ಡೈರಿ ನನ್ನದ್ದಲ್ಲ, ಇದೆಲ್ಲ ದಿನೇಶ್ ಗುಂಡೂರಾವ್ ಪಿತೂರಿ: ಲೆಹರ್
ನನ್ನ ಬಳಿ ಇಂಥ ಡೈರಿ ಇಲ್ಲ, ಯಾವ ಡೈರಿ ಕೂಡಾ ನನ್ನ ಮನೆಯಿಂದ ಜಪ್ತಿಯಾಗಿಲ್ಲ. ಇದು ದಿನೇಶ್ ಗುಂಡೂರಾವ್ ಅವರು ಮಾಡಿರುವ ಪಿತೂರಿ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಪಕ್ಷದ ಖಜಾಂಚಿ ಲೆಹರ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 26: ಡೈರಿ ಹಗರಣದ ಬಗ್ಗೆ ಶಾಸಕ ಲೆಹರ್ ಸಿಂಗ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಡೈರಿಗೂ ನನಗೂ ಸಂಬಂಧವಿಲ್ಲ. ನನ್ನ ಬಳಿ ಇಂಥ ಡೈರಿ ಇಲ್ಲ, ಯಾವ ಡೈರಿ ಕೂಡಾ ನನ್ನ ಮನೆಯಿಂದ ಜಪ್ತಿಯಾಗಿಲ್ಲ. ಇದು ದಿನೇಶ್ ಗುಂಡೂರಾವ್ ಅವರು ಮಾಡಿರುವ ಪಿತೂರಿ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಪಕ್ಷದ ಖಜಾಂಚಿ ಲೆಹರ್ ಸಿಂಗ್ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಹರ್ ಸಿಂಗ್ ಸಿಸೋಡಿಯಾ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನನ್ನ ಮೇಲಿನ ಆರೋಪದ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇನೆ. ಈ ಬಗ್ಗೆ ಬೇಕಾದರೆ ಸಿಬಿಐ ತನಿಖೆ ನಡೆಯಲಿ ಎಂದರು.[ಕಾಂಗ್ರೆಸ್ ಡೈರಿ ಬೆಂಕಿಗೆ ದಿನೇಶ್ ಅಮಿನ್ ಮಟ್ಟು ತುಪ್ಪ]

ನಾನು ಗೃಹ ಸಚಿವ ಪರಮೇಶ್ವರ ಅವರಿಗೂ ದೂರು ನೀಡಿದ್ದೇನೆ.ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಡೈರಿಯ ವಿಷಯ ಹರಿದಾಡುತ್ತಿದೆ. ನನ್ನ ಹೆಸರು ದುರ್ಬಳಕೆಯಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸುತ್ತೇನೆ ಎಂದರು.[ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್]











Click it and Unblock the Notifications