KSRTC: ಬೆಂಗಳೂರು-ಶಬರಿ ಮಲೆ ರಾಜಹಂಸ ವಿಶೇಷ ಬಸ್‌: ಸಮಯ, ದರ ವಿವರ ಇಲ್ಲಿದೆ

ಬೆಂಗಳೂರು, ನವೆಂಬರ್‌ 29: ಈಗಾಗಲೇ ಅಯ್ಯಪ್ಪ ಸ್ವಾಮಿಯ ವ್ರತಾಚರಣೆ ಆರಂಭವಾಗಿದ್ದು, ಕೇರಳದ ಪುಣ್ಯಕ್ಷೇತ್ರ ಶಬರಿಮಲೆಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಡಿಸೆಂಬರ್‌ನಲ್ಲಿ ಶಬರಿಮಲೆಗೆ ಹೋಗುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ಸೌಲಭ್ಯ ನೀಡಲು ಮುಂದಾಗಿದೆ.

ಶಬರಿ ಮಲೆಯಾತ್ರೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಡಿಸೆಂಬರ್‌ 1ರಿಂದ ಬೆಂಗಳೂರಿನಿಂದ ಶಬರಿ ಮಲೆಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ. ಯಾತ್ರಿಕರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ಇಲಾಖೆ ಈ ಸೌಲಭ್ಯ ನೀಡಿದ್ದು, ಯಾತ್ರಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.

KSRTC Bus: Bangalore To Sabarimala KSRTC Bus Details

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 'ವಿಶ್ವ ವಿಖ್ಯಾತ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಬೆಂಗಳೂರಿನಿಂದ ವೋಲ್ವೋ, ರಾಜಹಂಸ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ' ಎಂದು ತಿಳಿಸಿದ್ದಾರೆ.

ಬಸ್‌ ಸಂಚಾರ ಎಲ್ಲಿಂದ-ಎಲ್ಲಿಗೆ..?

ಡಿಸೆಂಬರ್‌ 1ರಿಂದ ಈ ಬಸ್‌ಗಳ ಸಂಚಾರ ಆರಂಭವಾಗಿದೆ. ಹವಾನಿಯಂತ್ರಿತ ರಹಿತ ರಾಜಹಂಸ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ನಿಲಕ್ಕಲ್‌ ತಲುಪಲಿದೆ. ಆ ದಿನ ಸಂಜೆ ಈ ಬಸ್‌ 5 ಗಂಟೆಗೆ ನಿಲಕ್ಕಲ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ.

ಇನ್ನು ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.45ಕ್ಕೆ ನಿಲಕ್ಕಲ್‌ ತಲುಪಲಿದೆ. ಅದೇ ದಿನ ಸಂಜೆ ಈ ಬಸ್‌ ನಿಲಕ್ಕಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

KSRTC Bus: Bangalore To Sabarimala KSRTC Bus Details

ಇನ್ನು ಶಬರಿಮಲೆ ಯಾತ್ರೆಗಾಗಿ ಸಂಚಾರ ಆರಂಭಿಸಿರುವ ಈ ವಿಶೇಷ ಬಸ್‌ಗಳಿಗೆ ದರ ನಿಗದಿ ಮಾಡಲಾಗಿದ್ದು, ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂಪಾಯಿ ಆಗಿದೆ. ಇನ್ನು ವೋಲ್ವೋ ಬಸ್‌ನಲ್ಲಿ ಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 1,600 ರೂಪಾಯಿ ಆಗಿದೆ.

ಶಬರಿಮಲೆಗೆ ಬಸ್‌ ಬುಕ್ಕಿಂಗ್‌ ಹೇಗೆ..?

ಕೆಎಸ್‌ಆರ್‌ಟಿಸಿ ವೋಲ್ವೋ ಹಾಗೂ ರಾಜಹಂಸ ಬಸ್‌ಗಳನ್ನು ಬುಕ್‌ ಮಾಡಲು ಕರ್ನಾಟಕ ಸಾರಿಗೆ ಇಲಾಖೆ ನೀಡಿರುವ ಪ್ರಕಟಣೆಯಲ್ಲಿ ಸ್ಕ್ಯಾನರ್ ನೀಡಲಾಗಿದೆ. ಈ ಸ್ಕ್ಯಾನರ್ ಬಳಸಿ ಈ ವಿಶೇಷ ಸಂಚಾರದ ಬಸ್‌ಗಳನ್ನು ಬುಕ್‌ ಮಾಡಬಹುದಾಗಿದೆ. ಅಲ್ಲದೇ ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ (www.ksrtc.in) ಮೂಲಕ ಮಾಡಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್‌ ಬುಕ್ಕಿಂಗ್‌ಗಾಗಿ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+