ರಮ್ಯಾ ಕೈ ಜಾರಿದ 'ಹಾಟ್' ಐಕಾನ್ ಪಟ್ಟ ಕೃತಿ ಮುಡಿಗೆ

ಬೆಂಗಳೂರು, ಜೂ.25: ಬೆಂಗಳೂರು ನಗರದ 'ಹಾಟ್' ಐಕಾನ್ ಯಾರು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಬೆಂಗಳೂರು ಟೈಮ್ಸ್ ನಡೆಸಿದ ಆನ್ ಲೈನ್ ವೋಟಿಂಗ್ ನಂತೆ 2013ರ 'ಮೋಸ್ಟ್ ಡಿಸೈರಬಲ್ ವುಮೆನ್' ಆಗುವ ಅವಕಾಶದಿಂದ ಮಂಡ್ಯದ ಮಾಜಿ ಸಂಸದೆ, ಲಕ್ಕಿ ಸ್ಟಾರ್ ರಮ್ಯಾ ಸ್ವಲ್ಪದರಲ್ಲೆ ಮಿಸ್ ಮಾಡಿಕೊಂಡಿದ್ದಾರಂತೆ. ಯುವಕರ ಮನಗೆದ್ದ ಅರಸಿಯಾಗಿ ಹೊಸ ಹುಡುಗಿ ಕೃತಿ ಕರಬಂದ ಅಗ್ರಸ್ಥಾನಕ್ಕೇರಿದ್ದಾರೆ.

'ಇಲ್ಲೆ ಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ ಎಂದು ಹಾಡುತ್ತಾ ಗಾಂಧಿನಗರಕ್ಕೆ ಕಾಲಿಟ್ಟ ಬೆಡಗಿ ಕೃತಿ ಯುವಪೀಳಿಗೆಯ ನಂ.1 ಆಯ್ಕೆ ಎನಿಸಿದ್ದಾರೆ. ಚಿರು, ಪ್ರೇಮ್ ಅಡ್ಡ, ಗೂಗ್ಲಿ ಚಿತ್ರಗಳ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿದ್ದಾರೆ. ರಮ್ಯಾ ಅವರು ಚುನಾವಣೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಕೆಲ ಕಾಲ ಬ್ರೇಕ್ ಪಡೆದುಕೊಂಡ ಕಾರಣ ಜನಪ್ರಿಯತೆ ಗ್ರಾಫ್ ಸ್ವಲ್ಪ ಕುಗ್ಗಿದೆ.

ರಮ್ಯಾ ಅಲ್ಲದೆ ಅನುಷ್ಕಾ ಶೆಟ್ಟಿ, ಪ್ರಿಯಾಮಣಿ, ರಾಗಿಣಿ ದ್ವಿವೇದಿ, ಹರಿಪ್ರಿಯ, ಪ್ರಣೀತಾ, ಮಾಡೆಲ್ ಗಳಾದ ಸರೋಜ್ಮ್ ಅಶ್ವತಿ, ವರ್ಷ ಮುಂತಾದವರನ್ನು ಹಿಂದಿಕ್ಕಿ ಕೃತಿ ಹೆಚ್ಚಿನ ಮತ ಗಳಿಸಿ ಮೇಲೆರಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಐಟೈಮ್ಸ್ ವೆಬ್ ತಾಣದಲ್ಲಿ ನಡೆದ ಆನ್ ಲೈನ್ ಸಮೀಕ್ಷೆ ವರದಿ ಈಗ ಪ್ರಕಟಿಸಲಾಗಿದೆ. ನಿಮ್ಮ ನೆಚ್ಚಿನ ಸ್ಟಾರ್ ಗಳನ್ನು ನೋಡುತ್ತಾ ಮುಂದುವರೆಯಿರಿ...

