ಅವಳ ಪತಿ ಅವಳು, ಬೆಂಗಳೂರಲ್ಲೊಂದು ಸಲಿಂಗ ವಿವಾಹ

ಬೆಂಗಳೂರು, ಜುಲೈ 05 : ಇದು ವಿಚಿತ್ರ ಆದ್ರೂ ಸತ್ಯ. ಪ್ರೀತಿ, ಪ್ರೇಮದ ಪಾಶಕ್ಕೆ ಬಿದ್ದ ಇಬ್ಬರು ಹುಡುಗಿಯರು ಇದೀಗ ಪರಸ್ಪರ ಮದುವೆಯಾಗಿದ್ದಾರೆ.

ಹೌದು. 25 ವರ್ಷದ ಯುವತಿಯೊಬ್ಬಳು ಪದವಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಯುವತಿಯನ್ನು ಮದುವೆ ಆಗಿರುವ ಘಟನೆಯೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Lesbian marriage in Bengaluru leaves police in a fix

ಈ ಇಬ್ಬರೂ ಯುವತಿಯರು ಸಂಬಂಧಿಗಳಾಗಿದ್ದು, ಮೇ 17ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕೆಲ ದಿನಗಳ ಹಿಂದೆ ತಮ್ಮ ಮಗಳು ಕಾಣೆಯಾಗಿದ್ದಾಳೆಂದು 21 ವರ್ಷದ ಯುವತಿಯ ಪೋಷಕರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೂರು ದಿನಗಳ ಹಿಂದೆ ಕೋರಮಂಗಲದಲ್ಲಿ ಯುವತಿಯರು ಪತ್ತೆಯಾಗಿದ್ದು, ಅವರುಗಳನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದ ವೇಳೆ ತಾವು ಪರಸ್ಪರ ಪ್ರೀತಿಸಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಪೋಷಕರ ಜೊತೆ ಹೋಗಲೂ ಯುವತಿಯರು ನಿರಾಕರಿಸುತ್ತಿದ್ದು, ಸಧ್ಯ ಪೊಲೀಸರು ಯುವತಿಯರಿಗೆ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+