Bengaluru rain: ಚಳಿಯಲ್ಲಿ ಕ್ರಮೇಣ ಏರಿಕೆ, ಇನ್ನೂ 5 ದಿನ ಮಳೆ ಮುನ್ಸೂಚನೆ

ಬೆಂಗಳೂರು, ಸೆಪ್ಟಂಬರ್ 05: ಬೆಂಗಳೂರಿನಲ್ಲಿ ನಿರಂತರವಾಗಿ ಉಂಟಾಗಿದ್ದ ತಾಪಮಾನ ಬಹುತೇಕ ಇಳಿಕೆ ಆಗಿದ್ದು, ಇದೀಗ ಚಳಿ ಕ್ರಮೇಣ ಹೆಚ್ಚಾಗುತ್ತಿದೆ. ಮಳೆ ಮತ್ತು ಚಳಿ ಐದಾರು ದಿನಗಳ ಕಾಲ ಮುಂದವರಿಯಲಿದೆ. ಮಂಗಳವಾರ ಮಧ್ಯಾಹ್ನದ ನಂತರ ಸುಮಾರು 18 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಳೆಯ ಸಿಂಚನವಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವರದಿ ಪ್ರಕಾರ, ನಗರದಲ್ಲಿ ಇಂದು ಸೆಪ್ಟಂಬರ್ 5 ರಂದು ವಿವಿಧ ಪ್ರದೇಶಗಳಲ್ಲಿ ತುಂತುರು ಮಳೆ ಆಗಿದೆ. ಈ ಮಳೆ ರಾತ್ರಿ ಹೊತ್ತಿಗೆ ಇನ್ನಷ್ಟು ಜೋರಾಗಿ ಸುರಿಯುವ ನಿರೀಕ್ಷೆ ಇದೆ. ಹವಾಮಾನದಲ್ಲಿ ಬದಲಾವಣೆಯಿಂದ ಮುಂಗಾರು ಸಕ್ರಿಯವಾಗಿದೆ.

bengaluru-rain

ಇಂದು ಸಂಜೆ 4.30ರ ಹೊತ್ತಿಗೆ ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಮತ್ತು ದೊಡ್ಡ ಬಿದರಕಲ್ಲಿನಲ್ಲಿ 7 ಮಿಲಿ ಮೀಟರ್ ಮಳೆ ಆಗಿದೆ. ಬಾಗಲಗುಂಟೆಯಲ್ಲಿ 7 ಮಿ.ಮೀ, ಉಳಿದಂತೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 5 ಮಿ,ಮೀ, ದಾಸರಹಳ್ಳಿಯಲ್ಲಿ 4 ಮಿ.ಮೀ, ಕೋರಮಂಗಲ 4.5 ಮಿ.ಮೀ, ಅರಕೆರೆ 4ಮಿ.ಮೀ, ಹಮ್ಮಿಗೆಪುರ 7.5 ಮಿ.ಮೀ, ವಸಂತನಗರ 3.5 ಮಿ.ಮೀ, ಹೀಗೆ ವಿವಿಧ ಕಡೆಗಳಲ್ಲಿ ತುಂತುರು ರೂಪದಲ್ಲಿ ಮಳೆ ಆಗಿದೆ. ಈ ಮಳೆ ರಾತ್ರಿವರೆಗೆ ಬೇರೆ ಬೇರೆ ಸ್ಥಳಗಳಲ್ಲಿ ಸುರಿಯುವ ಲಕ್ಷಣಗಳು ಇವೆ.

ತಾಪಮಾನದಲ್ಲಿ ಇಳಿಕೆ, ತಂಪು ವಾತಾವರಣ ಸೃಷ್ಟಿ

ನಗರದಲ್ಲಿ ಕಳೆದ ಗುರುವಾರದಿಂದ ಮುಂಗಾರು ಮಳೆ ಸಕ್ರಿಯವಾಗಿದ್ದು, ಅಂದಿನಿಂದ ಮಳೆ ವಾತಾವರಣ ಕಂಡು ಬರುತ್ತಿದೆ. ನಿತ್ಯ ನಗರದ ಕೆಲವೆಡೆ ಮಳೆ ಆಗುತ್ತಿದೆ. ಹೀಗಾಗಿ ತಾಪಮಾನ ಹಂತ ಹಂತವಾಗಿ ಇಳಿಕೆಯಾಗಿದೆ. ತೇವಾಂಶ ಭರಿತ ಗಾಳಿ ಬೀಸುತ್ತಿದೆ. ಇದರಿಂದಾಗಿ ಬೆಳಗ್ಗೆ ಮತ್ತು ರಾತ್ರಿ ವೇಳೆ ತಂಪು ವತಾವರಣ ಕಂಡು ಸೃಷ್ಟಿಯಾಗಿದೆ. ಈ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಹೀಗೆ ಮುಂದುವರಿಯಲಿದೆ.

bengaluru-rain

ಸೆಪ್ಟಂಬರ್ 11ರವರೆಗೆ ಬೆಂಗಳೂರಿನಲ್ಲಿ ಮಳೆ

ಇಂದಿನಿಂದ ಮುಂದಿನ ಸೆಪ್ಟಂಬರ್ 11ರವರೆಗೆ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ. ನಿತ್ಯ ಬೆಳಗ್ಗೆಯಿಂದಲೇ ವಿವಿಧ ಬಡಾವಣೆಗಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳಲಿದೆ. ಕೆಲವು ದಿನ ಸಂಜೆ ವೇಳೆಗೆ ಬಿರುಸು ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಪ್ರತಿನಿತ್ಯ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಬಿಸಿಲಿನ ದರ್ಶನ ಅಪರೂಪ ಎನ್ನಲಾಗುತ್ತಿದೆ. ಆಗಾಗ ಮಳೆ ಬರಲಿದ್ದು, ಗರಿಷ್ಠ ತಾಪಮಾನದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಳಿಕೆ ಆಗಿದೆ. ವಾರದ ಹಿಂದಷ್ಟೇ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದರಿಂದ ನಗರದೆಲ್ಲಡೆ ಶುಷ್ಕ ವಾತಾವರಣ ಕಂಡು ಬಂದಿದ್ದು, ನಗರವಾಸಿಗಳು ತತ್ತರಿಸಿದ್ದರು.

ಇದೀಗ ಉಷ್ಣಾಂಶ ಕಡಿಮೆ ಆಗಿದ್ದು, ಸೆಪ್ಟಂಬರ್ 11 ರವರೆಗೆ ನಿತ್ಯ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಕನಿಷ್ಠ ತಾಪಮಾನದಲ್ಲಿ (21ಡಿ.ಸೆ.) ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+