"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು
ಬೆಂಗಳೂರು: ಕರ್ನಾಟಕದ ರಾಜಧಾನಿ, ಅಪ್ಪಟ ಕನ್ನಡದ ನೆಲ ಬೆಂಗಳೂರನ್ನು 'ಭಾರತದ ಸ್ಟಾರ್ಟಪ್ ಹಬ್' ಎಂದು ಕರೆಯಲಾಗುತ್ತದೆ. ಆದರೆ, ಇಂದು ಅದೇ ಬೆಂಗಳೂರು ಪರಭಾಷಿಕರ ಅತಿಯಾದ ಹಾವಳಿಯಿಂದಾಗಿ ತನ್ನ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಕನ್ನಡಿಗರಲ್ಲಿ ಮನೆಮಾಡಿದೆ. ಇತ್ತೀಚೆಗಷ್ಟೇ ಆಂಧ್ರದ ಯುವತಿಯೊಬ್ಬಳು ಮಾರತ್ತಹಳ್ಳಿಯನ್ನು "ಮಿನಿ ಆಂಧ್ರ" ಎಂದು ಕರೆದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಬೆನ್ನಲ್ಲೇ, ಈಗ ಕೇರಳಿಗರು ಬೆಂಗಳೂರನ್ನು "ಮಲಯಾಳಿಗಳ ಹಬ್" ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ವಲಸಿಗರ ಹಾವಳಿ ಬಗ್ಗೆ ಕನ್ನಡಿಗರ ಆಕ್ರೋಶ
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಮಲಯಾಳಿಗಳು ಬೆಂಗಳೂರಿನ ಮಡಿವಾಳ ಪ್ರದೇಶವನ್ನು "ಮಲ್ಲುಗಳ ಹಬ್" ಎಂದು ಬಣ್ಣಿಸಿರುವುದು ಕನ್ನಡಿಗರನ್ನು ಕೆರಳಿಸಿದೆ. ಈ ಬಗ್ಗೆ ನೆಟ್ಟಿಗರು ಹರಿಹಾಯ್ದಿದ್ದು, "ಕೇರಳದಲ್ಲಿ 100 ಪರ್ಸೆಂಟ್ ಸಾಕ್ಷರತೆ ಇದೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ಬದುಕು ಕಟ್ಟಿಕೊಳ್ಳಲು ಮಾತ್ರ ಸಾಲು ಸಾಲಾಗಿ ಬೆಂಗಳೂರಿಗೆ ಬರುತ್ತಾರೆ. ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಲಾಗದವರು ಇಲ್ಲಿ ಬಂದು ನಮ್ಮ ನೆಲವನ್ನೇ ತಮ್ಮ ಹಬ್ ಎಂದು ಕರೆಯುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.

ಕೇರಳದಲ್ಲಿ ಸೌಲಭ್ಯಗಳಿಲ್ಲ
ಈ ವಿಡಿಯೋ ಹಂಚಿಕೊಂಡಿರುವ ಕನ್ನಡಿಗರು ತಮ್ಮ ನೋವು ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. "ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸುವವರು ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಗೌರವಿಸುವುದನ್ನು ಬಿಟ್ಟು, ಪ್ರದೇಶಗಳ ಹೆಸರನ್ನೇ ಬದಲಾಯಿಸಲು ಹೊರಟಿರುವುದು ಸಹಿಸಲು ಸಾಧ್ಯ." "ಕೇರಳದಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳಿಲ್ಲ, ಡ್ರಗ್ಸ್ ಮಾಫಿಯಾದ ಹಾವಳಿ ಹೆಚ್ಚಾಗಿದೆ. ಗಲ್ಫ್ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿಂದ ಜನ ಬರುತ್ತಿದ್ದಾರೆ, ಆದರೆ ಇಲ್ಲಿ ಬಂದು ನಮ್ಮ ಊರನ್ನು ಅವರದ್ದೆಂದು ಕರೆಯುವುದು ಉದ್ಧಟತನ" ಎಂದು ಖಂಡಿಸಿದ್ದಾರೆ.
