ಬೆಂಗಳೂರು ಲಿಂಗರಾಜಪುರದಲ್ಲಿ ಕಟ್ಟಡ ಕುಸಿತː ವೃದ್ಧೆ ಸಾವು
ಬೆಂಗಳೂರು, ಅ. 28: ಬೆಂಗಳೂರಿನ ಲಿಂಗರಾಜಪುರ ಪ್ಲೈ ಓವರ್ ಬಳಿ ಶಿಥಿಲಗೊಂಡಿದ್ದ ಎರಡು ಅಂತಸ್ತಿನ ಹಳೆ ಕಟ್ಟಡ ಮಂಗಳವಾರ ಸಂಜೆ ಕುಸಿದಿದ್ದು ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಜೋ ಮೇರಿ(76) ಮೃತಪಟ್ಟಿದ್ದು ನಾಲ್ಕು ಜನ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.[ಬೆಂಗಳೂರಲ್ಲಿ ಗೋಡೆ ಕುಸಿದು 3 ಕಾರ್ಮಿಕರ ದುರ್ಮರಣ]

ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹಳೆಯ ಕಟ್ಟಡವಾದ್ದರಿಂದ ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಗೆ ಮತ್ತಷ್ಟು ಶಿಥಿಲವಾಗಿತ್ತು ಎಂದು ಹೇಳಲಾಗಿದೆ. [ಚಿತ್ರಗಳಲ್ಲಿ: ಗೋಡೆ ಕುಸಿತಕ್ಕೆ 3 ಬಲಿ, ಯಾರು ಹೊಣೆ?]
ಕಟ್ಟಡ ಕುಸಿಯುವ ವೇಳೆ ಹತ್ತಿರದಲ್ಲಿ ಜನ ಸಂಚಾರ ವಿರಳವಾಗಿದ್ದರಿಂದ ದೊಡ್ಡ ಅವಘಡ ತಪ್ಪಿದೆ. ಸಮೀಪದ ರಸ್ತೆಯಲ್ಲೇ ಶಾಲಾ ಮಕ್ಕಳು, ಸಾರ್ವಜನಿಕರು ಯಾವಾಗಲೂ ಓಡಾಡುತ್ತಿದ್ದರು. ಆದರೆ ಘಟನೆ ವೇಳೆ ಜನ ಸಂಚಾರ ವಿರಳವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.












Click it and Unblock the Notifications