ಏರ್‌ ಪೋರ್ಟ್‌ನಂತೆ ಬದಲಾಗಲಿದೆ ಯಶವಂತಪುರ ರೈಲ್ವೆ ನಿಲ್ದಾಣ

ಬೆಂಗಳೂರು, ಆಗಸ್ಟ್ 26 : ಬೆಂಗಳೂರು ನಗರದ 2ನೇ ಹೆಚ್ಚು ಸಂಚಾರ ದಟ್ಟಣೆ ಇರುವ ರೈಲ್ವೆ ನಿಲ್ದಾಣ ಸಂಪೂರ್ಣ ಬದಲಾಗಲಿದೆ. ಹೌದು, ನಾಲ್ಕು ತಿಂಗಳಿನಲ್ಲಿ ನಿಲ್ದಾಣವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಲು ಇಲಾಖೆ ಯೋಜನೆ ರೂಪಿಸಿದೆ.

ಪ್ರತಿನಿತ್ಯ ಸುಮಾರು 1 ಲಕ್ಷ ಪ್ರಯಾಣಿಕರು ಯಶವಂತರಪುರ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಹಲವಾರು ಮೂಲ ಸೌಕರ್ಯಗಳ ಕೊರತೆಯನ್ನು ನಿಲ್ದಾಣ ಎದುರಿಸುತ್ತಿದೆ. ಆದ್ದರಿಂದ, ನಿಲ್ದಾಣ ಅಭಿವೃದ್ಧಿಗೆ ಕಾಮಗಾರಿ ಕೈಗೊಳ್ಳಲಾಗುತ್ತದೆ.

ಮೊದಲ ಹಂತದಲ್ಲಿ ರೈಲ್ವೆ ನಿಲ್ದಾಣವನ್ನು 15 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ. ನಿಲ್ದಾಣದ ಪ್ರವೇಶದ್ವಾರ (ಫ್ಲಾಟ್‌ ಫಾರಂ ನಂ 6) ಬಳಿ ವಿಮಾನ ನಿಲ್ದಾಣ ಮಾದರಿಯ ಪ್ರವೇಶದ್ವಾರ ನಿರ್ಮಾಣವಾಗಲಿದೆ.

Makeover For Yeshwanthpur railway station In 4 Months

ಯಶವಂತಪುರ ಮಾರುಕಟ್ಟೆ ಕಡೆಯಿಂದ ನಿಲ್ದಾಣಕ್ಕೆ ಆಗಮಿಸುವುದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈಗ ಮೆಟ್ರೋ ಸೇವೆಯೂ ಇರುವುದರಿಂದ ಹೊಸ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗುತ್ತದೆ.

ನಮ್ಮ ಮೆಟ್ರೋ, ಬೆಂಗಳೂರು-ತುಮಕೂರು ಹೆದ್ದಾರಿಯಿಂದ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ಸುಲಭವಾಗಿ ಆಗಮಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 2 ಹಂತದಲ್ಲಿ ಯಶವಂತಪುರ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಲು ಯೋಜನೆ ಸಿದ್ಧವಾಗಿದೆ.

ಕ್ಯಾಬ್, ಆಟೋ, ಬೈಕ್, ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಕೆಲವು ಫ್ಲಾಟ್‌ ಫಾರ್ಮ್‌ಗಳಿಗೆ ಗ್ರಾನೈಟ್ ಅಳವಡಿಕೆ ಕಾರ್ಯವೂ ನಡೆಯಲಿದೆ. ಸೆಲ್ಪೀ ಸ್ಪಾಟ್‌ಗಳನ್ನು ನಿರ್ಮಾಣ ಮಾಡುವ ಚಿಂತನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+