ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳ

ಬೆಂಗಳೂರು, ಮೇ 19: ನಗರದ ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳ ಪ್ರಾರಂಭವಾಗಲಿದೆ. ಮೇಳ 20 ದಿನಗಳ ಕಾಲ ನಡೆಯಲಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಸಹಜವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

ಮೇಳದಲ್ಲಿ ಕೆಲವು ವಾಣಿಜ್ಯ ಮಾವಿನ ತಳಿಗಳು, ಲಾಲ್‌ಬಾಗ್‌ನಲ್ಲಿ ಬೆಳದಿರುವ ಕೆಲವು ಪಾರಂಪರಿಕ ಮಾವಿನ ತಳಿಗಳು, ಜತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ ಮಾವು ಇತ್ಯಾದಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜಿಕೆವಿಕೆ, ಐಐಎಚ್‌ಆರ್‌ ಸಂಶೋಧಿಸಿದ ಹಲಸಿನ ತಳಿಗಳು, ರೈತರು ಬೆಳದು ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.

ಬಾದಾಮಿ, ರಸಪುರಿ, ಸೇಂಧೂರ, ಮಲಗೋವಾ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ ಹೀಗೆ ನಾನಾ ತಳಿಯ ಹಣ್ಣುಗಳು ಮಾರಾಟವಾಗಲಿದೆ. ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಿಸಿದ ನಾನಾ ಪದಾರ್ಥಗಳ ಮಾರಾಟವೂ ನಡೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

Mango and Jackfruit fair in Lalbagh from May 25

ಉತ್ಪಾದನೆಯಲ್ಲು ಕುಂಠಿತ: ಅಧಿಕ ಬಿಸಿಲು ಒಂದೆಡೆಯಾದರೆ ಸಕಾಲದಲ್ಲಿ ಮಳೆ ಬರದೆ, ಇದೀಗ ಮಾವು ಕೊಯ್ಲಿಗೆ ಬಂದಿರುವ ವೇಳೆಯಲ್ಲಿ ಗಾಳಿ-ಮಳೆ ಹೆಚ್ಚಾಗಿದೆ. ಹೀಗಾಗಿ ಬಿಟ್ಟಿರುವ ಕಾಯಿಗಳು ಉದುರುತ್ತಿವೆ. ಇದರಿಂದ ಮಾವು ಉತ್ಪಾದನೆಯಲ್ಲಿ ಈ ಬಾರಿ ಶೇ.40ರಷ್ಟು ಮಾತ್ರ ಇಳುವರಿ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+