ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು, ಮೇ 24 : ದೇಶಿಯ ವಿಮಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ಘೋಷಣೆ ಮಾಡಿದ್ದಾರೆ. ಪ್ರಯಾಣಿಕರನ್ನು ಸ್ವಾಗತಿಸಲು ಬೆಂಗಳೂರು ವಿಮಾನ ನಿಲ್ದಾಣ ಸಿದ್ಧವಾಗಿದೆ.

Recommended Video

      2ತಿಂಗಳುಗಳ ಬಳಿಕ ಹಾರಾಡುತ್ತಿವೆ ಪ್ರಾದೇಶಿಕ ವಿಮಾನಗಳು | Domestic Flight Resumed | Kalburgi

      ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈಗ ವಂದೇ ಭಾರತ್ ಮಿಷನ್ ಅಡಿ ಆಗಮಿಸುವ ವಿಶೇಷ ವಿಮಾನಗಳು ಮಾತ್ರ ಬರುತ್ತಿವೆ.

      ಮೇ 25ರಿಂದ ದೇಶಿಯ ವಿಮಾನ ಸೇವೆ ಆರಂಭವಾಗುತ್ತಿದ್ದು, ಪ್ರಯಾಣಿಕರನ್ನು ಸ್ವಾಗತಿಸಲು ವಿಮಾನ ನಿಲ್ದಾಣ ಸಜ್ಜಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ವಿವಿಧ ನಿಯಮವನ್ನು ಪ್ರಯಾಣಿಕರು ಪಾಲಿಸಬೇಕಿದೆ.

      Kempegowda International Airport

      ದೆಹಲಿ, ಮುಂಬೈ ಬಳಿಕ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವುದು ಕೆಂಪೇಗೌಡ ವಿಮಾನ ನಿಲ್ದಾಣಲ್ಲಿ. ಕೊರೊನಾ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನ ನಿಲ್ದಾಣದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

      ವಿಮಾನದಲ್ಲಿ ಪ್ರಯಾಣಿಸುವ ಜನರು 2 ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ತಲುಪಬೇಕು. ಪ್ರಯಾಣಿಕರಿಗೆ ಸಹಾಯಕವಾಗಲು ಬಿಎಂಟಿಸಿಯು ಬಸ್‌ಗಳನ್ನು ಓಡಿಸುತ್ತಿದೆ. ಖಾಸಗಿ ವಾಹನದಲ್ಲಿ ಜನರು ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

      ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನಗಳು ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿವೆ. ಇದುವರೆಗೂ 13 ವಿಮಾನಗಳು ಬಂದಿವೆ. ಶನಿವಾರ ರಾತ್ರಿ 7.45ಕ್ಕೆ ಸಿಂಗಪುರದಿಂದ 148 ಪ್ರಯಾಣಿಕರು ಆಗಮಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+