ಕನ್ನಡ ಬಲ್ಲವರಿಗೆ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ, ಅರ್ಜಿ ಹಾಕಿ
ಬೆಂಗಳೂರು, ಏ.23: ಆನ್ ಲೈನ್ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೂಡಲೇ ತಮ್ಮ ಸ್ವವಿವರಗಳನ್ನು ಕಳಿಸಿದರೆ ನಾಳೆಗೆ ಸಂದರ್ಶನಕ್ಕೆ ಹಾಜರಾಗಬಹುದು.
ಸಮುದಾಯ ಆಧಾರಿತ ಕ್ಲಿಕ್.ಇನ್ ವೆಬ್ ತಾಣದಲ್ಲಿ ಆನ್ ಲೈನ್ ವರ್ಗೀಕೃತ ಜಾಹೀರಾತುಗಳು, ಉದ್ಯೋಗ, ಮಾರಾಟ, ಸೇವೆಗಳು, ಸ್ಥಳೀಯ ಸಮುದಾಯ, ಕಾರ್ಯಕ್ರಮಗಳ ವಿವರಗಳು ಲಭ್ಯವಿರುತ್ತದೆ. ಈಗ ಮಾರಾಟ ವಿಭಾಗದ ಕಾರ್ಯಕಾರಿ ಹುದ್ದೆಗೆ ಪದವಿಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆ ವಿವರ: ಸೇಲ್ಸ್ ಎಕ್ಸಿಕ್ಯೂಟಿವ್
ಅನುಭವ: 6 ಪ್ಲಸ್ ತಿಂಗಳು
ವಿದ್ಯಾರ್ಹತೆ: ಪದವಿ/ ಸ್ನಾತಕೋತ್ತರ ಪದವಿ
ಹುದ್ದೆ ಸ್ಥಳ: ಬೆಂಗಳೂರು

ಅಭ್ಯರ್ಥಿಗೆ ಬೇಕಾದ ಅರ್ಹತೆ:
* ರಿಯಲ್ ಎಸ್ಟೇಟ್ ಏಜೆಂಟ್, ಕನ್ಸಲ್ಟೆಂಟ್, ಕಾರ್ ಡೀಲರ್.. ಮುಂತಾದವರಿಗೆ ಜಾಹೀರಾತು ಮಾರಾಟ ಮಾಡಬೇಕಾಗುತ್ತದೆ.
* ಇತ್ತೀಚಿನ ಮಾರುಕಟ್ಟೆ ದರ, ಉತ್ಪನ್ನ, ಹೊಸ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಮಾಡುವ ಪರಿಣತಿ ಇರಬೇಕು.
* ಗ್ರಾಹಕರ ಜೊತೆ ನೇರವಾಗಿ ಮಾತುಕತೆ ನಡೆಸಿ ಸಂದರ್ಶನ ಏರ್ಪಡಿಸುವ ಹೊಣೆ ಹೊರಬೇಕಾಗುತ್ತದೆ.
* ಮಾರಾಟ ವರದಿಯನ್ನು ದಿನ/ವಾರ ಆಧಾರದ ಮೇಲೆ ತಯಾರಿಸಿ ನೀಡುವಂತಿರಬೇಕು.
* ಕಡ್ಡಾಯವಾಗಿ ಸುಲಲಿತವಾಗಿ ಕನ್ನಡ ಮಾತನಾಡಲು ಬರವಂಥ ಅಭ್ಯರ್ಥಿಯಾಗಿರಬೇಕು.
ನಿಮ್ಮಲ್ಲಿ ಈ ಅರ್ಹತೆಗಳಿದ್ದರೆ ತಕ್ಷಣವೇ ನಿಮ್ಮ ಸ್ವವಿವರವುಳ್ಳ ಬಯೋಡೇಟಾವನ್ನು ಈ ಇಮೇಲ್ ವಿಳಾಸಕ್ಕೆ ಕಳಿಸಿ
[email protected]












Click it and Unblock the Notifications