ಬೆಂಗಳೂರು: ರಸ್ತೆಯಲ್ಲೆ ಮಹಿಳೆಗೆ ಕಿರುಕುಳ ನೀಡಿದ್ದ ವ್ಯಕ್ತಿಯ ಬಂಧನ

ಬೆಂಗಳೂರು, ಸೆಪ್ಟೆಂಬರ್ 09: ಹಾಡ-ಹಗಲೇ ನಡುರಸ್ತೆಯಲ್ಲೇ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಬರೂಲ್ ಹಮೀದ್ ಖುರೇಷಿ ಎಂಬ ವ್ಯಕ್ತಿ ಸೆಪ್ಟೆಂಬರ್‌ 3 ರಂದು ಆರ್‌.ಟಿ.ನಗರದಲ್ಲಿ ಹಾಡು ಹಗಲೆ ರಸ್ತೆಯಲ್ಲೇ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಯುವತಿಯ ದೂರನ್ನು ಆಧರಿಸಿ ಪೊಲೀಸರು ಮೊಹಮ್ಮದ್‌ನನ್ನು ಬಂಧಿಸಿದ್ದಾರೆ.

ಮೊಹಮ್ಮದ್ ಖುರೇಷಿಯು ಸ್ವಭಾವತಃ ಕಿರುಕುಳ ನೀಡುವ ಪ್ರವೃತ್ತಿಯವನಾಗಿದ್ದು, ಈ ಮುಂಚೆಯೂ ಇನ್ನೂ ಮೂರು ಮಹಿಳೆಯರಿಗೆ ಹೀಗೆಯೇ ಕಿರುಕುಳ ನೀಡಿದ್ದಾನೆ ಎಂದು ಆರ್‌.ಟಿ.ನಗರ ಪೊಲೀಸರು ಹೇಳಿದ್ದಾರೆ.

Man arrested in Bengaluru for molesting woman on the road

ಬೈಕ್‌ನಲ್ಲಿ ತಿರುಗುವ ಈತ. ಒಂಟಿಯಾಗಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಯಾರೂ ಇಲ್ಲದ ಸಮಯ ನೋಡಿಕೊಂಡು. ಬೈಕ್ ಅನ್ನು ಹತ್ತಿರದಲ್ಲೇ ಪಾರ್ಕ್‌ ಮಾಡಿ. ಹಿಂದಿನಿಂದ ಹೋಗಿ ಯುವತಿಯನ್ನು ತಬ್ಬಿ ಹಿಡಿಯುವುದು ಲೈಂಗಿಕ ಕಿರುಕುಳ ನೀಡುವುದು ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೊಹಮ್ಮದ್ ಖುರೇಷಿ ವಿವಾಹಿತನಾಗಿದ್ದು ಡಿ.ಜೆ.ಹಳ್ಳಿ ನಿವಾಸಿ ಆಗಿದ್ದಾನೆ. ಈತನನ್ನು ಬಂಧಿಸುವ ಸಮಯದಲ್ಲಿ ತಾನೊಬ್ಬ ಆಯುರ್ವೇದ ವೈದ್ಯನಾಗಿದ್ದು ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಪೊಲೀಸರ ಬಳಿ ವಾದಿಸಿದ್ದಾನೆ. ಆದರೆ ಆತನು ಸುಳ್ಳು ಹೇಳಿದ್ದನೆಂಬುದನ್ನು ಪೊಲೀಸರು ಪತ್ತೆ ಹಚ್ಚಿ ಆತನ ಮೇಲೆ ಕೇಸು ದಾಖಲಿಸಿದ್ದಾರೆ.

ಸೆಪ್ಟೆಂಬರ್ 3 ರಂದು ಯುವತಿ ನೀಡಿದ್ದ ದೂರನ್ನು ಆಧರಿಸಿ ಅಂದಿನ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+