ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಉದ್ಯೋಗಿಗಳ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಬಸ್‌!

|
Google Oneindia Kannada News

ಬೆಂಗಳೂರು, ಜೂನ್ 16 : ಎಲ್ಲವೂ ಅಂದು ಕೊಂಡಂತೆ ಆದರೆ ಐಟಿ ಕಂಪನಿಗಳ ಉದ್ಯೋಗಿಗಳು ಕೆಎಸ್ಆರ್‌ಟಿಸಿ ಬಸ್ ಮೂಲಕ ಕಚೇರಿ ತಲುಪಬಹುದು. ಐಟಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಶಟಲ್ ಬಸ್ ಸೇವೆ ಒದಗಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.

ಬೆಂಗಳೂರಿನಲ್ಲಿರುವ ಬಹುತೇಕ ಐಟಿ ಕಂಪನಿಗಳು ಉದ್ಯೋಗಿಗಳನ್ನು ಕರೆದುಕೊಂಡು ಹೋಗಲು ಮತ್ತು ವಾಪಸ್ ಕಳಿಸಲು ಖಾಸಗಿ ಬಸ್ ಸೇವೆಯನ್ನು ಅವಲಂಭಿಸಿವೆ. ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ಗೆ ಶಟಲ್ ಬಸ್ ಸೇವೆ ನೀಡುತ್ತಿರುವ ಕೆಎಸ್ಆರ್‌ಟಿಸಿ, ಬೆಂಗಳೂರಲ್ಲೂ ಅದನ್ನು ಜಾರಿಗೆ ತರಲು ನಿರ್ಧರಿಸಿದೆ. [KSRTC ಬಸ್ ದರ ಇಳಿಕೆ]

ksrtc

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಬೆಂಗಳೂರಿನ ಕೆಲವು ಐಟಿ ಕಂಪನಿಗಳು ಶಟಲ್ ಬಸ್ ಸೇವೆ ಒದಗಿಸಲು ಸಂಸ್ಥೆಯೊಂದಿಗೆ ಮಾತುಕತೆ ನಡೆಸಿವೆ' ಎಂದು ಹೇಳಿದ್ದಾರೆ. [ಬೆಂ-ಕಾಸರಗೋಡು ನಡುವೆ ನೂತನ ಬಸ್ ಸೇವೆ]

'ಬೆಂಗಳೂರಿನ ಕೆಲವು ಐಟಿ ಕಂಪನಿಗಳು ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳುತ್ತಿವೆ. ಉಳಿದ ಕಂಪನಿಗಳು ಖಾಸಗಿ ಬಸ್‌ಗಳಲ್ಲಿ ಉದ್ಯೋಗಿಗಳನ್ನು ಕಳಿಸುತ್ತಿವೆ. ಕಂಪನಿಗಳ ಬೇಡಿಕೆಯನ್ನು ಪರಿಗಣಿಸಿ ನಾವು ಶಟಲ್ ಬಸ್ ಸೇವೆ ಆರಂಭಿಸಲು ನಿರ್ಧರಿಸಿದ್ದೇವೆ' ಎಂದು ರಾಜೇಂದ್ರ ಕುಮಾರ್ ಕಠಾರಿಯಾ ತಿಳಿಸಿದ್ದಾರೆ. [ಬಸ್ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ]

ಹಮಾನಿಯಂತ್ರಿತ ಬಸ್ಸುಗಳು ಬೇಡ ಎಂದು ಕಂಪನಿಗಳು ಹೇಳಿವೆ. ಆದ್ದರಿಂದ, ಕೆಎಸ್ಆರ್‌ಟಿಸಿ ರಾಜಹಂಸ ಮತ್ತು ವೈಭವ್ ಬಸ್ಸುಗಳನ್ನು ಶಟಲ್ ಬಸ್ ಸೇವೆ ಒದಗಿಸಲು ಬಳಸುವ ಸಾಧ್ಯತೆ ಇದೆ. ಕಂಪನಿಗಳ ಜೊತೆ ಕೊನೆಯ ಹಂತದ ಮಾತುಕತೆ ನಡೆಸಿ, ಒಪ್ಪಂದಕ್ಕೆ ಕೆಎಸ್‌ಆರ್‌ಟಿಸಿ ಸಹಿ ಹಾಕಲಿದೆ.

ಬೆಳಗ್ಗೆ ಮತ್ತು ಸಂಜೆ ಮಾತ್ರ ಉದ್ಯೋಗಿಗಳನ್ನು ಕರೆದುಕೊಂಡು ಹೋಗಬೇಕು. ಕ್ಯಾಬ್‌ಗಳಿಗಿಂತ ಹೆಚ್ಚು ಜನರು ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರವೂ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಈ ಸೇವೆ ಆರಂಭವಾಗಲಿದೆ.

English summary
Karnataka State Road Transport Corporation (KSRTC) all set to provide shuttle bus services to IT companies. In Bengaluru city most of the companies depended on private busses to transport their employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X