ಚರ್ಚ್‌ಗಳನ್ನೇ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ವಂಚಕನ ಸೆರೆ
ಬೆಂಗಳೂರು, ಏಪ್ರಿಲ್ 19: ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅನುದಾನ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಆರೋಪಿ ಕಾಯೆಲ್ ಅಲಿಯಾಸ್ ಮಾರ್ಕ್ ಬಂಧಿತ ಆರೋಪಿಯಾಗಿದ್ದು ಈತ ಚರ್ಚ್‌ಗಳನ್ನೇ ಟಾರ್ಗೇಟ್ ಮಾಡುತ್ತಿದ್ದ ಎನ್ನಲಾಗಿದೆ. ಚರ್ಚ್‌ಗಳಿಗೆ ಅನುದಾನ ಮತ್ತು ದುರಸ್ಥಿ ಕಾರ್ಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಕೊಡಿಸುವುದಾಗಿ ನಂಬಿಸುತ್ತಿದ್ದ. ಅನುದಾನ ಕೊಡಿಸಲು ಹಣ ನೀಡಬೇಕು ಎಂದು 50 ಸಾವಿರದಿಂದ 1 ಲಕ್ಷದವೆರೆಗೂ ಹಣವನ್ನು ಪಡೆಯುತ್ತಿದ್ದ. ಆ ಬಳಿಕ ಯಾರಿಗೂ ಸಿಗದಂತೆ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರು, ಹಾಸನ , ತುಮಕೂರು ಭಾಗದ ಚರ್ಚ್ ಗಳಲ್ಲಿ ಇದೇ ರೀತಿಯಾಗಿ ಕಾಯೆಲ್ ವಂಚಿಸಿರುವುದಾಗಿ ತಿಳಿದುಬಂದಿದೆ.
ದಾಸರಹಳ್ಳಿ ನಿವಾಸಿ ಜೇಮ್ಸ್ ಪೌಲ್ ಎಂಬುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಯಶವಂತಪುರ ಪೊಲೀಸರು ಕಾಯೆಲ್ ಅಲಿಯಾಸ್ ಮಾರ್ಕ್ ನನ್ನು ಬಂಧಿಸಿದ್ದಾರೆ.

ಆರೋಪಿಯ ಸುಳಿವು ಕೊಟ್ಟ ಲೆಟರ್ ಹೆಡ್
ಕಾಯಲ್ ಅಲಿಯಾಸ್ ಮಾರ್ಕ್ ಸರ್ವೇ ಸಾಮಾನ್ಯವಾಗಿ ಚರ್ಚ್‌ಗಳನ್ನು ಟಾರ್ಗೆಟ್ ಮಾಡ್ತಿದ್ದ. ಈತ ತಾನೊಬ್ಬ ಪ್ರಭಾವಿ ಎಂಬುದನ್ನು ಬಿಂಬಿಸಿಕೊಳ್ಳಲು ಕಾರಿನಲ್ಲಿಯೇ ಸುತ್ತಾಟವನ್ನು ಮಾಡುತ್ತಿದ್ದ. ವಿವಿಧ ಚರ್ಚ್‌ಗಳಿಗೆ ಭೇಟಿಯನ್ನು ಕೊಟ್ಟು ಚರ್ಚ್‌ನ ಮುಖ್ಯಸ್ಥರ ಬಳಿ ಮಾತನಾಡುತ್ತಿದ್ದ. ನಿಮಗೆ ಅನುದಾನ ಬರುವಂತೆ ಮಾಡುತ್ತೇನೆ. ಚರ್ಚ್ ರಿಪೇರಿ, ಕಾಂಪೌಂಡು ರಿಪೇರಿ ಸೇರಿದಂತೆ ಚರ್ಚ್ ಗಳಲ್ಲಿನ ಸೌಲಭ್ಯವನ್ನು ಹೆಚ್ಚಿಸಲು ಹಣಕಾಸಿನ ನೆರವನ್ನು ಕೊಡಿಸುತ್ತೇನೆ ಎಂದು ನಂಬಿಸುತ್ತಿದ್ದ. ತಾನೇ ಒಂದು ಫೈಲ್ ತಯಾರಿಸುತ್ತಿದ್ದ. ಅದರಲ್ಲಿ ಅಲ್ಪಸಂಖ್ಯಾತ ಇಲಾಖೆಯ ಲೆಟರ್ ಹೆಡ್ ಮತ್ತು ಮೊಹರು ಬಳಸಿ ನಕಲಿ ಸಹಿ ಹಾಕಿಸಿ ಚರ್ಚ್ ಮುಖ್ಯಸ್ಥರಿಗೆ ತೋರಿಸಿ ಹಣವನ್ನು ಪಡೆಯುತ್ತಿದ್ದ. ಆದರೆ ದೂರುದಾರ ಜೇಮ್ಸ್ ಗೆ ತಮಗೆ ಪರಿಚಯವಿರುವ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿದಾಗ ಅದು ನಕಲಿ ಲೆಟರ್ ಹೆಡ್ ಎಂಬುದು ಗೊತ್ತಾಗಿ ಕಾಯಲ್ ಅಲಿಯಾಸ್ ಮಾರ್ಕ್ ನ ಕಳ್ಳಾಟ ಬಯಲಾಗಿತ್ತು.
ಕಾಯಲ್ ಅಲಿಯಾಸ್ ಮಾರ್ಕ್ ಸಿಕ್ಕಿದ್ದೆಲ್ಲಿ?
ಕಾಯಲ್ ಮೂಲತಃ ಬೀದರ್ ನವನು. ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದ ಈತನ ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಎಲ್ಲಿದ್ದಾನೆ ಎಂಬ ಹುಡುಕಾಟ ನಡೆೆಸಲಾಗಿತ್ತು. ಯಶವಂತಪುರ ಪೊಲೀಸರು ಕರೆಯನ್ನು ಮಾಡಿದರೆ ಸ್ಪಂದಿಸದೇ ಕರೆೆಯನ್ನು ಕಟ್ ಮಾಡುತ್ತಿದ್ದ. ಬಾಣಸವಾಡಿಯ ಹೊಟೆಲ್ ನಲ್ಲಿ ಕುಳಿತಿದ್ದ ಕಾಯಲ್ ನನ್ನು ಬಂಧಿಸಿ ಕರೆತಂದಿದ್ದಾರೆ. ತನಿಖೆಯ ವೇೆಳೆ ಈತ ಮೋಜು ಮಸ್ತಿಗಾಗಿ ಚರ್ಚ್‌ಗಳನ್ನು ಟಾರ್ಗೆಟ್ ಮಾಡಿ ಹಣವನ್ನು ಲಪಟಾಯಿಸುವ ಉದ್ದೇಶದಿಂದ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ.












Click it and Unblock the Notifications