ಈ ಸ್ಪರ್ಧೆಯಲ್ಲಿ ಚಲನಚಿತ್ರ ನಟಿ, ಮಾಡೆಲ್ ಗಳು ಕಣದಲ್ಲಿದ್ದರು. ಓದುಗರು ತಮ್ಮ ನೆಚ್ಚಿನ ಸ್ಟಾರ್ ಗೆ ಮತ ಹಾಕುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಟ್ ಪುರುಷ, ಮಹಿಳೆ ಎಂಬ ಕೆಟಗರಿಯಲ್ಲಿ ಪ್ರತಿ ನಗರ ಹಾಗೂ ಪ್ರತಿ ಚಿತ್ರರಂಗಕ್ಕೂ ಪ್ರತ್ಯೇಕ ಸಮೀಕ್ಷೆ ನಡೆಸಲಾಗಿದೆ.[ಕಿಚ್ಚ ಸುದೀಪ್ ಹಿಂದಿಕ್ಕಿದ ಯಶ್ ನಂ.1]

ಬೆಳ್ಳಿ ಬೊಂಬೆ ಕೃತಿ #1

ಬೆಳ್ಳಿ ಬೊಂಬೆ ಕೃತಿ #1

'ಇಲ್ಲೆ ಇಲ್ಲಿ ಎಲ್ಲೋ ನನ್ನ ಮನಸು ಕಾಣೆಯಾಗಿದೆ ಎಂದು ಹಾಡುತ್ತಾ ಗಾಂಧಿನಗರಕ್ಕೆ ಕಾಲಿಟ್ಟ ಬೆಡಗಿ ಕೃತಿ ಯುವಪೀಳಿಗೆಯ ನಂ.1 ಆಯ್ಕೆ ಎನಿಸಿದ್ದಾರೆ. ಚಿರು, ಪ್ರೇಮ್ ಅಡ್ಡ, ಗೂಗ್ಲಿ ಚಿತ್ರಗಳ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿದ್ದಾರೆ. ಈಗ ಶಿವರಾಜ್ ಕುಮಾರ್ ಜತೆ ಬೆಳ್ಳಿ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಲಕ್ಕಿ ಸ್ಟಾರ್ ರಮ್ಯಾ #2

ಲಕ್ಕಿ ಸ್ಟಾರ್ ರಮ್ಯಾ #2

ಮಂಡ್ಯದಲ್ಲಿ ಇತ್ತೀಚೆಗೆ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿ ಸೋಲು ಕಂಡ ರಮ್ಯಾ ಈಗ ಮಾಜಿ ಸಂಸದೆ. ಆರ್ಯನ್, ದಿಲ್ ಕ ರಾಜಾ ಚಿತ್ರಗಳು ಕೈಲಿವೆ. ನೀರ್ ದೋಸೆ ಬಗ್ಗೆ ಗೊತ್ತಿಲ್ಲ. ಕೋಡಿ ರಾಮಕೃಷ್ಣರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಮತ್ತೆ ಬೇಡಿಕೆ ಕುದುರಿದೆ.

ಕುಡ್ಲದ ಬಾಲೆ ಅನುಷ್ಕಾ ಶೆಟ್ಟಿ #3

ಕುಡ್ಲದ ಬಾಲೆ ಅನುಷ್ಕಾ ಶೆಟ್ಟಿ #3

ಬೆಂಗಳೂರು ಮೂಲದ ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ ಕಾಲಿವುಡ್, ಟಾಲಿವುಡ್ ನಲ್ಲಿ ಸಕತ್ ಫೇಮಸ್. ಬಾಹುಬಲಿ ಚಿತ್ರ ಅಪಾರ ನಿರೀಕ್ಷೆ ಹುಟ್ಟಿಸಿದೆ. ಸಿಂಗಂ 2,ಇರಾಡಂ ಉಳಗಂ ಅಷ್ಟಾಗಿ ಹೆಸರು ಮಾಡಿಲ್ಲವಾದರೂ ಬೆಂಗಳೂರಿನಲ್ಲಿ ಆಕೆ ಅಭಿಮಾನಿಗಳೇನೂ ಕಡಿಮೆಯಾಗಿಲ್ಲ.

