ಬೆಂಗಳೂರು ಬಿಜಿಎಸ್‌ ಫ್ಲೈಓವರ್‌ನಲ್ಲಿ ನಟ್‌ಬೋಲ್ಟ್‌ ಕಳಚಿ ಟ್ರಾಫಿಕ್!

ಬೆಂಗಳೂರು ನವೆಂಬರ್ 23: ಬೆಂಗಳೂರು ಮೆಲ್ಸೇತುವೆ, ರಸ್ತೆಗುಂಡಿ, ರಸ್ತೆಗಳು ಮುಖ್ಯವಾಗಿ ಸಂಚಾರ ದಟ್ಟಣೆಯಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅದೇ ರೀತಿ ಈಗ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ (ಬಿಜಿಎಸ್)ಯಿಂದ ಮತ್ತೆ ಸುದ್ದಿಯಲ್ಲಿದೆ.

ಬಿಜಿಎಸ್ ಮೇಲ್ಸೇತುವೆಯಲ್ಲಿನ ಜಾಯಿಂಟ್‌ನ ಒಂದು ಭಾಗದಲ್ಲಿರುವ ಮೂರ್ನಾಲ್ಕು ನಟ್‌ಬೋಲ್ಟ್‌ಗಳು ಕಳಚಿದ ಪರಿಣಾಮ ಮಂಗಳವಾರ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಈ ಮಾರ್ಗವಾಗಿ ಓಡಾಡುವ ವಾಹನ ಸವಾರರು ಸಂಚಾರ ದಟ್ಟಣೆ ಸಮಸ್ಯೆಯಿಂದ ತೊಂದರೆ ಅನುಭವಿಸಿದರು.

ಮಧ್ಯಾಹ್ನವೇ ಬಿಜಿಎಸ್ ಮೇಲ್ಸೇತುವೆಯಲ್ಲಿ ಜಾಯಿಂಟ್ ಭಾಗದಲ್ಲಿನ ನಟ್‌ಗಳು ಸಡಿಲಗೊಂಡು ಕಳಚಿವೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಂಚಾರಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರಲ್ಲಿ ಎಚ್ಚರಿಕೆ ಮೂಡಿಸಿದರು. ಇಷ್ಟಾದರು ಬಿಬಿಎಂಪಿ ಸರ್ಕಲ್ ಹಾಗೂ ಪುರಸಭೆಯಿಂದ ಕೆ.ಆರ್‌.ಮಾರುಕಟ್ಟೆ ಮಾರ್ಗವಾಗಿ ಮೈಸೂರು ರಸ್ತೆಗೆ ಸಾಗುವ ವಾಹನ ಸವಾರರು ಮಧ್ಯರಾತ್ರಿವರೆಗೆ ಸಂಚಾರ ದಟ್ಟಣೆಗೆ ಸಿಲುಕಿದರು.

Loose Nut Bolts of Joint in BGS Flyover Created Traffic Problem on Tuesday

ಮಧ್ಯಾಹ್ನ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಹೊರ ಬಿದ್ದ ನಟ್‌ಬೋಲ್ಟ್‌ ಅನ್ನು ಮತ್ತೆ ಜೋಡಿಸುವ ಕೆಲಸ ಮಾಡಿದರು. ಆದರೆ ಅದಕ್ಕೆಂದೆ ಒಂದಷ್ಟು ಪರಿಣಿತರು, ತಂತ್ರಜ್ಞಾನ ಅವಶ್ಯಕತೆ ಇತ್ತು. ಹೀಗಾಗಿ ಅವರನ್ನು ಕರೆತಂದು ಕೆಲಸ ಮಾಡಿಸಲಾಯಿತಾದರೂ ಇನ್ನೂ ಎರಡು ಗಂಟೆಗಳ ಕೆಲಸ ಬಾಕಿ ಉಳಿಯಿತು ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ವಿನಯ್ ಅವರು ತಿಳಿಸಿದರು.

ಇಂದು 2-3ಗಂಟೆ ಕೆಲಸ ಮಾಡಬೇಕಿದೆ; ಮಂಗಳವಾರ ತುರ್ತು ಕಾಮಗಾರಿ ಮುಗಿಸಿದ್ದು, ರಾತ್ರಿ 8ಗಂಟೆಯ ಸುಮಾರಿಗೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಬುಧವಾರವು ಅಂತಿಮ ಹಂತದ ಒಂದಷ್ಟು ಜಾಯಿಂಟ್ ಜೋಡಣಾ ಕೆಲಸ ಮಾಡಬೇಕಿದೆ. ಅದಕ್ಕಾಗಿ ಸುಮಾರು 2-3ಗಂಟೆಗಳು ಹಿಡಿಯುವ ಸಾಧ್ಯತೆ ಇದೆ. ವಾಹನ ಸವಾರರು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೆಲಸ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Loose Nut Bolts of Joint in BGS Flyover Created Traffic Problem on Tuesday

ಇಂದಿನಿಂದ ಮೇಲ್ಸೇತುವೆ ಪರಿವೀಕ್ಷಣೆ; ಬೆಂಗಳೂರಿನಲ್ಲಿರುವ ಎಲ್ಲ 47 ಮೇಲ್ಸೇತುವೆ ಪರಿವೀಕ್ಷಣೆ ಕಾರ್ಯ ನಡೆಸಲು ಬಿಬಿಎಂಪಿ ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಈಗಾಗಲೇ ಸೂಚಿಸಲಾಗಿದೆ. ಕಾಲಕಾಲಕ್ಕೆ ಮೇಲ್ಸೇತುವೆಗಳ ಪರಿವೀಕ್ಷಣೆ ಆಗಬೇಕು. ಈ ಬಗ್ಗೆ ಸದಾ ಮುಂಜಾಗೃತ ವಹಿಸಬೇಕು. ಈ ಸಂಬಂಧ ಬುಧವಾರವೇ ಕಾರ್ಯಾಚರಣೆ ಶುರುವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+