Get Updates
Get notified of breaking news, exclusive insights, and must-see stories!

ಬೆಂಗಳೂರು: ಮಾಗಡಿ-ಮೈಸೂರು ಪ್ರಮುಖ ರಸ್ತೆಯ ಉದ್ಘಾಟನೆ ದಿನಾಂಕದ ಬಗ್ಗೆ ಮಹತ್ವದ ಅಪ್ಡೇಟ್‌

ಬೆಂಗಳೂರು, ಜನವರಿ 8: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಕ್ರಾಂತಿಯೇ ಆಗುತ್ತಲಿದೆ. ಈ ನಡುವೆಯೇ ಹಲವು ಕಾರಣಾಂತರಗಳಿಂದ ಲೋಕಾರ್ಪಣೆ ದಿನಾಂಕ ಮುಂದೂಡಿಕೆ ಆಗುತ್ತಲಿವೆ. ಇದೀಗ ಬಹುನಿರೀಕ್ಷಿತ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾಗಡಿ ರಸ್ತೆಗೆ ಸಂಪರ್ಕಿಸುವ ಪ್ರಮುಖ ರಸ್ತೆ ಉದ್ಘಾಟನೆ ದಿನಾಂಕದ ಬಗ್ಗೆ ಮಹತ್ವದ ಅಪ್ಡೇಟ್‌ ಲಭ್ಯವಾಗಿದೆ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಯಾಗಿ ವಾಹನಗಳು ಸಹ ಸಂಚಾರ ಮಾಡುತ್ತಿವೆ. ಇನ್ನೂ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕ ಭಾಗದಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೂ, ಇದು ಇನ್ನೂ ಉದ್ಘಾಟನೆಯಾಗಿಲ್ಲ. ಇದಕ್ಕೆ ಕಾರಣವೂ ಇದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ವಿಳಂಬ ಹಿನ್ನೆಲೆ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಿದೆ. ಇದೇ ವರ್ಷದ ಜೂನ್‌ ಅಥವಾ ಜುಲೈನಲ್ಲಿ ಲೋಕಾರ್ಪಣೆ ಆಗಲಿದೆ ಎನ್ನುವ ಮಾಹಿತಿಯಿದೆ.

Major Road Connecting Bengaluru Mysuru Highway to Magadi Road to Open by End of March

ಉದ್ಘಾಟನೆ ಯಾವಾಗ?: ಇದೀಗ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಮಾಗಡಿ ರಸ್ತೆಗೆ ಸಂಪರ್ಕಿಸುವ ಮೇಜರ್‌ ಆರ್ಟೀರಿಯಲ್‌ ರಸ್ತೆಯನ್ನು ಮಾರ್ಚ್ ತಿಂಗಳ ಅಂತ್ಯಕ್ಕೆ ಉದ್ಘಾಟನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜನವರಿ ಆರಂಭದಲ್ಲಿ ಮೂರು ಪಥದೊಂದಿದೆ ಇದು ಉದ್ಘಾಟನೆ ಆಗಲಿದ ಎಂದು ಹೇಳಲಾಗಿತ್ತು.

ಉದ್ಘಾಟನೆ ದಿನಾಂಕ ಮುಂದೂಡಿಕೆ ಯಾಕೆ?: ಆದರೆ, ಇದೀಗ ಮಾರ್ಚ್ ಅಂತ್ಯದ ವೇಳೆಗೆ ಎಲ್ಲಾ ಆರು ಪಥಗಳು ಪೂರ್ಣಗೊಂಡ ನಂತರವೇ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ 10.75 ಕಿಲೋ ಮೀಟರ ಮೇಜರ್ ಆರ್ಟೀರಿಯಲ್‌ ರಸ್ತೆ ಉದ್ಘಾಟನೆ ಆಗಲಿದ ಎನ್ನುವ ಮಹತ್ವದ ಮಾಹಿತಿ ಹೊರಬಿದ್ದಿದೆ.

