• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾದರಾಯನಪುರ: ಮೇ 11 ರಿಂದ ಎಲ್ಲರಿಗೂ ಕಡ್ಡಾಯ ಕೋವಿಡ್ ಪರೀಕ್ಷೆ

|

ಬೆಂಗಳೂರು, ಮೇ 10: ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸಂಪೂರ್ಣವಾಗಿ ಮಟ್ಟಹಾಕಲು ಬಿಬಿಎಂಪಿ ನಿರ್ಧರಿಸಿದ್ದು, ವೈರಸ್‌ ಹರಡದಂತೆ ತಡೆಯಲು ಹೊಸ ಯೋಜನೆ ರೂಪಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಕರೊನಾ ಪ್ರಕರಣಗಳಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಜೊತೆಗೆ ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮೇ 11 ರಿಂದ ಪಾದರಾಯನಪುರದಲ್ಲಿ ಎಲ್ಲರಿಗೂ ಕರೊನಾ ಪರೋಕ್ಷೆ ಕಡ್ಡಾಯ ಮಾಡಲಾಗಿದೆ.

ಮೇ 11 ರಿಂದ ಅಲ್ಲಿನ ಎಲ್ಲರಿಗೂ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಮುಂದಾಗಿದೆ. Random ಪರೀಕ್ಷೆಯಲ್ಲಿ ಬಹಳಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದೆ. ಹೀಗಾಗಿ ಪಾದರಾಯನಪುರ ವಾರ್ಡ್‌ನ 25 ಸಾವಿರ ಜನರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗುವುದು. ಜೊತೆಗೆ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಪಕ್ಕದ ವಾರ್ಡ್‌ನ ನಿವಾಸಿಗಳಿಗೂ ತಲೆನೋವಾಗಿದೆ. ಅದರಿಂದಾಗಿ ಪಾದರಾಯನಪುರ ಸುತ್ತಮುತ್ತಲಿನ 100 ಮೀಟರ್ ಅಂತರದ ವಾರ್ಡ್‌ಗಳ ಎಲ್ಲ ಜನರನ್ನೂ ಕೊರೊನಾ ವೈರಸ್‌ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

ಶುಭ ಸುದ್ದಿ: ಬೆಂಗಳೂರಿನಲ್ಲಿ 25 ರಿಂದ 19ಕ್ಕೆ ಇಳಿದ ಕಂಟೇನ್ಮೆಂಟ್ ಪ್ರದೇಶಗಳು

ಪಾದರಾಯನಪುರಕ್ಕೆ ಹೊಂದಿಕೊಂಡಂತಿರುವ ಪೈಪ್‌ಲೈನ್ ರಸ್ತೆ, ಟೆಲಿಕಾಂ ರಸ್ತೆ ಹಾಗೂ ರೈಲ್ವೆ ರಸ್ತೆಗಳಲ್ಲೂ ಆಯ್ದ ಕಡೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ ಕೊಟ್ಟಿದ್ದಾರೆ.

English summary
The BBMP has decided to completely control the coronavirus at Padarayanapuram, Bangalore, with a new plan to prevent the spread of the virus. COVID 19 test has been made mandatory for everyone in Padarayanapura from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X