KSRTC Bus: ಹೊಸ 20 ವೊಲ್ವೋ ಬಸ್ಗಳ ಸೇವೆ ಆರಂಭ: ಬಸ್ ಸಂಚಾರ ಮಾರ್ಗಗಳು, ವಿಶೇಷತೆ
ಬೆಂಗಳೂರು, ಡಿಸೆಂಬರ್ 24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೊಸ 20 ನೂತನ ವೋಲ್ವೋ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳಿಗೆ ಸರ್ಕಾರ ಚಾಲನೆ ನೀಡಿದೆ. ಈ ಮೂಲಕ ಐಶಾರಾಮಿ ಬಸ್‌ಗಳು ನಿಗಮಕ್ಕೆ ಸೇರ್ಪಡೆಯಾಗಿವೆ. ಈ ಬಸ್‌ಗಳು ರಾಜ್ಯದಲ್ಲಿ ಯಾವೆಲ್ಲ ಮಾರ್ಗಗಳಲ್ಲಿ ಓಡಾಡಲಿವೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೊಸ ಬಸ್ ಕಾರ್ಯಾಚರಣೆಗೆ ಮಂಗಳವಾರ (ಡಿಸೆಂಬರ್ 24) ಹಸಿರು ನಿಶಾನೆ ತೋರಿಸಿದ್ದಾರೆ. ಈ ಅಂಬಾರಿ ಉತ್ಸವ ಸ್ಲೀಪರ್ ಬಸ್ಸುಗಳನ್ನು ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸಲು ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ.

ಹೊಸ ವೊಲ್ವೋ ಬಸ್‌ಗಳ ಮಾರ್ಗಗಳ ಪಟ್ಟಿ
* ಕುಂದಾಪುರ-ಬೆಂಗಳೂರು (2 ಬಸ್‌ಗಳು)
* ಮಂಗಳೂರು-ಬೆಂಗಳೂರು (2 ಬಸ್‌ಗಳು)
* ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಂದಾಪುರ (2 ಬಸ್‌ಗಳು)
* ಬೆಂಗಳೂರು-ನೆಲ್ಲೂರು (2 ಬಸ್‌ಗಳು)
* ಬೆಂಗಳೂರು - ಹೈದಾರಬಾದ್ (2 ಬಸ್‌ಗಳು)
* ಬೆಂಗಳೂರು -ವಿಜಯವಾಡ- (4 ಬಸ್‌ಗಳು)
* ಬೆಂಗಳೂರು- ಎರ್ನಾಕುಲಂ (2 ಬಸ್‌ಗಳು)
* ಬೆಂಗಳೂರು- ತ್ರಿಶೂರು (2 ಬಸ್‌ಗಳು)
* ಬೆಂಗಳೂರು- ಕ್ಯಾಲಿಕಟ್ (2 ಬಸ್‌ಗಳು)
ಹೊಸ ವೋಲ್ವೋ ಬಸ್‌ಗಳ ವಿಶೇಷತೆ ಏನು?
* ಈ ಹೊಸ ವೋಲ್ವೋ ಬಸ್ 15 ಮೀಟರ್ ಉದ್ದವಿದ್ದು, 40 ಬರ್ತ್ 2x1 ಸಂರಚನೆಯೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುತ್ತದೆ.
* ವೋಲ್ವೋ ಬಸ್ ಶಕ್ತಿಯುತ ಹಾಲೋಜನ್ ಹೆಡ್ ಲೈಟ್‌ಗಳು ಮತ್ತು ಡೇ ಟೈಮ್ ರನ್ನಿಂಗ್ ಲೈಟ್ ಗಳನ್ನು (DRL) ಹೊಂದಿರುತ್ತದೆ.
* ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಸ್ಕ್ಯಾಂಡಿನೇವಿಯನ್ ಶೈಲಿಯ ಎಕ್ಸ್ಟೀರಿಯರ್ಸ್ ಹೊಂದಿದೆ.
* ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆ ಒದಗಿಸುತ್ತದೆ. ನೂತನ ಆವಿಷ್ಕಾರದ ಎಂಜಿನ್ ತಂತ್ರಜ್ಞಾನವು ಶ್ರೇಷ್ಠ ಕಾರ್ಯಕ್ಷಮತೆಯನ್ನು ಮತ್ತು ಸುಧಾರಿತ ಇಂಧನ ದಕ್ಷತೆಯನ್ನು (KMPL) ಒದಗಿಸುತ್ತದೆ.
* ಚಾಲಕರ ಚಾಲನಾ ವೀಕ್ಷಣೆ ಸುಧಾರಿಸಲು ಮತ್ತು ಬ್ಲೈಂಡ್ ಸ್ಪಾಟ್ ಕಡಿಮೆ ಮಾಡಲು ಮುಂಭಾಗದ ಗಾಜು ಶೇಕಡಾ 9.5 ಅಗಲವಾಗಿದೆ.
* ದೊಡ್ಡ ಏರ್ ಡಕ್ಟ್ ಹೊಂದಿರುವುದರಿಂದ ಹೆಚ್ಚಿನ ಏರ್ ಕಂಡೀಷನಿಂಗ್ ವ್ಯವಸ್ಥೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಉತ್ತಮ ಆಸನಗಳು ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಅನುಕೂಲ ನೀಡುತ್ತದೆ.
* ರಾತ್ರಿ ಸಮಯದಲ್ಲಿ ಚಾಲನೆ ಮಾಡುವಾಗ ಹೆಚ್ಚಿನ ಸುರಕ್ಷತೆಗಾಗಿ ಹಿಂಬದಿ ಫಾಗ್ ಲೈಟುಗಳು. ಚಾಲಕರ ಅನುಕೂಲತೆಗಾಗಿ ಸುಲಭವಾಗಿ ಕೈಗೆಟುಕುವ ನಿಯಂತ್ರಕಗಳು ಮತ್ತು ಸ್ವಿಚ್ಚುಗಳನ್ನು ಹೊಂದಿವೆ.
* ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (FDSS) ಸ್ಥಾಪಿಸಲಾಗಿದೆ.
* ಪ್ಯಾಂಟೊಗ್ರಾಫಿಕ್ ವಿನ್ಯಾಸವು ವಾಹನ ನಿರ್ವಹಣೆ ಸರಳಗೊಳಿಸಿದೆ.
* ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಯು.ಎಸ್.ಬಿ ಮತ್ತು ಸಿ-ಟೈಪ್ ವ್ಯವಸ್ಥೆ ಇದೆ.
* ಚಾಲಕರು ಪ್ರಯಾಣಿಕರ ಬಾಗಿಲಿನಿಂದ ಪಾದಚಾರಿಗಳನ್ನು ಸುಲಭವಾಗಿ ನೋಡಬಹುದಾದ ಕಾರಣ, ಪಾದಚಾರಿ ಸುರಕ್ಷತೆಯನ್ನು ಸುಧಾರಿಸಿದೆ.












Click it and Unblock the Notifications