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ #4

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ #4

ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ 2009ರಲ್ಲಿ ಅಭಿಮಾನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರೂ ಬೆಳಕಿಗೆ ಬಂದಿದ್ದು ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದ ಮೂಲಕ. ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಜತೆ ಓ ಮೈ ಗಾಡ್, ಅಜಬ್ ಗಜಬ್ ಲವ್ ಚಿತ್ರಗಳನ್ನು ಮುಗಿಸಿದ ನಿಧಿ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಪ್ರಿಯಾಮಣಿ #5

ಪ್ರಿಯಾಮಣಿ #5

ಬೆಂಗಳೂರು ಮೂಲದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಟಾಲಿವುಡ್, ಕಾಲಿವುಡ್, ಮಾಲಿವುಡ್ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವ್ರು. ಸುದೀಪ್, ಶ್ರೀನಗರ ಕಿಟ್ಟಿ, ಪುನೀತ್, ಶಿವರಾಜ್ ಜತೆ ನಟಿಸಿದ್ದು ಈಗ ದರ್ಶನ್ ಜತೆ ಅಂಬರೀಷ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಡೆಲ್ ಕಮ್ ನಟಿ ರಾಗಿಣಿ ದ್ವಿವೇದಿ #6

ಮಾಡೆಲ್ ಕಮ್ ನಟಿ ರಾಗಿಣಿ ದ್ವಿವೇದಿ #6

ಮಾಡೆಲ್ ಕಮ್ ನಟಿ ರಾಗಿಣಿ ದ್ವಿವೇದಿ ಅವರು 2009ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದವರು. ಸುದೀಪ್ ಜತೆ ವೀರ ಮದಕರಿ, ಕೆಂಪೇಗೌಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಟಾಪ್ ನಟರ ಜತೆ ನಟಿಸಿರುವ ರಾಗಿಣಿ ಬಾಲಿವುಡ್ಡಿಗೂ ಹೋಗಿ ಕುಣಿದು ಬಂದಿದ್ದಾರೆ. ಬಸವಣ್ಣ, ರಾಗಿಣಿ ಐಪಿಎಸ್ ನಿರೀಕ್ಷಿತ ಚಿತ್ರಗಳು

ರುಕ್ಮಿಣಿ ವಿಜಯ್ ಕುಮಾರ್ #7

ರುಕ್ಮಿಣಿ ವಿಜಯ್ ಕುಮಾರ್ #7

ಭರತನಾಟ್ಯ ಕಲಾವಿದೆ ರುಕ್ಮಿಣಿ ವಿಜಯ್ ಕುಮಾರ್ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಭಾರತೀರಾಜರ ಚಿತ್ರದಲ್ಲಿ ಕಾಣಿಸಿಕೊಂದರು. ಕೊಚಾಡಿಯನ್ ನಲ್ಲಿ ರಜನಿಕಾಂತ್ ತಂಗಿ ಪಾತ್ರ ನಿರ್ವಹಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಕನ್ನಡ ಮಿಲ್ಕ್ ಬ್ಯೂಟಿ ಪ್ರಣೀತಾ #8

ಕನ್ನಡ ಮಿಲ್ಕ್ ಬ್ಯೂಟಿ ಪ್ರಣೀತಾ #8

ಕನ್ನಡದಲ್ಲಿ ಪೊರ್ಕಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಕುಮಾರನ್ಸ್ ಕಾಲೇಜಿನ ಬೆಡಗಿ ತೆಲುಗು ಚಿತ್ರರಂಗದಲ್ಲೂ ಬೇಡಿಕೆ ಹೊಂದಿದ್ದಾರೆ. ಚಿರು ಜತೆ ವಿಶಲ್, ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಪವನ್ ಕಲ್ಯಾಣ್ ಜತೆ ನಟಿಸಿದ್ದು, ಉಪೇಂದ್ರ ಜತೆ ಬ್ರಹ್ಮದಲ್ಲಿ ಜೋಡಿಯಾಗಿದ್ದರು.