ನಿರ್ಣಾಯಕ ಬಾಕ್ಸ್-ಪುಶ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಾಡಪ್ರಭು ಕೆಂಪೇಗೌಡ ಲೇಔಟ್ ಅನ್ನು ಸಂಪರ್ಕಿಸುವ ಚಲ್ಲಘಟ್ಟ ಬಳಿಯ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣ ಮಾಡಲಾಗುತ್ತುದೆ. ಅದು ಸಂಪೂರ್ಣವಾಗಿ ಮುಕ್ತಾಯವಾದ ಬಳಿಕ ಜನವರಿ 14ರ ಸುಮಾರಿಗೆ ಮೊದಲ ಮೂರು ಪಥಗಳನ್ನು ಉದ್ಘಾಟನೆ ಮಾಡಲಾಗುವುದು ಎಂದು ಯೋಜನೆ ರೂಪಿಸಲಾಗಿತ್ತು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಂತವನ್ನು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಏಕೆಂದರೆ ಅಂಡರ್‌ಪಾಸ್‌ ಯೋಜನೆಯ ಅತ್ಯಂತ ತಾಂತ್ರಿಕವಾಗಿ ಸಂಕೀರ್ಣವಾದ ಭಾಗಗಳಲ್ಲಿ ಒಂದಾಗಿದೆ. ಮೂರು ಲೇನ್‌ಗಳಿಗಾಗಿ ಬಾಕ್ಸ್‌ ಪುಶಿಂ ಪ್ರಕ್ರಿಯೆ ಈಗ ಪೂರ್ಣಗೊಂಡಿದ್ದು, ಎಂಎಆರ್‌ ಪೂರ್ಣಗೊಳಿಸಲು ಮುಂದಿನ ಪ್ರಿಕಾಸ್ಟ್‌ ಬಾಕ್ಸ್‌ ಅನ್ನು ಪುಶಿಂಗ್ ಮಾಡಲು ಸಿದ್ಧಪಡಿಸಲಾಗುತ್ತಿದೆ.

ಆದರೆ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಅವರ ನಿರ್ದೇಶನದ ಬಳಿಕ, ಸಂಚಾರ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಆರು ಲೇನ್‌ಗಳು ಪೂರ್ಣಗೊಂಡ ನಂತರವೇ ಕಾರಿಡಾರ್‌ ಅನ್ನು ತೆರೆಯಲು ಬಿಡಿಎ ನಿರ್ಧರಿಸಿದೆ. ಇದರಿಂದ ಭಾಗಶಃ ಉದ್ಘಾಟನೆ ಯೋಜನೆಯನ್ನು ಕೈಬಿಡಲಾಗಿದ್ದು, ಉಳಿದ ಅಂಡರ್‌ಪಾಸ್‌ ಕೆಲಸಗಳು ಹಾಗೂ ಸಂಬಂಧಿತ ಸಿವಿಲ್‌ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸುವುದರತ್ತ ಗಮನ ಹರಿಸಲಾಗಿದೆ.

ಎರಡನೇ ಹಂತದ ಬಾಕ್ಸ್ ಪುಶಿಂಗ್‌ಗೆ ಅಗತ್ಯ ಇರುವ ಉಕ್ಕಿನ ಗಿರ್ಡರ್‌ಗಳನ್ನು ತೆಗೆದುಹಾಕಲು ಮತ್ತು ಮರುಸ್ಥಾಪಿಸಲು ರೈಲು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿರು ಹಿನ್ನೆಲೆ ಬಿಡಿಎ ನೈಋತ್ಯ ರೈಲ್ವೆಯಿಂದ ಸಂಘಟಿತ ಬ್ಲಾಕ್‌ಗಳನ್ನು ಕೋರಿದೆ. ಅಧಿಕಾರಿಗಳ ಪ್ರಕಾರ, ಅಸ್ತಿತ್ವದಲ್ಲಿರುವ ಉಕ್ಕಿನ ಗಿರ್ಡರ್ ಅನ್ನು ಜನವರಿ 8ರಂದು ತೆಗೆದುಹಾಕಲು ನಿರ್ಧರಿಸಲಾಗಿದ್ದು, ಜನವರಿ 22ರಂದು ಅದರ ಮರುಸ್ಥಾಪನೆಗೆ ರೈಲ್ವೆ ಅನುಮತಿ ನೀಡಿದೆ. ನಂತರ ರಸ್ತೆಯ ಉಳಿದ ಅರ್ಧಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣ ಪ್ರಾರಂಭ ಆಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+