ಕೆಎಸ್‌ಆರ್‌ಟಿಸಿಯ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಯುವುದು ಯಾವಾಗ?
ಬೆಂಗಳೂರು, ಜನವರಿ 16: ಕೆಎಸ್‌ಆರ್‌ಟಿಸಿ ಡಬಲ್ ಡೆಕ್ಕರ್ ಬಸ್ ಯೋಜನೆ ಕನಸಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಡಬಲ್ ಡೆಕ್ಕರ್ ಬಸ್ ತಯಾರಿಸಲು ಯಾವ ಕಂಪನಿಯೂ ಮುಂದೆ ಬಾರದೇ ಇರುವುದೇ ಇದಕ್ಕೆ ಕಾರಣವಾಗಿದೆ.
ಕೆಎಸ್‌ಆರ್‌ಟಿಸಿಯು ಒಟ್ಟು 6 ಡಬಲ್ ಡೆಕ್ಕರ್ ಬಸ್‌ಗಳನ್ನು ಕಾಯಾಚರಣೆ ಮಾಡಲು ನಿರ್ಧರಿಸಿತ್ತು. ಬಸ್ ತಯಾರಿಸುವ ವೋಲ್ವೊ, ಲೈಲ್ಯಾಂಡ್, ಐಷರ್, ಟಾಟಾ ಸೇರಿದಂತೆ ಇತರೆ ಕಂಪನಿಗಳೊಂದಿಗೆ ಮಾತುಕತೆಯೂ ನಡೆದಿತ್ತು.ಆದರೆ ಯಾವ ಕಂಪನಿಗಳು ಡಬ್ಬಲ್ ಡೆಕ್ಕರ್ ಬಸ್ ತಯಾರಿಕೆಗೆ ಆಸಕ್ತಿ ತೋರಿಲ್ಲ ಎನ್ನುವುದು ತಿಳಿದುಬಂದಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲವು ದೇಶದ ಆಯ್ದ 70 ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆಗೆ ಉತ್ಸುಕವಾಗಿತ್ತು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವ ವಾಹನಗಳ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವುದು ಈ ಡಬಲ್ ಡೆಕ್ಕರ್ ಬಸ್ ಯೋಜನೆಯ ಉದ್ದೇಶವಾಗಿತ್ತು.

ಕೆಎಸ್‌ಆರ್‌ಸಿಯ ಈ ಬಸ್‌ಗಳನ್ನು ಐದು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಬೆಂಗಲೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು ಹುಬ್ಬಳ್ಳಿ ಮಾರ್ಗ ಗುರುತಿಸಲಾಗಿತ್ತು. ಈ ಮಾದರಿಯ ಬಸ್‌ಗಳ ದರ ಕೂಡ ದುಬಾರಿಯಾಗುತ್ತದೆ, ಏಕಾಏಕಿ ದೊಡ್ಡ ಸಂಖ್ಯೆಯ ಬಸ್‌ಗಳನ್ನು ಖರೀದಿಸುವುದು ಕಷ್ಟವಾಗುತ್ತದೆ ಎನ್ನುವ ಮಾತು ಕೂಡ ಕೇಳಿಬಂದಿದೆ.












Click it and Unblock the Notifications