India Weather Report: ಮಾ. 12ವರೆಗೆ ಕೆಲ ರಾಜ್ಯಗಳಿಗೆ ಮಳೆ, ದೆಹಲಿಯಲ್ಲಿ ಲಘು ಮಳೆ ದಾಖಲು, ಒಣ ಹವೆ: IMD

ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಘು ಮಳೆ ಅಬ್ಬರ ಕಂಡು ಬಂದಿದೆ. ಕೆಲವೆಡೆ ಗುರುವಾರ, ಶುಕ್ರವಾರವು ಮಳೆ ಆಗಬಹುದೆಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರು, ಮಾರ್ಚ್ 09: ಹವಾಮಾನದ ಅಕಾಲಿಕ ವೈಪರಿತ್ಯದಿಂದ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಘು ಮಳೆ ಅಬ್ಬರ ಕಂಡು ಬಂದಿದೆ. ಕೆಲವೆಡೆ ಗುರುವಾರ ಮತ್ತು ನಾಳೆ ಶುಕ್ರವಾರವು ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಹೋಲಿ ಹಬ್ಬದ ದಿನವೇ ದೆಹಲಿ ನಿವಾಸಿಗಳಿಗೆ ವರುಣ ದಿಢೀರ್ ಪ್ರತ್ಯಕ್ಷವಾಗಿದ್ದಾನೆ. ಎಲ್ಲರೂ ಹೋಳಿ ಹಬ್ಬದ ಸಡಗರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಗುರುಗ್ರಾಮ್, ಫರಿದಾಬಾದ್, ನೋಯ್ಡ ಹಾಗೂ ದೆಹಲಿಯ ಕೆಲವು ಪ್ರದೇಶಗಳಲ್ಲಿ ಕೆಲ ಕಾಲ ಜೋರು ಮಳೆ ಆಗಿದೆ. ಈ ವೇಳೆ ಕೆಲವರು ಆರೋಗ್ಯ ದೃಷ್ಠಿಯಿಂದ ಹೋಳಿಗೆ ಬ್ರೇಕ್ ಹಾಕಿಕೊಂಡರೆ, ಇನ್ನೂ ಕೆಲವರು ಮಳೆಯಲ್ಲೇ ಮಿಂದು ಹೋಳಿ ಆಚರಿಸಿದ್ದು ಸಾಮಾನ್ಯವಾಗಿತ್ತು.

Light- Moderate Rain Recorded New Delhi, Rain Will Continue Till March 12 In Several States India

ದೆಹಲಿಯಲ್ಲಿ ಗುರುವಾರ ಮಾರ್ಚ್ 09ರಂದು ಸಹ ಕೆಲವು ಕಡೆಗಳಲ್ಲಿ ಲಘು ಇಲ್ಲವೇ ಹಗುರು ಮಳೆಯಾಗುವ ನಿರೀಕ್ಷೆ ಇದೆ. ಇಷ್ಟೇ ಅಲ್ಲದೇ ಹಿಮಾಚಲ ಪ್ರದೇಶ, ಉತ್ತರಾಖಂಡ, ದಕ್ಷಿಣ ಹರಿಯಾಣ, ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿದಂತೆ ಕೆಲವು ರಾಜ್ಯಗಳ ಒಂದೆರಡು ಕಡೆಗಳಲ್ಲಿ ಶುಕ್ರವಾರದವರೆಗೆ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್ 12ರವರೆಗೆ ಮಳೆ?

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಇಂದಿನಿಂದ ಮಾರ್ಚ್ 9-12ರವರೆಗೆ ದೇಶದ ವಿವಿಧೆಡೆ ಗುಡುಗು ಸಹಿತ ಮಳೆ ಬೀಳಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ ರಾಜ್ಯಗಳಲ್ಲಿ ಲಘು ಮಳೆ ಇಲ್ಲವೇ ಗುಡುಗು ಸಹಿತ ಹಗುರ ಮಳೆಯಾಗುವ ಲಕ್ಷಣಗಳು ಇವೆ. ಈ ವೇಳೆ ಎಲ್ಲೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ.

ಕರ್ನಾಟಕದ ಹವಾಮಾನ ವರದಿ

ಕರ್ನಾಟಕ ರಾಜ್ಯದಲ್ಲಿ ಬಹುತೇಕ ಎಲ್ಲ ಭಾಗದಲ್ಲಿ ಒಣಹವೆ, ಝಳ ಮುಂದುವರಿದೆ. ಬಾಗಲಕೋಟೆಯಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ರಾಜ್ಯ ಗರಿಷ್ಠ ಉಷ್ಣಾಂಶ ಕಾರವಾರದಲ್ಲಿ 37.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.

Light- Moderate Rain Recorded New Delhi, Rain Will Continue Till March 12 In Several States India

ಅದೇ ರೀತಿ ಬೆಂಗಳೂರಿನ ಎಚ್‌ಎಲ್‌ ನಲ್ಲಿ ಗರಿಷ್ಠ 31.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16.4 ಡಿಗ್ರಿ ಸೆಲ್ಸಿಯಸ್ ತಾಪಮಾನ, ನಗರದಲ್ಲಿ ಗರಿಷ್ಠ 31.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+