ಐಂದ್ರಿತಾ ರೇ #9

ಐಂದ್ರಿತಾ ರೇ #9

ಬೆಂಗಾಳಿ ಮೂಲದ ಬೆಡಗಿ ಐಂದ್ರಿತಾ ರೇ ಮನಸಾರೆ ಚಿತ್ರದ ಮೂಲಕ ಗಮನ ಸೆಳೆದಿದ್ದಲ್ಲದೆ, ಜಂಗ್ಲಿ, ಕಡ್ಡಿಪುಡಿಯಲ್ಲೂ ಗಮನಾರ್ಹ ಅಭಿನಯ ನೀಡಿದರು. ಭಜರಂಗಿ ಚಿತ್ರದ ನಂತರ ಈಗ ಬೆಂಗಾಳಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಟಾಲ್ ಮಾಡೆಲ್ ಶುಭ್ರಾ ಅಯ್ಯಪ್ಪ #10

ಟಾಲ್ ಮಾಡೆಲ್ ಶುಭ್ರಾ ಅಯ್ಯಪ್ಪ #10

ಟಾಲ್ ಮಾಡೆಲ್ ಶುಭ್ರಾ ಅಯ್ಯಪ್ಪ ಬೆಂಗಳೂರಿನ ಸೂಪರ್ ರೂಪದರ್ಶಿ, ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿರುವ ಬೆಡಗಿ.

ನಿಲೂಫರ್ ಮೊಹಮ್ಮದಿ #11

ನಿಲೂಫರ್ ಮೊಹಮ್ಮದಿ #11

ಇರಾನ್ನಿನ ಬೆಡಗಿ ನಿಲೂಫರ್ ಮೊಹಮ್ಮದಿ ಬೆಂಗಳೂರಿನ ಟಾಪ್ ಮಾಡೆಲ್. ಫ್ಯಾಷನ್ ಗುರು ಪ್ರಸಾದ್ ಬಿದಪ್ಪ ಅವರ ಶೋಧ.

ಶರ್ಮಿಳಾ ಮಾಂಡ್ರೆ #12

ಶರ್ಮಿಳಾ ಮಾಂಡ್ರೆ #12

ಸಮೀರ್ ದತ್ತಾನಿ(ಧ್ಯಾನ್) ಜೋಡಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶರ್ಮಿಳಾ ಈಗ ತಮಿಳು ಚಿತ್ರರಂಗದಲ್ಲಿ ಮಿರಟಾಲ್ ನಂತರ ಉದ್ಯೋಗ ಅರಸುತ್ತಿದ್ದಾರೆ. ತೆಲುಗಿನಲ್ಲಿ ಕೆವ್ವು ಕೇಕಾ ಚಿತ್ರದಲ್ಲಿ ನಟಿಸಿದ್ದರು.

ರೂಪದರ್ಶಿ ಮಿಥಾಲಿ #13

ರೂಪದರ್ಶಿ ಮಿಥಾಲಿ #13

ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ಓದಿರುವ ಬೆಂಗಳೂರಿನ ಬೆಡಗಿ ರೂಪದರ್ಶಿ ಮಿಥಾಲಿ, ಫ್ಯಾಷನ್ ಜಗತ್ತಿನ ಬೇಡಿಕೆಯ ಮಾಡೆಲ್.

ಚಿಕ್ಕಮಗಳೂರು ಬಾಲೆ ದೀಪಾ #14

ಚಿಕ್ಕಮಗಳೂರು ಬಾಲೆ ದೀಪಾ #14

ಚಿಕ್ಕಮಗಳೂರು ಬಾಲೆ ದೀಪಾ ಸನ್ನಿಧಿ ದರ್ಶನ್ ಹಾಗೂ ಪುನೀತ್ ಜತೆ ಒಂದೇ ವರ್ಷದಲ್ಲಿ ನಟಿಸಿದ ಲಕ್ಕಿ ಬೆಡಗಿ. ಸಕ್ಕರೆ ಚಿತ್ರದ ನಂತರ ಮತ್ತೆ ಹೊಸ ಯಶಸ್ಸಿಗಾಗಿ ಕಾದಿದ್ದಾರೆ.

