ಬೆಂಗಳೂರು "ದಕ್ಷಿಣ"ದ ಭೂಮಿಗೆ ಬಂಗಾರದ ಬೆಲೆ ಬಂದರೂ, ಈ ಸಂಕಷ್ಟಗಳು ಫಿಕ್ಸ್!
land Price Boom: ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂವೆಗೆ ಇದೀಗ ರಾಮನಗರವೂ ಸೇರ್ಪಡೆಯಾಗುತ್ತಿದೆ. ಇನ್ಮುಂದೆ ರಾಮನಗರ - ಬೆಂಗಳೂರು ದಕ್ಷಿಣ ಜಿಲ್ಲೆ ಎಂದಾಗಲಿದೆ. ರಾಮನಗರ ಹೆಸರು ಬದಲಾವಣೆಯ ಬಗ್ಗೆ ಕಳೆದ ಆರು ತಿಂಗಳಿನಿಂದಲೂ ಚರ್ಚೆಯಾಗುತ್ತಿತ್ತು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಪ್ರಸ್ತಾವನೆ ತಿರಸ್ಕೃತವಾದ ಮೇಲೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಪಟ್ಟು ಬಿಡದೆ ಬೆಂಗಳೂರು ದಕ್ಷಿಣ ಎಂದು ಅಂತಿಮವಾಗಿ ಹೆಸರು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಮನಗರದ ಭೂಮಿಗೆ ಬಂಗಾರದ ಬೆಲೆ ಬರುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ.
ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ / ಬೆಂಗಳೂರಿನ ಹೆಸರಿಗೆ ವಿಶ್ವದಾದ್ಯಂತ ಮನ್ನಣೆ ಇದೆ. ಇದೀಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದರಿಂದ ರಿಯಲ್ ಎಸ್ಟೇಟ್‌ಗೆ ಲಾಭವಾಗಲಿದೆ. ಈ ಭಾಗದಲ್ಲಿ ಭೂಮಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ. ಅಲ್ಲದೇ ಭೂಮಿಯ ಬೆಲೆಯೂ ಹೆಚ್ಚಾಗಲಿದೆ ಅಂತ ಹೇಳಲಾಗುತ್ತಿದೆ. ಇದರೊಂದಿಗೆ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಹಾಗೂ ಕನಕಪುರ ಸೇರಿದಂತೆ ಹಲವು ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದು ಫಿಕ್ಸ್ ಎನ್ನುತ್ತಾರೆ ರಿಯಲ್ ಎಸ್ಟೇಟ್‌ನ ತಜ್ಞರು.

ಮೊದಲು ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಅಥವಾ ಹೆಸರು ಬದಲಾವಣೆ ಮಾಡುವ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಆದರೆ, ಇದೀಗ ಒಟ್ಟಾರೆ ರಾಮನಗರ ಜಿಲ್ಲೆಯ ಹೆಸರೇ ಬದಲಾಗಿದ್ದು. ಬೆಂಗಳೂರಿನ ಭೂಮಿಗೆ ಇರುವ ಬೆಲೆಯ ಅರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚು ರಾಮನಗರಕ್ಕೆ ಬರುವ ಸಾಧ್ಯತೆ ಇದೆ.
