ಬೆಂಗಳೂರಲ್ಲಿ ಮಹಿಳೆ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು

ಬೆಂಗಳೂರು, ಜೂನ್ 8: ಮಹಿಳೆಯ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವುದು ದೊರೆತಿದೆ. ಮಹಿಳೆಯ ಪ್ರಿಯಕರನೇ ಆಕೆಯನ್ನು ಕೊಲೆ ಮಾಡಿ ಕತೆ ಕಟ್ಟಿದ್ದ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಕೆಜಿ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ನಾಪತ್ತೆ ಹಾಗೂ ಕೊಲೆ ಪ್ರಕರಣದ ಬೆನ್ನತ್ತಿದ ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದ ತಂಡ ನಿಗೂಢ ಸತ್ಯವನ್ನು ಬಯಲಿಗೆಳೆದಿದೆ.

ತಮಿಳುನಾಡಿನಲ್ಲಿ ಪತಿಯ ಕಡೆಯವರು ಮೃತಪಟ್ಟಿದ್ದಾರೆ, ಅವರನ್ನು ನೋಡಿಕೊಂಡು ಬರುತ್ತೇಎ ಎಂದು ತನ್ನ ಏಳು ತಿಂಗಳ ಮಗುವಿನೊಂದಿಗೆ ಮೇ 12ರಂದು ತೆರಳಿದ್ದ ಸುನಿತಾ ವಾಪಸ್ ಬಂದಿರಲಿಲ್ಲ. ಈ ಕುರಿತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಸಕಲೇಶಪುರದ ಪೊಲೀಸರಿಗೆ ಮೇ 13ರ ಮಧ್ಯಾಹ್ನ ಮೃತದೇಹ ಸಿಕ್ಕಿತ್ತು. ಅವರು ಅಪರಿಚಿತ ಮಹಿಳೆಯ ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡು ಐದು ದಿನಗಳ ಕಾಲ ಕಾದಿದ್ದು ಶವ ಸಂಸ್ಕಾರ ನೆರವೇರಿಸಿದ್ದರು. ಶುಕ್ರವಾರ ರಾತ್ರಿ ಸಕಲೇಶಪುರ ಪೊಲೀಸರು ಬೆಂಗಳೂರು ಸಿಸಿಸಬಿ ಕಚೇರಿಗೆ ಬಂದು ಬಂಧಿತರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Lover murders woman and later tells false story

ನಡೆದ ಘಟನೆ: ಒಂದೆರೆಡು ದಿನ ಟ್ರಿಪ್ ಹೋಗಿ ಬರೋಣ ಎಂದು ಡೇವಿಡ್ ಸುನಿತಾಳನ್ನು ಕರೆದಿದ್ದ, ತಮಿಳುನಾಡಿನಲ್ಲಿ ಗಂಡನ ಕಡೆಯವರು ಮೃತಪಟ್ಟಿದ್ದಾರೆ ಅವರನ್ನು ನೋಡಿಕೊಂಡು ಬರುತ್ತೇನೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಆಕೆ ಹೊರಟಿದ್ದಳು.

ಬಳಿಕ ಕಾರಿನಲ್ಲಿ ಸಕಲೇಶಪುರಕ್ಕೆ ಕರೆದೊಯ್ದು ಮಾರ್ಗಮಧ್ಯೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಘಾಟಿಯಲ್ಲಿ ಎಸೆದು ಬಂದಿದ್ದ. ಬಳಿಕ ಮರುದಿನ ಬೆಳಗ್ಗೆ ಆಕೆಯ ಮಗುವನ್ನು ಮನೆಗೆ ಹಿಂದಿರುಗಿಸಿದ್ದ. ಸುನಿತಾ ಮೊದಲ ಗಂಡನ ಜೊತೆ ಹೋಗಿದ್ದಾಳೆ ಅದಕ್ಕೇ ಮಗುವನ್ನು ಕೊಟ್ಟು ಕಳುಹಿಸಿದ್ದಾಳೆ ಎಂದು ಕತೆ ಕಟ್ಟಿದ್ದ.

ಆಕೆಗೆ ಮದುವೆಯಾಗಿರುವ ಸಂಗತಿ ಡೇವಿಡ್‌ಗೂ ಗೊತ್ತಿತ್ತು, ಆದರೆ ಅದಕ್ಕೂ ಮುನ್ನವೂ ಆಕೆಗೆ ಇನ್ನೊಂದು ಮದುವೆಯಾಗಿದ್ದ ಸಂಗತಿ ಆಕೆ ಮುಚ್ಚಿದ್ದಳು, ಆ ವಿಷಯ ಆತನಿಗೆ ತಿಳಿದ ಬಳಿಕ ಅವರಿಬ್ಬರ ಮಧ್ಯೆ ಸಂಬಂಧ ಸರಿ ಇರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+