ಸುಳ್ಳು ಹೇಳಿದ ಕಾರಣಕ್ಕೆ ಮಗನಿಗೆ ಇದೆಂಥಾ ಶಿಕ್ಷೆ?

ಬೆಂಗಳೂರು, ಜನವರಿ 27 : ಮಕ್ಕಳು ಮಾಡಿದ ಎಲ್ಲಾ ತಪ್ಪುಗಳನ್ನು ಮನ್ನಿಸುವ ಮನಸ್ಸಿರುವುದು ತಂದೆ-ತಾಯಿಗಳಿಗೆ ಮಾತ್ರ ಎಂದು ಹೇಳುತ್ತಾರೆ. ಆದರೆ ಇಂದಿನ ಸಮಾಜ ಮುನ್ನಡೆಯುತ್ತಿರುವ ಹಾದಿ ನೋಡಿದರೆ ಈ ಮಾತು ಸುಳ್ಳೆನಿಸುವುದು ಖಂಡಿತ.

ಮಕ್ಕಳು ಏನಾದರೂ ತಪ್ಪು ಮಾಡಿದರೆ ತಿದ್ದಿ ಒಳ್ಳೆಯ ದಾರಿಯೆಡೆಗೆ ನಡೆಯಬೇಕೆಂದು ಮಾರ್ಗದರ್ಶನ ತೋರಬೇಕಾಗಿದ್ದ ತಂದೆಯೇ ರಾಕ್ಷಸನಂತೆ ವರ್ತಿಸಿ ಮಗನಿಗೆ ಥಳಿಸಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಂಗೇರಿಯ ಗ್ಲೋಬಲ್ ವಿಲೇಜ್ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಗ ಸುಳ್ಳು ಹೇಳುತ್ತಾನೆಂದು ಮಗನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ಮಗ ಪದೇ ಪದೇ ಸುಳ್ಳು ಹೇಳುತ್ತಾನೆಂದು ತಂದೆ ಆತನನ್ನು ಮೊದಲು ಮೊಬೈಲ್ ಚಾರ್ಜರ್ ನಿಂದ ಥಳಿಸಲು ಪ್ರಾರಂಭಿಸುತ್ತಾನೆ.

Man arrested who tortured his son inhumanly

ನಂತರ ಬಾಲಕನನ್ನು ೪ರಿಂದ ೫ ಬಾರಿ ಕಾಟ್ ಮೇಲೆ ಎಸೆಯುವ ದೃಶ್ಯವನ್ನು ನೋಡಿದರೆ ಯಾರಿಗಾದರೂ ಕಣ್ಣಿನಲ್ಲಿ ನೀರು ಬರದೆ ಇರಲಾರದು. ಆಮೇಲಲೆ ಕಾಟ್ ನಿಂದ ನೆಲದ ಮೇಲೆ ಎಳೆದು ಕಾಲಿನಿಂದ ತುಳಿಯುತ್ತಾನೆ. ವಿಕೃತ ರೀತಿಯಲ್ಲಿ ಥಳಿಸುವ ತಂದೆಗೆ ಮನೆಯ ಸದಸ್ಯರು ಹೊಡೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರೂ ಕೇಳುವುದಿಲ್ಲ.

Man arrested who tortured his son inhumanly

ನಂತರ ಕುಟುಂಬ ಸದಸ್ಯರೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ಆ ತಂದೆಯ ವಿರುದ್ಧ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಕೆಂಗೇರಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು, ಹಲ್ಲೆ ನಡೆಸಿರುವ ಮಹೇಂದ್ರ (37) ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+