ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 26 ರಿಂದ ಲಾಲ್‌ಬಾಗ್‌ನಲ್ಲಿ ಮಾವುಮೇಳ: ಬಗೆ ಬಗೆಯ ಮಾವು ತಿನ್ನುವ ಅವಕಾಶ

|
Google Oneindia Kannada News

ಬೆಂಗಳೂರು ಮೇ 11: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಲಾಲ್‌ಬಾಗ್‌ನಲ್ಲಿ ಮಾವು ಮೇಳ ಇಲ್ಲದೇ ಜನ ಬೇಸರಗೊಂಡಿದ್ದರು ಆದರೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಹೀಗಾಗಿ 26ಮೇ ರಿಂದ ಲಾಲ್‌ಬಾಗ್‌ನಲ್ಲಿ ಮಾವು ಮೇಳ ನಡೆಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಲಾಲ್‌ಬಾಗ್‌ನಲ್ಲಿ ಮಾವು ಮೇಳ

ಲಾಲ್‌ಬಾಗ್‌ನಲ್ಲಿ ಮಾವು ಮೇಳ

ಬೆಂಗಳೂರಿನ ಲಾಲ್ ಬಾಗ್ ಮತ್ತು ಕಬ್ಬನ್ ಉದ್ಯಾನವನದಲ್ಲಿ ಮೇ. 26ರಿಂದ ಮಾವು ಮೇಳವನ್ನು ಆಯೋಜಿಸಲಾಗಿದೆ. ಈ ಕುರಿತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ. ವಿ ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಸಿ. ಜಿ ನಾಗರಾಜ್ ಮತ್ತು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ, ಈ ತೀರ್ಮಾನ ಕೈಗೊಳ್ಳಲಾಗಿದೆ.

ಲಾಲ್‌ಬಾಗ್ ಉದ್ಯಾನವದಲ್ಲಿ ಮಾವು ಮೇಳ ಆಯೋಜನೆ ಬಗ್ಗೆ ಇಲಾಖೆ ಆಲೋಚನೆಲಾಲ್‌ಬಾಗ್ ಉದ್ಯಾನವದಲ್ಲಿ ಮಾವು ಮೇಳ ಆಯೋಜನೆ ಬಗ್ಗೆ ಇಲಾಖೆ ಆಲೋಚನೆ

ಆನ್‌ಲೈನ್ ಬುಕ್ಕಿಂಗ್ ಮಾಡಬಹುದು

ಆನ್‌ಲೈನ್ ಬುಕ್ಕಿಂಗ್ ಮಾಡಬಹುದು

ಕಳೆದ ಮೂರು ವರ್ಷಗಳ ಹಿಂದೆ ಅಂಚೆ ಮೂಲಕ ಖರೀದಿ ಯೋಜನೆ ಜಾರಿಗೆ ತರಲಾಗಿತ್ತು. ಈ ವರ್ಷವೂ ಮೇ. 16ರಿಂದ ಬುಕ್ಕಿಂಗ್ ಮಾಡೋದಕ್ಕೆ ಅವಕಾಶ ನೀಡಲಾಗಿದೆ. ಗ್ರಾಹಕರು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಂಚೆ ಮೂಲಕ ಮಾವು ತರಿಸಿಕೊಳ್ಳಲು ಬುಕ್ಕಿಂಗ್ ಮಾಡಬಹುದಾಗಿದೆ.

ಮಾವು ಮಾರಾಟ ಹೆಚ್ಚಳ

ಮಾವು ಮಾರಾಟ ಹೆಚ್ಚಳ

ನಗರದ ಲಾಲ್‌ಬಾಗ್ ಉದ್ಯಾನದಲ್ಲಿ ಮೇಳದ ಕೇಂದ್ರ ಇರಲಿದ್ದು, ಕಬ್ಬನ್ ಪಾರ್ಕ್‌ನಲ್ಲಿ ಚಟುವಟಿಕೆಗಳು ಸಣ್ಣ ಪ್ರಮಾಣದಲ್ಲಿ ನಡೆಯಲಿವೆ ಎಂದು ತೋಟಗಾರಿಕೆ ಇಲಾಖೆ ಹೇಳಿದೆ. ಮಾವು ಮೇಳವು ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆದಿಲ್ಲ, ಆದರೂ ಈ ಮಾವು ಮೇಳದಲ್ಲಿ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡಬಹುದೆಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಮಾವು ಪೂರೈಕೆ ಸರಪಳಿಯು ವಿಭಿನ್ನ ದಿಕ್ಕಿನಲ್ಲಿ ವಿಸ್ತರಿಸಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್‌ನ (KSMDMCL) ಮೂಲಗಳು ತಿಳಿಸಿವೆ.

ಅಪಾರ್ಟ್‌ಮೆಂಟ್ ಸಂಘಗಳ ಜೊತೆ ಸಂಪರ್ಕ

ಅಪಾರ್ಟ್‌ಮೆಂಟ್ ಸಂಘಗಳ ಜೊತೆ ಸಂಪರ್ಕ

"ನಗರಗಳ ಅಪಾರ್ಟ್‌ಮೆಂಟ್ ಫೆಡರೇಶನ್‌ಗಳೊಂದಿಗೆ ಸಂಪರ್ಕ ಹೊಂದಿದ್ದೇವೆ, ದೆಹಲಿಗೆ ಹಣ್ಣುಗಳನ್ನು ಕಳುಹಿಸಿದ್ದೇವೆ ಮತ್ತು ಮೇಳದ ಅನುಪಸ್ಥಿತಿಯು ರೈತರಿಗೆ ಹೆಚ್ಚಿನ ನಷ್ಟವನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಇನ್ನೊಂದು ಮಾರ್ಗವಾಗಿ ಆನ್‌ಲೈನ್ ಪೋರ್ಟಲ್‌ಗಳನ್ನು ಬಳಸಿಕೊಳ್ಳುವ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ರೈತರಿಗೆ ನಷ್ಟವಾಗದೇ ಅವರಿಗೆ ಹೆಚ್ಚಿನ ಉಪಾಯವಾಗಿದೆ," ಎಂದು ಕೆಎಸ್‌ಎಂಡಿಎಂಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ ನಾಗರಾಜು ತಿಳಿಸಿದ್ದಾರೆ.

Recommended Video

KL Rahul ಪವರ್ ಪ್ಲೇ ನಲ್ಲಿ ಎಡವಟ್ಟು ಮಾಡಿಕೊಂಡಿದ್ದಕ್ಕೆ ಬೇಸರ ಹೊರಹಾಕಿದ್ದು ಹೀಗೆ.. | Oneindia Kannada

English summary
State Horticulture Department has decided to hold the Mango Fair from the 26th at Lal Bagh and Cubbon Park in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X