ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ; 12 ಸಾವಿರ ದಂಡ ಕಟ್ಟಿದ ಯುವಕ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13 : ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವರಿಗೆ ದಂಡ ಹಾಕುತ್ತಿದ್ದಾರೆ. ವ್ಯಕ್ತಿಯೊಬ್ಬರು ಬರೋಬ್ಬರಿ 12,500 ರೂ. ದಂಡ ಕಟ್ಟಿದ್ದಾರೆ.

ಪೂರ್ವ ವಿಭಾಗದ ಹೆಚ್. ಎ. ಎಲ್. ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚನ್ನಪ್ಪ ಅವರು ವ್ಯಕ್ತಿಯೊಬ್ಬರು 33 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ: ಇಂದಿನಿಂದ ಹೊಸ ನಿಯಮ ಜಾರಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ: ಇಂದಿನಿಂದ ಹೊಸ ನಿಯಮ ಜಾರಿ

ದ್ವಿ-ಚಕ್ರ ವಾಹನದ ಮಾಲೀಕರಿಂದ 12,500 ರೂ. ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರನ್ನು ಹಿಡಿಯುವುದು ಕಡಿಮೆ ಆಗಿತ್ತು. ಈಗ ಪೊಲೀಸರು ಪುನಃ ದಂಡ ಪ್ರಯೋಗ ಆರಂಭಿಸಿದ್ದಾರೆ.

ರಾಮನಗರದಲ್ಲಿ ಸಂಚರಿಸಲಿದೆ ಸಂಚಾರಿ ತಪಾಸಣಾ ವಾಹನರಾಮನಗರದಲ್ಲಿ ಸಂಚರಿಸಲಿದೆ ಸಂಚಾರಿ ತಪಾಸಣಾ ವಾಹನ

Man Paid 12,500 Fine For Traffic Rules Violation

ನಗರದಲ್ಲಿ ಕೇವಲ 6 ದಿನಗಳ ಕಾಲ ಕಾರ್ಯಾಚರಣೆ ನಡೆಸಿರುವ ಪೊಲೀಸರು 97,213 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. 4.02 ಕೋಟಿ ದಂಡವನ್ನು ಸಂಗ್ರಹ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಗ್ರಹವಾದ ಅತಿ ಹೆಚ್ಚು ಮೊತ್ತ ಇದಾಗಿದೆ.

ಅಕ್ಟೋಬರ್ 4 ರಿಂದ 10ರ ತನಕ ಬೆಂಗಳೂರು ನಗರದಲ್ಲಿ 4.02 ಕೋಟಿ ದಂಡವನ್ನು ಸಂಗ್ರಹ ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಹೆಲ್ಮೆಟ್ ರಹಿತ ಪ್ರಯಾಣವೇ ಹೆಚ್ಚಾಗಿದೆ.

12 ಸಾವಿರ ಖಾಸಗಿ ಬಸ್‌ ಸಾರಿಗೆ ಇಲಾಖೆಗೆ ಒಪ್ಪಿಸಿದ ಮಾಲೀಕರು 12 ಸಾವಿರ ಖಾಸಗಿ ಬಸ್‌ ಸಾರಿಗೆ ಇಲಾಖೆಗೆ ಒಪ್ಪಿಸಿದ ಮಾಲೀಕರು

30,712 ಪ್ರಕರಣಗಳನ್ನು ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ದಾಖಲಿಸಲಾಗಿದೆ. ಹಿಂಬಂದಿ ಸವಾರರು ಹೆಲ್ಮೆಟ್ ಹಾಕಿಲ್ಲ ಎಂದು 19,403 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಸೀಟ್ ಬೆಲ್ಟ್ ಧರಿಸದ 5 ಸಾವಿರ ಪ್ರಕರಣ ಪತ್ತೆಯಾಗಿದೆ.

Recommended Video

Muniratna ಅವರಿಗೆ Ticket ಸಿಗುವ ಮುನ್ನವೇ Supreme Court ಕ್ಲೀನ್ ಚಿಟ್ | Oneindia Kannada

ಕೋವಿಡ್ ಭೀತಿ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಕುಡಿದು ವಾಹನ ಓಡಿಸುವ ಪ್ರಕರಣಗಳನ್ನು ಪತ್ತೆ ಹಚ್ಚುವುದನ್ನು ನಿಲ್ಲಿಸಿದ್ದಾರೆ. ಆದರೆ, ಉಳಿದ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ.

English summary
Bengaluru man paid 12,500 Rs fine for traffic rules violation for 33 times. City east division police found rules violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X