Get Updates
Get notified of breaking news, exclusive insights, and must-see stories!

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೆಹಲಿ ಭೇಟಿ ದಿಢೀರ್ ರದ್ದು

Recommended Video

      Exit Poll 2019: ವಿರೋಧಪಕ್ಷಗಳ ಜತೆಗೂಡಿ ಚುನಾವಣಾ ಆಯೋಗ ಭೇಟಿ ಮಾಡಬೇಕಿತ್ತು

      ಬೆಂಗಳೂರು, ಮೇ 21: ಇತರೆ ವಿರೋಧಪಕ್ಷಗಳ ಜತೆಗೂಡಿ ಚುನಾವಣಾ ಆಯೋಗವನ್ನು ಭೇಟಿ ಮಾಡುವ ಸಲುವಾಗಿ ದೆಹಲಿಗೆ ಹೊರಟಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಯಾಣ ರದ್ದಾಗಿದೆ.

      ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದ ಬೆನ್ನಲ್ಲೇ ಎನ್‌ಡಿಎ ವಿರೋಧ ಪಕ್ಷಗಳು ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಕಳವಳ ವ್ಯಕ್ತಪಡಿಸಿ ಚುನಾವಣಾ ಆಯೋಗವನ್ನು ಮಂಗಳವಾರ ಭೇಟಿ ಮಾಡಲಿವೆ. ಇದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಬೇಕಿತ್ತು. 11 ಗಂಟೆ ಸುಮಾರಿಗೆ ಅವರು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಅವರ ಭೇಟಿ ದಿಢೀರನೆ ರದ್ದಾಗಿದೆ. ಇದಕ್ಕೆ ಕಾರಣ ತಿಳಿದುಬಂದಿಲ್ಲ.

      ಚುನಾವಣಾ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸುಲಭದ ಗೆಲುವು ದೊರಕಲಿವೆ ಎಂದು ಹೇಳಿದ್ದವು. ಇದರಿಂದ ಕಳವಳಗೊಂಡಿರುವ 21 ವಿರೋಧಪಕ್ಷಗಳ ಪ್ರತಿನಿಧಿಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದಾರೆ. ಈ ನಿಯೋಗದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಇರಬೇಕಿತ್ತು.

      lok sabha elections 2019 hd kumaraswamy Delhi visit cancelled

      ಇವಿಎಂ ಮತ್ತು ವಿವಿಪ್ಯಾಟ್‌ಗಳಲ್ಲಿನ ದೋಷಗಳು, ಅವುಗಳ ವಿಶ್ವಾಸಾರ್ಹತೆ, ದುರ್ಬಳಕೆ ಮುಂತಾದ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಬಳಿಕ ವಿರೋಧಪಕ್ಷಗಳ ಮುಖಂಡರು ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.

      ಭಾನುವಾರ ಪ್ರಕಟಗೊಂಡ ಸುಮಾರು 13 ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ವಿರುದ್ಧ ಸಂಘಟನೆಗೊಂಡ ವಿವಿಧ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು 122 ಸೀಟುಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಾರವು ಎಂದು ಭವಿಷ್ಯ ನುಡಿದಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಆಸೆ ಹೊಂದಿರುವ ವಿರೋಧಪಕ್ಷಗಳಿಗೆ ತೀವ್ರ ನಿರಾಸೆಯಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸೇರಿದಂತೆ ಅನೇಕರು ಎಕ್ಸಿಟ್ ಪೋಲ್‌ಗಳನ್ನು ನಿರಾಕರಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+