ಕೆಂಪೇಗೌಡ ಏರ್‌ಪೋರ್ಟ್‌ನಿಂದ ಪಿಂಕ್ ಟ್ಯಾಕ್ಸಿ ಸೇವೆ: ವಿಶೇಷವೇನು?
ಬೆಂಗಳೂರು, ಜನವರಿ 5: ಕೆಂಪೇಗೌಡ ಏರ್ ಪೋರ್ಟ್ ಮಾರ್ಗದಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಟ್ಯಾಕ್ಸಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭದಲ್ಲಿ 10 ಪಿಂಕ್ ಟ್ಯಾಕ್ಸಿಗಳನ್ನು ಆರಂಭಿಸಲಾಗುತ್ತದೆ ನಂತರದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು 850 ಏರ್‌ಪೋರ್ಟ್ ಟ್ಯಾಕ್ಸಿಯನ್ನು ನೀಡಲಿದೆ.
ಟ್ಯಾಕ್ಸಿಯನ್ನು ಸುಲಭವಾಗಿ ಗುರುತಿಸಲು ಟ್ಯಾಕ್ಸಿ ಮೇಲೆ ಗುಲಾಬಿ ಬಣ್ಣದ ಬಂಪರ್ ಇರುತ್ತದೆ. ದಿನದ 24 ಗಂಟೆಯೂ ಸೇವೆ ಲಭ್ಯವಾಗಲಿದೆ.

ಬೆಳಗ್ಗೆ 6 ಗಂಟೆಯಿಂದ ಪ್ರತಿ ಕಿ.ಮೀಗೆ 21.5 ರೂ ಕಡ್ಡಾಯವಾಗಿ ನೀಡಬೇಕಾಗುತ್ತದೆ.ಮಧ್ಯರಾತ್ರಿ ಸಂಚರಿಸಬೇಕಾದರೆ ಪ್ರತಿ ಕಿ.ಮೀಗೆ 23.5 ರೂ ನೀಡಬೇಕಾಗುತ್ತದೆ.
ಟ್ಯಾಕ್ಸಿಯಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಸಲಾಗಿರುತ್ತದೆ. ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ಸ್, ಮೊಬೈಲ್ ಡಿಸ್‌ಪ್ಲೇ ಟರ್ಮಿನಲ್ ಡಿವೈಸಸ್, ಪ್ಯಾನಿಕ್ ಬಟನ್ ವ್ಯವಸ್ಥೆ ಲಭ್ಯವಾಗಲಿದೆ. ಹಾಗಾಗಿ ಮಹಿಳೆಯರು ನೆಮ್ಮದಿಯಿಂದ ಪ್ರಯಾಣಿಸಬಹುದಾಗಿದೆ.











Click it and Unblock the Notifications