ಇಡೀ ಕೇರಳ ಮಲಯಾಳಿಗಳಿಗೆ ಗಬ್ಬು, ಬೇರೆಯೂರುಗಳೆಲ್ಲ ಹಬ್ಬು, ಅಲ್ಲಿ ಯಾವುದೇ ಸೌಲಭ್ಯಗಳಿಲ್ಲ, ಇರಾನಿ ಬಂಧುಗಳು, ಡ್ರಗ್ಸ್ ಇವೇ ನಿತ್ಯ ಜೀವನಕ್ಕೆ, ಅದಕ್ಕೆ ಅಲ್ಲಿoದ ಬಂದು ಸಾಯೋದು, ಗಲ್ಫ್ ರಾಜ್ಯಗಳ ಬಿಕ್ಕಟ್ಟಿನಿಂದ ಮತ್ತಷ್ಟು ವಲಸೆ ಖಂಡಿತ. pic.twitter.com/tiqkYqiU71
— ₘₒₜᵢᵥₐₜₑd!ₗᵢₗ!Dₑₘₒₙ (@AryakavyaA) March 7, 2026
"ಕರ್ನಾಟಕಕ್ಕಿಂತ ಹೆಚ್ಚಾಗಿ ಕೇರಳಕ್ಕೆ ಹೋಗುವ ವಂದೇ ಭಾರತ್ ರೈಲುಗಳೇ ಜಾಸ್ತಿ ಇವೆ. ಅಲ್ಲಿ ಅಷ್ಟು ಅಭಿವೃದ್ಧಿ ಇದ್ದರೆ ಎಲ್ಲರೂ ಇಲ್ಲೇಕೆ ಬರುತ್ತಾರೆ?" ಎಂದು ಅನೇಕರು ಕುಟುಕಿದ್ದಾರೆ. ಬೆಂಗಳೂರು ಎಲ್ಲರನ್ನೂ ಸಲಹುವ ತಾಯಿ ಅನ್ನೋದು ನಿಜ, ಆದರೆ ಅದು ಕನ್ನಡಿಗರ ಸ್ವಾಭಿಮಾನವನ್ನು ಬಲಿಗೊಟ್ಟು ಅಲ್ಲ ಎಂದು ಕನ್ನಡಿಗರು ಒಕ್ಕೊರಲ ಧ್ವನಿ ಎತ್ತಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂಬ ಭಯ ಸ್ಥಳೀಯರಲ್ಲಿ ಹೆಚ್ಚಾಗಿದೆ "ಸರ್ಕಾರ ಈ ಬಗ್ಗೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಾಣುತ್ತಿಲ್ಲ. ವಲಸಿಗರ ಹಾವಳಿಯನ್ನು ಹತ್ತಿಕ್ಕಲು ಮತ್ತು ಕನ್ನಡಿಗರ ಹಿತರಕ್ಷಣೆ ಮಾಡಲು ಕನ್ನಡ ಹೋರಾಟಗಾರರು ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಹುಡುಕಬೇಕಾದ ಸ್ಥಿತಿ ಬರಬಹುದು" ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ದೇವನಹಳ್ಳಿಯಲ್ಲೂ ಕೇರಳ ವಿದ್ಯಾರ್ಥಿಗಳ ಪುಂಡಾಟ
ಕೇರಳದವರು ಬೆಂಗಳೂರು ನಗರ ಮಾತ್ರವಲ್ಲದೆ ಹೊರವಲಯಗಳಲ್ಲೂ ತುಂಬಿ ತುಳುಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ದೇವನಹಳ್ಳಿ ಬಳಿಯ ಖಾಸಗಿ ಕಾಲೇಜಿನಲ್ಲಿ ಬಹುತೇಕರು ಮಲೆಯಾಳಿ ವಿದ್ಯಾರ್ಥಿಗಳೇ ದಾಖಲಾಗಿದ್ದು, ಇಲ್ಲಿನ ಬಾಡಿಗೆ ನಿವಾಸಗಳು, ಪಿಜಿಗಳಲ್ಲಿ ತಂಗಿದ್ದಾರೆ. ಇತ್ತೀಚೆಗೆ ಗುಂಪು ಕಟ್ಟಿಕೊಂಡು ಪುಂಡಾಟಿಕೆ ನಡೆಸುವುದು ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಡರಾತ್ರಿವರೆಗೂ ಬೈಕ್‌ಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ನಿದ್ರೆಗೆ ಭಂಗ ಉಂಟು ಮಾಡುತ್ತಾರೆ. ಅಲ್ಲದೆ ಕಾಲೇಜಿನಲ್ಲಿ ಕಿರಿಕ್ ಮಾಡಿ, ಗ್ಯಾಂಗ್ ಮಾಡಿಕೊಂಡು ನಿವಾಸಗಳ ಬಳಿ ಬಂದು ರಾತ್ರಿ ವೇಳೆ ಗಲಾಟೆ ಮಾಡುತ್ತಾರೆ. ಪೊಲೀಸರಿಂದಲೂ ಇವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ದೇವನಹಳ್ಳಿ ನಿವಾಸಿಗಳು ಆತಂಕ ಹೊರಹಾಕಿದ್ದು, ಮಲಯಾಳಿ ವಿದ್ಯಾರ್ಥಿಗಳು ಬಾಡಿಗೆ ಮನೆಗಳನ್ನೇ ಮಿನಿ ಬಾರ್‌ನಂತೆ ಮಾಡಿಕೊಂಡಿರುವ, ರಾಶಿ ರಾಶಿ ಮದ್ಯದ ಬಾಟಲಿಗಳನ್ನು ಜೋಡಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ.
-
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ










Click it and Unblock the Notifications