ಬೆಂಗಳೂರಿನ ಹೃದಯಭಾಗದಲ್ಲೇ ʼಪ್ರಣಯ ಪ್ರೇಮಿʼಗಳು ಬೈಕ್‌ನಲ್ಲಿ ಮಾಡಿದ್ದೇನು?

ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಣಯ ಪಕ್ಷಿಗಳ ವರ್ತನೆ ಮಿತಿಮೀರಿದೆ. ಮೊದಲೆಲ್ಲ. ಪಾರ್ಕು, ಪಬ್ಬು ಅನ್ನೋ ಕಡೆ ಇಂತಹ ಮಾತುಗಳು ಕೇಳಿ ಬರುತ್ತಿದ್ದವು. ಇತ್ತೀಚಿನ ಹೊಸ ಟ್ರೆಂಡ್‌ ಅಂದ್ರೆ ರೋಡ್‌ ರೋಡಲ್ಲೂ ಪ್ರಣಯ ಪಕ್ಷಿಗಳು ಮಾಡ್ತಿರೋ ಅವಾಂತರಗಳು.

ಇವು ಒಂದೊಂದಲ್ಲ.. ಬೈಕ್ ನಲ್ಲಿ ಸುಮ್ಮನೆ ಹೋಗುವ ಬದಲು ಯುವಕ-ಯುವತಿಯರ ಮಾಡುತ್ತಿರುವ ಅಸಭ್ಯ ಹಾಗೂ ಅಪಾಯಕಾರಿ ನಡವಳಿಕೆಗಳು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಿರಿಕಿರಿ ಮೂಡಿಸುವಂತಿವೆ. ಇಂತಹ ವಿಡಿಯೋಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುವುದನ್ನು ನೋಡುತ್ತಲೇ ಇದ್ದೇವೆ.

Lovers Drive Dangerously On Bike In Bengaluru

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್‌ ಮೇಲೆ ರೋಡ್‌ನಲ್ಲೇ ರೊಮ್ಯಾನ್ಸ್‌ ಮಾಡ್ತಿದ್ದ ರೋಮಿಯೋನ ಪೊಲೀಸರು ಹಿಡಿದಿದ್ದರು. ಇದೀಗ ಇಂತದ್ದೇ ಮತ್ತೊಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಾವೆಲ್ಲ ಸಣ್ಣ ಮಕ್ಕಳನ್ನು ಬೈಕ್‌ ಟ್ಯಾಂಕಿನ ಮುಂದೆ ಕೂರಿಸಿಕೊಂಡು ಜೋಪಾನವಾಗಿ ಒಂದು ರೌಂಡ್‌ ಹಾಕಿಸಿಬಿಡುತ್ತಿದ್ದೆವು. ಆದರೆ, ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ನ ಮಕ್ಕಳಂತೆ ಮುಂದೆ ಕೂರಿಸಿಕೊಂಡು, ತಾನೇ ಬೈಕ್‌ ಚಲಾಯಿಸಿದ್ದಾನೆ.

ಇದು ಯಾವುದೋ ಲೇಔಟ್‌ ಅಥವಾ ಜನರಿಲ್ಲದ ರೋಡ್‌ನಲ್ಲಿ ನಡೆದಿರೋ ಘಟನೆಯೇನಲ್ಲ. ಬೆಂಗಳೂರಿನ ಕೇಂದ್ರ ಭಾಗದಲ್ಲೇ ಈತ ರಾಜಾರೋಷವಾಗಿ ತನ್ನ ಪ್ರೇಯಸಿಯೊಂದಿಗೆ ರೊಮ್ಯಾನ್ಸ್‌ ಮಾಡುತ್ತಾ ತನ್ನ ಬೈಕ್‌ ಓಡಿಸಿದ್ದಾನೆ. ಇನ್ನು ಮುಂದೆ ಕೂತಿದ್ದ ತನ್ನ ಗರ್ಲ್‌ಫ್ರೆಂಡ್‌ಗೆ ಹೆಲ್ಮೆಟ್‌ ಕೂಡ ಹಾಕಿಸಿಲ್ಲ. ತಾನು ಮಾತ್ರ ಹೆಲ್ಮೆಟ್‌ ಧರಿಸಿ, ಈ ರೀತಿ ವರ್ತಿಸಿದ್ದಾನೆ.

Lovers Drive Dangerously On Bike In Bengaluru

ಇದನ್ನು ಕಂಡ ಸಾರ್ವಜನಿಕರು ಇವರಿಬ್ಬರ ಆಟಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಹೈಗ್ರೌಂಡ್ಸ್‌ ಪೊಲೀಸರವರೆಗೂ ತಲುಪಿದ್ದು, ಆ ರೋಮಿಯೋ ಅನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಈ ವರ್ತನೆಗೆ ಫುಲ್‌ ಕ್ಲಾಸ್‌ ಕೂಡ ಆಗಿದೆ. ಬೈಕ್‌ ಚಲಾಯಿಸುತ್ತಿದ್ದ ಯುವಕನ ವಿವರಗಳನ್ನು ಪೊಲೀಸರು ಹಂಚಿಕೊಂಡಿಲ್ಲ.

ಈ ವಿಡಿಯೋ ಪೋಸ್ಟ್‌ ಮಾಡಿರುವ ಸಾರ್ವಜನಿಕರು, ಈ ವರ್ತನೆಯು ಬೆಂಗಳೂರು ನಗರ ಪೊಲೀಸರ ಗಮನಕ್ಕೆ ಬಂದಿರಬಹುದು. ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲೂ ಸೆರೆಯಾಗಿರಬಹುದು. ಇಂತಹ ಕಣ್ಗಾವಲು ಇದ್ದರೂ ಬೆಂಗಳೂರು ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.

ವಿಡಿಯೋದಲ್ಲಿ ಸೆರೆಯಾಗಿರುವಂತೆ ಈ ಜೋಡಿ ರಾಜಭವನ, ಚಾಲುಕ್ಯ ಸರ್ಕಲ್‌ ಹಾಗೂ ರೇಸ್‌ಕೋರ್ಸ್‌ ಮುಖ್ಯರಸ್ತೆಗಳಲ್ಲಿ ಈ ರೀತಿ ಅಪಾಯಕಾರಿಯಾಗಿ ವರ್ತಿಸಿದ್ದು, ರಸ್ತೆಯಲ್ಲಿದ್ದ ಇನ್ನಿತರೆ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಇತ್ತೀಚೆಗೆ ಮುಖ್ಯರಸ್ತೆಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+