ಸಿಂಗಾಪುರದಲ್ಲಿ ಹೊಸ ವರ್ಷ ಆಚರಣೆ ಮಾಡಲಿರುವ ಕುಮಾರಸ್ವಾಮಿ

ಬೆಂಗಳೂರು, ಡಿಸೆಂಬರ್ 28: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ವರ್ಷ ಆಚರಣೆಗೆ ಸಿಂಗಾಪುರಕ್ಕೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪುತ್ರ ನಿಖಿಲ್ ಕುಮಾರ್‌ಸ್ವಾಮಿ ಅವರ ಸಿನಿಮಾದ ಚಿತ್ರೀಕರಣ ಹಾಗೂ ಇನ್ನಿತರೆ ಕೆಲಸದ ಮೇಲೆ ಕುಮಾರಸ್ವಾಮಿಯವರು ಆಗಾಗ ಸಿಂಗಾಪುರಕ್ಕೆ ಹೋಗಿಬರುತ್ತಿರುತ್ತಾರೆ.

ಪತ್ನಿ ಅನಿತಾ, ಮಗ ನಿಖಲ್, ಕೆಲ ಆಪ್ತ ಜೆಡಿಎಸ್ ನಾಯಕರು ಕೂಡ ಹೆಚ್‍ಡಿಕೆ ಜೊತೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಣೆಗೆ ಗೋವಾಕ್ಕೆ ಹೋಗಿದ್ದರು. ಈಗ ಹೊಸ ವರ್ಷವನ್ನು ಸೆಲೆಬ್ರೇಷನ್ ಮಾಡೋಕೆ ಸಿಂಗಾಪುರ್ ಗೆ ಹೋಗಿದ್ದಾರೆ.

Kumaraswamy To Celebrate New Year In Singapore

ಕಳೆದ ಎರಡು-ಮೂರು ವರ್ಷಗಳಿಂದ ಕುಮಾರಸ್ವಾಮಿ ಹೊಸ ವರ್ಷವನ್ನು ಸಿಂಗಾಪುರ್ ನಲ್ಲಿಯೇ ಆಚರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಿಎಂ ಆಗಿದ್ದಾಗಲೂ ಅವರು ಸಿಂಗಾಪುರ್ ಗೆ ಹೋಗಿದ್ದರು.

ಈಗ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸ್ವಲ್ಪ ರಾಜಕೀಯ ಚಟುವಟಿಕೆಯಿಂದ ಎಚ್‌‍ಡಿಕೆ ದೂರ ಉಳಿದಿದ್ದಾರೆ. ಹೀಗಾಗಿ ಸಿಂಗಾಪುರ್ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+