ಬೆಂಗಳೂರಿನ ಹೆಸರನ್ನು ರಾಮನಗರಕ್ಕೂ ಬದಲಾಯಿಸುವುದರಿಂದ ರಿಯಲ್ ಎಸ್ಟೇಟ್ & ಭೂಮಿಗೆ ಬಂಪರ್ ಬಂದರೂ, ಮೂಲಸೌಕರ್ಯದ ವಿಚಾರ ಹಾಗೂ ಅಭಿವೃದ್ಧಿ ಕಾರಣಗಳಿಗೆ ಅಲ್ಪ ಪ್ರಮಾಣದಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭೂಮಿಗೆ ಬಂಗಾರದ ಬೆಲೆ ಬಂದರೂ ಇಲ್ಲಿ ಮೂಲಸೌಕರ್ಯ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ನಗರದಲ್ಲಿ ವಿವಿಧ ಪ್ರಮುಖ ಯೋಜನೆಗಳು ಬರುತ್ತಿರುವುದು ಹಾಗೂ ಈಗಾಗಲೇ ಖ್ಯಾತಿ ಹೆಚ್ಚಾಗಿರುವುದರಿಂದ ಭೂಮಿಯ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ, ಜನ ಕಡಿಮೆ ಬೆಲೆಗೆ ಹಾಗೂ ಒಳ್ಳೆಯ ಬ್ರ್ಯಾಂಡ್ ವ್ಯಾಲ್ಯೂ ಇರುವ ಕಡೆ ಭೂಮಿಯನ್ನು ಹುಡುಕುತ್ತಿದ್ದಾರೆ. ಈ ರೀತಿ ಭೂಮಿ ಹುಡುಕುತ್ತಿರುವವರಿಗೆ ರಾಮನಗರ / ನೂತನ ಬೆಂಗಳೂರು ದಕ್ಷಿಣ ಬೆಸ್ಟ್ ಆಯ್ಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನ ಕೇಂದ್ರ ಭಾಗ ಹಾಗೂ ಒಳ್ಳೆಯ ಅಭಿವೃದ್ಧಿ ಆಗಿರುವ ಜಾಗದಲ್ಲಿ ಭೂಮಿಯ ಬೆಲೆ ಕೋಟ್ಯಾಂತರ ರೂಪಾಯಿ ಇದೆ.
ಈ ರೀತಿ ಕೋಟ್ಯಾಂತರ ರೂಪಾಯಿ ಕೊಟ್ಟು ಭೂಮಿ ಖರೀದಿ ಮಾಡುವುದು. ಇದಾದ ಮೇಲೆ ಅಲ್ಲಿ ಇನ್ನೊಂದಷ್ಟು ಕೋಟಿಗಳನ್ನು ಖರ್ಚು ಮಾಡಿ ಮನೆ ಕಟ್ಟುವುದು ಎನ್ನುವುದು ಮಧ್ಯಮ ವರ್ಗದವರಿಗೆ ಕನಸಿನ ಮಾತು. ಹೀಗಾಗಿ, ಕಡಿಮೆ ಬೆಲೆಗೆ ಹಾಗೂ ಮುಂದಿನ ದಿನಗಳಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರುವ ಜಾಗವನ್ನು ಆಸ್ತಿ ಖರೀದಿದಾರರು ನೋಡುತ್ತಿದ್ದಾರೆ. ಇದಕ್ಕೆ ಉತ್ತಮ ಆಯ್ಕೆಯಾಗಿ ರಾಮನಗರ ಇರಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಭೂಮಿಯ ಬೆಲೆ ಹೆಚ್ಚಾದಂತೆ ಅಲ್ಲಿ ಸ್ಥಳೀಯವಾಗಿ ಸಮಸ್ಯೆಗಳೂ ಎದುರಾಗಲಿವೆ ಅಂತ ಹೇಳಲಾಗುತ್ತಿದೆ.
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಜನ ಏನಂದ್ರು ?
