ಫೇಸ್ ಬುಕ್: ಅಮಿತಾಬ್ ಬಚ್ಚನ್ ಗಿಂತ ಇವರೇ ಮುಂದು

Lok Sabha Polls- BJP Prime Minister candidate Narendra Modi more popular than Amitabh Bachchan on Facebook
ಬೆಂಗಳೂರು, ಜ.30: ಲೋಕಸಭಾ ಚುನಾವಣೆ ದಿನೇ ದಿನೇ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಿಮಾಲಯದತ್ತ ಏರುತ್ತಿದೆ. ಅದೇ ರೀತಿ ಬಾಲಿವುಡ್ ರಂಗದಲ್ಲಿ ಯಾರಪ್ಪಾ ಖ್ಯಾತವಂತರು ಅಂತ ನೋಡಿದರೆ ದೈತ್ಯ ಅಮಿತಾಬ್ ಬಚ್ಚನ್ ಮೇರುಪರ್ವತದಂತೆ ಕಾಣಬರುತ್ತಾರೆ. ಗಮನಾರ್ಹವೆಂದರೆ ಇವರಿಬ್ಬರೂ ಆತ್ಮೀಯರು.

ಹೀಗಿರುವಾಗ ಇವರಿಬ್ಬರ ಪೈಕಿ ಯಾರಪ್ಪಾ ಹೆಚ್ಚು ಪ್ರಖ್ಯಾತರು ಅಂದರೆ ನರೇಂದ್ರ ಮೋದಿಯೇ ಒಂದು ಹೆಜ್ಜೆ ಮುಂದಿದ್ದಾರೆ. ಸಾಮಾಜಿಕ ಜಾಲತಾಣವಾದ Facebook ಅಂಕಿಸಂಖ್ಯೆಗಳ ಪ್ರಕಾರ ನರೇಂದ್ರ ಮೋದಿಗೆ 9,267,117 likes ಇದ್ದು, 1,313,474 ಮಂದಿ ಇದರ ಬಗ್ಗೆ ಚರ್ಚೆಯಲ್ಲಿ ತೊಡಗುತ್ತಾರೆ. ಇನ್ನು ಮೇರುನಟ ಅಮಿತಾಬ್ ಬಚ್ಚನ್ ಗೆ 9,241,977 like ಗಳಿವೆ - 6,29,905 ಮಂದಿ ಇದರ ಬಗ್ಗೆ ಮಾತನಾಡುತ್ತಾರೆ. ಈ ಮಧ್ಯೆ, Google plus ಅನ್ನು ಉಪಯೋಗಿಸಿದ ಮೊದಲ ಭಾರತೀಯ ರಾಜಕಾರಣಿ ಮೋದಿ.

ಇದನ್ನೆಲ್ಲಾ ತಾಳೆ ಹಾಕಿ ನೋಡಿದಾಗ ಮೋದಿ ನಾಗಾಲೋಟದಲ್ಲಿರುವುದು ಕಂಡುಬರುತ್ತದೆ. ಇದರಿಂದ ಸಂತಸಗೊಂಡಿರುವ ಭಾರತೀಯ ಜನತಾ ಪಕ್ಷವು ಲೋಕಸಭಾ ಚುನಾವಣೆಗೂ ಮುನ್ನ ಜನ ಮೋದಿ ಅವರತ್ತ ವಾಲುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದಿದೆ.

ಆದರೆ ಟ್ವಿಟ್ಟರ್ ವಿಷಯಕ್ಕೆ ಬಂದರೆ ನರೇಂದ್ರ ಮೋದಿ ಅವರಿಗೆ 33 ಲಕ್ಷ ಮಂದಿ followers ಇದ್ದಾರೆ. ಅದೇ ಅಮಿತಾಭ್ ಅವರನ್ನು 78.8 ಲಕ್ಷ ಮಂದಿ follow ಮಾಡುತ್ತಿದ್ದಾರೆ. ಆದರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಶಿ ತರೂರ್ ಅವರನ್ನು ಬಿಟ್ಟರೆ ಹೆಚ್ಚು followers ಇರುವುದು ಮೋದಿ ಅವರಿಗೇ. ಸಚಿವ ಶಶಿ ತರೂರ್ ಅವರನ್ನು 20 ಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಾರೆ. ಅಂದಹಾಗೆ, ಮೋದಿ Facebook ಮತ್ತು Twitter ಖಾತೆ ತೆರೆದಿದ್ದು 2009ರಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+