ಹರಿಪ್ರಿಯಾ ಈಗ ಉಗ್ರಂ ಬೆಡಗಿ #15

ಹರಿಪ್ರಿಯಾ ಈಗ ಉಗ್ರಂ ಬೆಡಗಿ #15

ಹರಿಪ್ರಿಯಾ ಈಗ ಉಗ್ರಂ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಶ್ರುತಿ ಇವರ ಮೂಲ ಹೆಸರಾಗಿದ್ದರು ಹರಿಪ್ರಿಯಾ ಎಂಬ ಹೆಸರಿನಲ್ಲೇ ತೆಲುಗಿನಲ್ಲೂ ಜನಪ್ರಿಯತೆ ಗಳಿಸಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದು 2008ರಲ್ಲಿ

ವರ್ಷಾ ಗೋಪಾಲ್ #21

ವರ್ಷಾ ಗೋಪಾಲ್ #21

ಮೌಂಟ್ ಕಾರ್ಮೆಲ್ ಕಾಲೇಜಿನ ಹುಡುಗಿ ಮಿಸ್ ಇಂಡಿಯಾ 2014ರ ಫೈನಲಿಸ್ಟ್ ಆಗಿದ್ದು, ಮಿಸ್ ಬೆಕ್ಕಿನ ನಡಿಗೆ 2014 ಪ್ರಶಸ್ತಿ ಗೆದ್ದಿರುವ ಈಕೆಗೆ ಬಾಸ್ಕೆಟ್ ಬಾಲ್ ಆಡುವುದು ಇಷ್ಟ. ಭರತನಾಟ್ಯ ಕಲಾವಿದೆ ಕೂಡಾ.

ಪರೂಲ್ ಯಾದವ್ #22

ಪರೂಲ್ ಯಾದವ್ #22

ಪ್ಯಾರ್ಗೆ ಆಗ್ಬುಟೈತೆ ಎನ್ನುತ್ತಾ ಗೋವಿಂದಾಯ ನಮಃ ಚಿತ್ರದ ಮೂಲದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪರೂಲ್ ಯಾದವ್, ಸುದೀಪ್ ಜತೆ ಬಚ್ಚನ್ ಚಿತ್ರದಲ್ಲಿ ನಟಿಸಿದ್ದು ಮುಂದಿನ ಚಿತ್ರ ಅಪೂರ್ವ.

ಪಾರ್ವತಿ ನಾಯರ್ #23

ಪಾರ್ವತಿ ನಾಯರ್ #23

ಅಬುದಾಬಿಯಲ್ಲಿ ಜನಿಸಿರುವ ಪಾರ್ವತಿ ನಾಯರ್ ಕಂಪ್ಯೂಟರ್ ವಿಜ್ಞಾನ ವಿಷಯದ ಪದವೀಧರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ವೃತ್ತಿ ಬದುಕು ಅರಸುತ್ತಿದ್ದಾರೆ. ಮಲೆಯಾಳಂನ ಪಾಪಿನ್ಸ್ ಚಿತ್ರ ಒಂದೆರಡು ತಮಿಳು, ಕನ್ನಡ ಚಿತ್ರದಲ್ಲೂ ನಟನೆ. ಮಿಸ್ ಸ್ಯಾಂಡಲ್ ವುಡ್ ಪ್ರಶಸ್ತಿ ವಿಜೇತೆ.

ಮಾಡೆಲ್ ಕಾವ್ಯ ಶೆಟ್ಟಿ #24

ಮಾಡೆಲ್ ಕಾವ್ಯ ಶೆಟ್ಟಿ #24

ಬೆಂಗಳೂರಿನ ರೂಪದರ್ಶಿ ಕಾವ್ಯ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ಸೌಥ್ ಫೈನಲಿಸ್ಟ್, ಶಿವಾನಿ ಚಿತ್ರ ನಾಯಕಿ, ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಸಂಜನಾ #25

ಸಂಜನಾ #25

ಅರ್ಚನಾ ಗಲ್ ರಾಣಿ ಅಲಿಯಾಸ್ ಸಂಜನಾ ಮಾಡೆಲ್ ಆಗಿ ನಟಿಯಾಗಿ ಬೆಳೆದವರು. ಗಂಡ ಹೆಂಡತಿ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. ರೆಬೆಲ್ ಕನ್ನಡದಲ್ಲಿ ನಿರೀಕ್ಷಿತ ಚಿತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+