ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು

ಬೆಂಗಳೂರು, ಮಾರ್ಚ್ 14; ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಬೆಂಗಳೂರು ನಗರದಿಂದ ಸಂಚಾರ ಆರಂಭಿಸಿದೆ. ಐಆರ್‌ಸಿಟಿಸಿ ರೈಲು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿದ್ದು, ಮೊದಲ ಬಾರಿಗೆ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಭಾನುವಾರ ಯಶವಂತಪುರ ರೈಲು ನಿಲ್ದಾಣದಿಂದ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭವಾಯಿತು. 'ಪ್ರೈಡ್ ಆಫ್ ಕರ್ನಾಟಕ' ಪ್ಯಾಕೇಜ್ ಪ್ರವಾಸಕ್ಕೆ ಇಂದು ಚಾಲನೆ ನೀಡಲಾಗಿದೆ.

ರೈಲು ನಿಲ್ದಾಣದಲ್ಲಿ ಗೋಲ್ಡನ್ ಚಾರಿಯಟ್ ರೈಲು ಸಿಬ್ಬಂದಿಗಳು ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬೇಸಿಗೆ ರಜೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಐಷಾರಾಮಿ ರೈಲು ಸಂಚಾರವನ್ನು ಆರಂಭಿಸಲಾಗಿದೆ.

2008ರಲ್ಲಿ ಮೊದಲು ಗೋಲ್ಡನ್ ಚಾರಿಯಟ್ ಸಂಚಾರ ಆರಂಭಿಸಲಾಗಿತ್ತು. ಆಗ ಕೆಎಸ್‌ಟಿಡಿಸಿ ರೈಲಿನ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ನಷ್ಟದ ಕಾರಣ ರೈಲು ಸಂಚಾರ ರದ್ದಾಗಿತ್ತು. 2020ರಲ್ಲಿ ಐಆರ್‌ಸಿಟಿಸಿ ರೈಲು ನಿರ್ವಹಣೆಯನ್ನು ಪಡೆದುಕೊಂಡಿತ್ತು.

ಪ್ರವಾಸಿ ಪ್ಯಾಕೇಜ್‌ಗಳು

ಪ್ರವಾಸಿ ಪ್ಯಾಕೇಜ್‌ಗಳು

ಐಆರ್‌ಸಿಟಿಸಿ 6 ರಾತ್ರಿ 7 ಹಗಲುಗಳ ಪ್ರವಾಸಿ ಪ್ಯಾಕೇಜ್‌ ಪ್ರಯಾಣವನ್ನು ಭಾನುವಾರ ಆರಂಭಿಸಿದೆ. ಬೆಂಗಳೂರು ನಗರದಿಂದ ಹೊರಟಿರುವ ರೈಲು ಬಂಡೀಪುರ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಐಹೊಳೆ, ಪಟ್ಟದಕಲ್ಲು ಮತ್ತು ಗೋವಾಕ್ಕೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದೆ.

ಪ್ರವಾಸಿ ಪ್ಯಾಕೇಜ್ 2

ಪ್ರವಾಸಿ ಪ್ಯಾಕೇಜ್ 2

ಐಆರ್‌ಸಿಟಿಸಿ 3 ರಾತ್ರಿ 4 ಹಗಲುಗಳ ಮತ್ತೊಂದು ಪ್ಯಾಕೇಜ್ ಸಂಚಾರವನ್ನು ಮಾರ್ಚ್ 21ರಿಂದ ಆರಂಭಿಸಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮೈಸೂರು, ಹಂಪಿ, ಮಹಾಬಲಿಪುರಂಗೆ ಭೇಟಿ ನೀಡಿ ಬೆಂಗಳೂರಿಗೆ ವಾಪಸ್ ಆಗಲಿದೆ.

ಗೋಲ್ಡನ್ ಚಾರಿಯಟ್ ಸಂಚಾರ

ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲಿನಲ್ಲಿ ಹಲವು ವಿಶೇಷತೆಗಳಿವೆ. ಐಆರ್‌ಸಿಟಿಸಿ ರೈಲು ಸಂಚಾರದ ಬಗ್ಗೆ ಟ್ವೀಟ್‌ ಮಾಡಿದೆ.

Recommended Video

    ಮಹಾರಾಷ್ಟ್ರ- ಕರ್ನಾಟಕ ಬಸ್ ಸಂಚಾರ ಸ್ಥಗಿತ | Oneindia Kannada

    ವಿಶೇಷ ವಿನ್ಯಾಸಗಳು

    ಐಆರ್‌ಸಿಟಿಸಿ ಪ್ರವಾಸಿ ರೈಲನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ. ಪ್ರವಾಸಿಗರಿಗೆ ರೈಲು ಬೋಗಿಯೊಳಗೆ ಅನೇಕ ಸೌಲಭ್ಯಗಳು ಸಿಗಲಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+