ನಿಮ್ಮ ಏರಿಯಾ ಗಣೇಶ 5 ಅಡಿಗಿಂತ ಹೆಚ್ಚು ಎತ್ತರ ಇರೋಹಾಗಿಲ್ಲ
Recommended Video

ಬೆಂಗಳೂರು, ಆಗಸ್ಟ್ 18: ಗಣೇಶ ಚತುರ್ಥಿ ಇನ್ನೇನು ಬಂದೇ ಬಿಟ್ಟಿದೆ, ಆದರೆ ಒಂದು ವಿಷಯವನ್ನು ಗಮನದಲ್ಲಿಡಬೇಕಾಗಿದೆ. ಈ ಬಾರಿ ನಿಮಗೆ ಮನಸ್ಸಿಗೆ ಬಂದಷ್ಟು ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ, ಗಣಪತಿ ಮೂರ್ತಿ ಕೇವಲ 5 ಅಡಿಗೆ ಸೀಮಿತವಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ವಿಧಿಸಿದೆ.
ಗಣೇಶನ ಮೂರ್ತಿ ವಿಸರ್ಜನೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಮಾಲಿನ್ಯ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಕಳೆದ ವರ್ಷವೂ ಈ ಸೂಚನೆಯನ್ನು ನೀಡಿತ್ತು, ಆದರೆ ಗಣೇಶ ಉತ್ಸವ ಸಮಿತಿಗಳು ಆಕ್ಷೇಪ ಸಲ್ಲಿಸಿದ್ದವು ಆದರೆ ಈ ಬಾರಿ ಕಡ್ಡಾಯವಾಗಿ ಗಂನಪತಿ ಮೂರ್ತಿ ಕೇವಲ 5 ಅಡಿ ಮೀರಬಾರದು ಎಂದು ಹೇಳಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಟ್ಯಾಂಕರ್‌ಗಳಲ್ಲಿ ಮೂರ್ತಿಗಳ ವಿಸರ್ಜನೆಗೆ ಏರ್ಪಾಟು ಮಾಡುತ್ತವೆ. ಪ್ರತಿ ವಾರ್ಡ್‌ಗಳಿಗೆ ತೆರಳುವ ಸಿಬ್ಬಂದಿ ಮೂರ್ತಿಗಳನ್ನು ವಿಸರ್ಜಿಸಿ ಅದರ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ. ಎತ್ತರವಿರುವ ಮೂರ್ತಿಗಳು ಭಾರವಾಗಿದ್ದು,ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುತ್ತವೆ. ಇದನ್ನು ವಿಲೇವಾರಿ ಮಾಡುವುದು ಕಷ್ಟವಾಗುತ್ತದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

ನಗರದಲ್ಲಿ ಕೆಲ ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುತ್ತದೆ.ಈ ದೊಡ್ಡ ಮೂರ್ತಿಗಳಿಂದ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗಿ ಕಲ್ಯಾಣಿಗೆ ತೊಂದರೆಯಾಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಈ ನಿಯಮ ಜಾರಿಗೆ ತರಲಾಗಿದೆ. 5 ಅಡಿ ಎತ್ತರದ ಮೂರ್ತಿ ತಯಾರಿಸಲು 70ರಿಂದ 80 ಕೆಜಿ ಮಣ್ಣು ಬೇಕಾಗುತ್ತದೆ.
ಐದು ಅಡಿಗಿಂತ ಹೆಚ್ಚು ಎತ್ತರದ ಮೂರ್ತಿ ತಯಾರಿಸಲು 100 ಕೆಜಿಗೂ ಅಧಿಕ ಮಣ್ಣು ಬೇಕಾಗುತ್ತದೆ ಇಂತಹ ಮೂರ್ತಿ ವಿಸರ್ಜನೆ ಕಷ್ಟವಾಗುತ್ತದೆ, ಹಾಗಾಗಿ ಮೂರ್ತಿಯನ್ನು 5 ಅಡಿಗೆ ಸೀಮಿತಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.












Click it and Unblock the Notifications