ನಾಳೆ ಸಂಜೆ ವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ: ಸದಾನಂದಗೌಡ
Recommended Video
ಬೆಂಗಳೂರು, ಮೇ 22: ನಾಳೆ ಸಂಜೆ (ಮೇ 23)ರವರೆಗೆ ಮಾತ್ರವೇ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ, ಫಲಿತಾಂಶದ ಬಂದ ನಂತರ ಬಿಜೆಪಿ ಅಧಿಕಾರಕ್ಕೆ ಏರುತ್ತದೆ ಎಂದು ಕೇಂದ್ರ ಮಂತ್ರಿ ಸದಾನಂದಗೌಡ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೆಚ್ಚೆಂದರೆ ನಾಳೆ ಸಂಜೆ ಅಥವಾ ಶುಕ್ತವಾರ ಬೆಳಿಗ್ಗಿನ ವರೆಗಷ್ಟೆ ಸಿಎಂ ಆಗಿರಲಿದ್ದಾರೆ, ಆ ನಂತರ ಅವರು ದೋಸ್ತಿಗಳು ಮನೆಗೆ ತೆರಳುತ್ತಾರೆ, 24 ರಂದು ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಸದಾನಂದ ಗೌಡ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ಕುಮಾರಸ್ವಾಮಿ ಇಬ್ಬರೂ ಸಮಾನಮನಸ್ಕರು, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಳ್ಳಲಿದ್ದಾರೆ, ಅಂತೆಯೇ ಕುಮಾರಸ್ವಾಮಿ ಕರ್ನಾಟಕದಲ್ಲಿ ಕಳೆದುಕೊಳ್ಳಲಿದ್ದಾರೆ, ಹಾಗಾಗಿ ಇಬ್ಬರೂ ಒಟ್ಟಾಗಿ ಕೆಲಸವಿಲ್ಲದೆ ಪ್ರಾದೇಶಿಕ ಪಕ್ಷಗಳನ್ನು ಒಟ್ಟು ಮಾಡಲು ಓಡಾಡುತ್ತಿದ್ದಾರೆ ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಈ ಬಾರಿ ವೈಎಸ್‌ಆರ್ ಗೆಲ್ಲಲಿದ್ದಾರೆ, ಬಹುತೇಕ ಸಮೀಕ್ಷೆಗಳು ಇದನ್ನೇ ಹೇಳುತ್ತಿವೆ ಹಾಗಾಗಿಯೇ ಅವರು ರಾಷ್ಟ್ರ ರಾಜಕಾರಣದತ್ತ ಒಲವು ತೋರುತ್ತಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ನಿರಾಸೆ ಆಗಲಿದೆ ಎಂದು ಸದಾನಂದ ಗೌಡ ಹೇಳಿದರು.

'ಸಿದ್ದರಾಮಯ್ಯ ರಾಜ್ಯ ಕಂಡ ದುರಹಂಕಾರಿ ಸಿಎಂ'
ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಸದಾನಂದಗೌಡ, ರೋಶನ್ ಬೇಗ್ ಹೇಳಿರುವುದು ಸರಿಯಾಗಿದೆ, ಸಿದ್ದರಾಮಯ್ಯ ರಾಜ್ಯಕಂಡ ಅತ್ಯಂತ ದುರಹಂಕಾರಿ ಮುಖ್ಯಮಂತ್ರಿ ಆಗಿದ್ದರು ಎಂದು ಹೇಳಿದ್ದಾರೆ.

'ರೋಷನ್ ಬೇಗ್ ಗೆ ಸಿದ್ದರಾಮಯ್ಯ ಬಗ್ಗೆ ಗೊತ್ತಿದೆ'
ರೋಷನ್ ಬೇಗ್ ಸಿದ್ದರಾಮಯ್ಯನವರ ಬಗ್ಗೆ ಹೇಳಿರುವ ಒಂದೊಂದು ಮಾತುಗಳು ಕೂಡ ಸತ್ಯದಿಂದ ಕೂಡಿದೆ. 7 ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿರುವ ಅವರಿಗೆ ಆಂತರಿಕ ವಿಷಯ ಗೊತ್ತಿದೆ. ಅಹಂಕಾರದಿಂದ ಮೆರೆದವರು ಏನಾಗಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಒಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

'ಕಾಂಗ್ರೆಸ್-ಜೆಡಿಎಸ್ ಶಾಸಕರು ವಾಮಮಾರ್ಗ ತುಳಿದರು'
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಾನು 100ಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದೇನೆ. ಕೊನೆಯ ಎರಡು ದಿನ ಕಾಂಗ್ರೆಸ್-ಜೆಡಿಎಸ್ ಶಾಸಕರು ಗೆಲ್ಲಲು ಎಲ್ಲ ರೀತಿಯ ವಾಮಮಾರ್ಗಗಳನ್ನು ಅನುಸರಿಸಿದರು. ಆದರೆ ಕ್ಷೇತ್ರದ ಮತದಾರರು ಬಿಜೆಪಿ ಪರ ಇದುದ್ದರಿಂದ ಇವರ ಆಟಗಳು ನಡೆಯಲಿಲ್ಲ.

ಗೆಲುವಿನ ಅಂತರ ಕಡಿಮೆ ಆಗಬಹುದು: ಸದಾನಂದಗೌಡ
ನಾನು ಗೆಲುವು ನಿಶ್ಚಿತ, ಆದರೆ ಕಳೆದ ಬಾರಿಗಿಂತ ಸ್ವಲ್ಪ ಅಂತರ ಕಡಿಮೆ ಆಗಬಹುದು ಸೋಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕೃಷ್ಣಬೈರೇಗೌಡ ಅವರನ್ನು ಎದುರಿಸುತ್ತಿದ್ದಾರೆ.












Click it and Unblock the Notifications