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನು ಸ್ವಾಗತಿಸಿದ್ದರೆ, ಬಹುತೇಕ ಜನ ಈ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಇದು ಉತ್ತಮ ನಿರ್ಧಾರವಲ್ಲ ಅಂತ ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಎದುರಾದ ಸಮಸ್ಯೆಯೇ ಇನ್ಮುಂದೆ ರಾಮನಗರದಲ್ಲೂ ಕಾಣಿಸಿಕೊಳ್ಳಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ಮುಂದೆ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ, ಕನಕಪುರಗಳ ಹಳ್ಳಿ ಹಳ್ಳಿಯಲ್ಲೂ ಪರಭಾಷಿಕರು ಬಂದು ನೆಲೆಸಲಿದ್ದಾರೆ. ಬೆಂಗಳೂರು ಬೆಳೆದಿದ್ದು ಸಾಕು. ಇಲ್ಲಿ ಸೃಷ್ಟಿಯಾಗುತ್ತಿರೋ ಎಲ್ಲಾ ಉದ್ಯೋಗ ವ್ಯವಹಾರ ವಲಸಿಗರ ಪಾಲಾಗುತ್ತಿದೆ. ಕನ್ನಡಿಗರು ನೆಲ ಕಳೆದುಕೊಳ್ಳುತ್ತಿದ್ದಾರೆ ಅಷ್ಟೇ. ಬೆಂಗಳೂರಿನಲ್ಲಿ ಸೃಷಿಯಾಗುತ್ತಿರುವ ಯಾವ ಅವಕಾಶವನ್ನು ಉಪಯೋಗಿಸಿಕೊಳ್ಳುವ ರೀತಿ ಕನ್ನಡಿಗರನ್ನು ನಮ್ಮ ಶಾಲೆ-ಕಾಲೇಜುಗಳು, ಸರ್ಕಾರ ತಯಾರು ಮಾಡಿಲ್ಲ ಎಂದು ಕನ್ನಡಿಗರು ಹೇಳಿದ್ದಾರೆ.
ಜ್ಞಾನ್ ಮಧು ಕಲ್ಲಹಳ್ಳಿ ಎನ್ನುವವರು ರಾಮನಗರ ಇತಿಹಾಸ ಇಲ್ಲಿಗೆ ಮುಗಿಯಿತು! ರಿಯಲ್ ಎಸ್ಟೇಟ್ ದಂಧೆ ಶುರು, ವಲಸಿಗರಿಗೆ ಮಣೆ ಶುರು, ಹಸಿರು ಹೊದಿಕೆ ಬೆಂಗಳೂರಲ್ಲಿ 70% ಇದ್ದದ್ದು ಈಗ 5% ಗೆ ನಿಂತಿದೆ. ಹಸಿರು ಸಿರಿಯಾಗಿರುವ ರಾಮನಗರ ಇನ್ನು concrete ಕಾಡು, ಅಲ್ಲಿ ಇರುವ ಕಾಡು ಖಾಲಿ ಆಗುತ್ತೆ. ವಲಸಿಗರು ಹೆಚ್ಚಾಗುತ್ತಾರೆ ಅಂತ ಹೇಳಿದ್ದಾರೆ.
ಜೀವ ರಾಶಿ, ನೀರಿನ ಒರತೆ ಕಾಣೆಯಾಗುತ್ತೆ. ಜನಾರ್ಧನ ರೆಡ್ಡಿಯು ಭೂಮಿ ಕಾನೂನು ಬಾಹಿರ ಕೆಲಸಕ್ಕೂ ಈಗ ಡಿ.ಕೆ ಶಿವಕುಮಾರ್ ಅವರು ಕಾನೂನು ರೀತಿ ರಾಮನಗರ ಹೆಸರು ಬದಲಾಯಿಸಿದ್ದಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಒಂದೇ ಭಾಷೆ ಒಂದೇ ಧರ್ಮ ಒಂದು ಚುನಾವಣೆ ಎಂಬ ಫೆಡರಲ್ ವ್ಯವಸ್ಥೆ ವಿರುದ್ಧ ಇರುವ ಮೋದಿ ಅವರಿಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಏನೂ ವ್ಯತ್ಯಾಸ ಇಲ್ಲ. ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರ ಜಗಳದಲ್ಲಿ ಕರ್ನಾಟಕ ಕೊರಗುತ್ತಿದ್ದು ಸೊರಗುತ್ತಿದೆ. ಅಲ್ಲದೇ ಮುಳುಗುತ್ತಿದೆ.
30 ಜಿಲ್ಲೆಯನ್ನು ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವಾಯುವ್ಯ ಈ ರೀತಿ ಮಾಡಿಬಿಡಲಿ! ಬೆಂಗಳೂರಿನ ಉಸ್ತುವಾರಿ ಮಾಡಿ ಎಂದರೆ, ಕರ್ನಾಟಕವನ್ನು ಬೆಂಗಳೂರು ಮಾಡಲು ಹೋಗಿದ್ದಾರೆ. ರಾಮನಗರದ ಅಸ್ಮಿತೆ ಗುರುತನ್ನು ಅಳಿಸಿ ಹಾಕುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಉಸ್ತುವಾರಿ ನೋಡಿಕೊಂಡು ಅಲ್ಲಿ ಬದಲಾವಣೆ ತರಲಿ ಎಂದಿದ್ದಾರೆ.
ಬೆಂಗಳೂರು ದಕ್ಷಿಣ: ಡಿ.ಕೆ ಶಿವಕುಮಾರ್ ಟ್ವೀಟ್‌ನಲ್ಲೇನಿದೆ ?
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ. ರಾಮನಗರ ಜಿಲ್ಲೆ ಈ ಮೊದಲು ಬೆಂಗಳೂರು ಗ್ರಾಮಾಂತರ ಎಂದಿತ್ತು. ನಂತರ ಬೆಂಗಳೂರು ನಗರ ಜಿಲ್ಲೆ ಎಂದಾಗಿತ್ತು. ರಾಮನಗರದ ಹೆಸರನ್ನು ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿ ತೀರ್ಮಾನ ಕೈಗೊಂಡಿದ್ದೇವೆ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ.
ಜೆಡಿಎಸ್ ಟ್ವೀಟ್: ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದು ಅಭಿವೃದ್ಧಿಯಲ್ಲ, ಅದು ಒಂದು ಫಲಕ ಬದಲಾವಣೆ ಮಾತ್ರ. ಐತಿಹಾಸಿಕವಾಗಿ ಆಳವಾದ ಬೇರುಗಳು ಮತ್ತು ಇತಿಹಾಸ ಹೊಂದಿರುವ ಜಿಲ್ಲೆಯನ್ನು ರಿಯಲ್ ಎಸ್ಟೇಟ್ ಯೋಜನೆಯ ಕರಪತ್ರದಂತೆ ಮರುನಾಮಕರಣ ಮಾಡಲಾಗುತ್ತಿದೆ.
ಊರ ಹೆಸರು ಮರುನಾಮಕರಣವು ಬೆಳವಣಿಗೆಗೆ ಮಾಂತ್ರಿಕ ದಂಡವಾಗಿದ್ದರೆ, ಕನಕಪುರವನ್ನು ಕೌಲಲಾಂಪುರ್ ಎಂದು ಮರುನಾಮಕರಣ ಮಾಡಿ ಈಗ ಅಂತರರಾಷ್ಟ್ರೀಯ ನಗರವಾಗಿ ಪರಿವರ್ತಿಸಬಹುದಿತ್ತು, ಆದರೆ ದುಃಖಕರವೆಂದರೆ, ನಿಮ್ಮ ಹೊಸ ನಾಮಕರಣ ದಿಂದ ರಸ್ತೆ ಗುಂಡಿಗಳು ಸುಧಾರಣೆ ಕಾಣುವುದಿಲ್ಲ..
ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದಲ್ಲಿ ಒಂದೇ ಒಂದು ಅಭಿವೃದ್ಧಿ ಯೋಜನೆಯೂ ಆರಂಭಗೊಂಡಿಲ್ಲ, ನೀವು ರಾಜಕೀಯ ಹೋರ್ಡಿಂಗ್ಸ್ ಗಳನ್ನೇ ಮೂಲ ಸೌಕರ್ಯ ಅಂದುಕೊಂಡಂತಿದೆ. ಇದೆ ರೀತಿ ಮುಂದುವರೆದರೆ, ಮಾನ್ಯ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಡಿ.ಕೆ. ಸಿಎಂ ಕುಮಾರ್ ಎಂದು ಮರುನಾಮಕರಣ ಮಾಡಬಹುದು, ಏಕೆಂದರೆ ನಾಯಕತ್ವ ಇಲ್ಲದಿದ್ದಾಗ, ಬ್ರ್ಯಾಂಡಿಂಗ್ ಮಾತ್ರ ಪ್ರಣಾಳಿಕೆಯಾಗುತ್ತದೆ.
-
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್‌ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications