ಕೋಸ್ಕರ ಹೈಕಮಾಂಡ್ ಬೂಟು ನೆಕ್ಕುವ ಕೆಲಸ ಮಾಡಬಾರದು. ಮನಮೋಹನ್ ಸಿಂಗ್ ಅವರ ಕೊಡುಗೆಯನ್ನ ಮೆಚ್ಚಿಕೊಳ್ಳೋಣ. ಅವರ ಹೆಸರನ್ನು ಇಡಲು ಬೇರೆಯ ಜಾಗವನ್ನು ಕಾಂಗ್ರೇಸಿನವರು ಕಂಡುಕೊಳ್ಳಲಿ. ಈಗಾಗಲೇ ನಮ್ಮ ನಾಡಿನ ತುಂಬ ಇಟ್ಟಿರುವ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳದ್ದೇ ದೊಡ್ಡ ಪಟ್ಟಿ ಇದೆ ಎಂದಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾಲಯ ಹೆಸರನ್ನು ಬದಲಿಸುವುದೇ ಆದರೆ ಅದಕ್ಕೆ ಸೂಕ್ತ ಆಯ್ಕೆ ಎಚ್.ನರಸಿಂಹಯ್ಯನವರ ಹೆಸರು. ವಿವಿಗಾಗಿ ನರಸಿಂಹಯ್ಯನವರು ಮಾಡಿರುವ ಕೆಲಸದಲ್ಲಿ ಮನಮೋಹನ್ ಸಿಂಗ್ ಅವರು 1% ಕೂಡ ಮಾಡಿರಲು ಸಾಧ್ಯವೇ ಇಲ್ಲ. ಹಾಗಾಗಿ ಮನಮೋಹನ್ ಸಿಂಗ್ ಹೆಸರು ಸೂಕ್ತವಲ್ಲ. ಮುಖ್ಯಮಂತ್ರಿಗಳಿಗೆ ನರಸಿಂಹಯ್ಯನವರ ಮೇಲೆ ಕೋಪ ಬೇಜಾರು ಇದ್ದರೆ ನಮ್ಮದೇ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ದುಡಿದ ಇತರರ ಹೆಸರನ್ನು ಇಡಲಿ ಎಂದು ಹೇಳಿದ್ದಾರೆ.
ಇದೇ ರೀತಿ ಹಲವು ಕನ್ನಡಿಗರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರೂಪೇಶ್ ರಾಜಣ್ಣ ಅವರು, ಯಾವ ಕಾರಣಕ್ಕೂ ಬೆಂಗಳೂರು ವಿವಿ
ಹೆಸರು ಬದಲಾವಣೆ ಬೇಡ. ಮನಮೋಹನ್ ಸಿಂಗ್ ಅವರ ಬಗ್ಗೆ ಗೌರವವಿದೆ. ಆದರೆ ಅವರ ಹೆಸರಿಡಬೇಕಿದ್ದರೆ, ನಿಮ್ಮ ಪಕ್ಷದ ಕಚೇರಿ ಅಥವಾ ಮನೆಗಳಿಗೆ ಇಡಿ. ಈಗಾಗಲೇ ಇಂದಿರಾ,ರಾಜೀವ್ ಗಾಂಧಿ, ಅಟಲ್,ಮಾಳವಿಯ,ಸಾವರ್ಕರ್,ಶಿವಾಜಿ ಅಂತ ಹೊರಗಿನವರ ಹೆಸರು ಸಾಕಾಗಿದೆ. ಕನ್ನಡಿಗರದೆ ಹೆಸರಿಡಿ ಎಂದು ಆಗ್ರಹಿಸಿದ್ದಾರೆ.
ವಿರೋಧ ಪಕ್ಷದಿಂದಲೂ ವಿರೋಧ
ಇನ್ನು ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಅವರ ಹೆಸರನ್ನು ಇರಿಸುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ಸಹ ವಿರೋಧಿಸಿವೆ. ಕನ್ನಡದ್ರೋಹಿ ಸಿದ್ದರಾಮಯ್ಯ ಎಂದಿರುವ ಜೆಡಿಎಸ್ ಪಕ್ಷವು, ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ ಮಾಡುವ ಅವಶ್ಯಕತೆ ಏನಿತ್ತು ಸಿದ್ದರಾಮಯ್ಯ ಅವರೇ ?
ಬೆಂಗಳೂರು ನಗರ ವಿವಿಗೂ ಮನಮೋಹನ್ ಸಿಂಗ್ ಅವರಿಗೂ ಏನು ಸಂಬಂಧ ? ಇದು "ಕಾಂಗ್ರೆಸ್ ಗುಲಾಮಗಿರಿ" ! ಕರ್ನಾಟಕದಲ್ಲಿ ಹುಟ್ಟಿದ ಸಾವಿರಾರು ಕನ್ನಡಿಗ ಮಹಾನ್ ಸಾಧಕರು ಇದ್ದರೂ ಅವರು ಯಾರು ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ಕನ್ನಡ ದ್ರೋಹಿ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications