KRS Dam: ಉತ್ತಮ ಮಳೆ, ಕರ್ನಾಟಕದ ವಿವಿಧ ಜಲಾಶಯಗಳ ಒಳಹರಿವು ಹೆಚ್ಚಳ, ವಿವರ
ಬೆಂಗಳೂರು, ಜೂನ್ 02: ಕರ್ನಾಟಕದಾದ್ಯಂತ ಅಲ್ಲಲ್ಲಿ ವ್ಯಾಪಕ ಮಳೆ ಸುರಿಯತ್ತಿದೆ. ಭಾರೀ ಮಳೆ ಸುರಿದ ಬಳಿಕ ಮುಂಗಾರು ಮಳೆ ಕೊಂಚ ತಣ್ಣಗಾಗಿದೆ. ಈಗಾಗಲೇ ಜಲಾಯನಯನ ಪ್ರದೇಶಗಳಲ್ಲಿ ಸುರಿದ ಜೋರು ಮಳೆಗೆ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಕೃಷ್ಣ ರಾಜ ಸಾಗರ (KRS Dam) ಅಣೆಕಟ್ಟು, ಹಾರಂಗಿ, ಹೇಮಾವತಿ ಹಾಗೂ ಕಬಿನಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ.
ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು, ಚಾಮರಾಜನಗರ, ಹಾಸನ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಉತ್ತಮ ಮಳೆ ಆಗಿತ್ತು. ಮುಂದಿನ ಒಂದು ವಾರ ಕಾಲ ಇದೇ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆ, ಕೆಲವೆಡೆ ಜೋರು ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಹಾರಂಗಿ ಜಲಾಶಯ, ಹಾಸನ ಜಿಲ್ಲೆಯ ಗೋರುರಲ್ಲಿರುವ ಹೇಮಾವತಿ, ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ವ್ಯಾಪ್ತಿಯಲ್ಲಿರುವ ಕಬಿನಿ ಸೇರಿದಂತೆ ಅನೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಏರಿಕೆ ಆಗಿದೆ. ಯಾವೆಲ್ಲ ಜಲಾಶಯಗಳಲ್ಲಿ ಜೂನ್ 2ರಂದು ಎಷ್ಟು ಒಳ, ಹೊರ ಹರಿವಿದೆ. ಒಟ್ಟು ಸಾಮರ್ಥ್ಯ ಹಾಗೂ ಇತರ ಅಪ್ಡೇಟ್ ಮಾಹಿತಿ ಇಲ್ಲಿದೆ.
ಇಂದು KRS ಅಣೆಕಟ್ಟು ನೀರಿನ ಮಟ್ಟ
ಒಟ್ಟು ನೀರಿನ ಸಾಮರ್ಥ್ಯ : 49.452 ಟಿಎಂಸಿ
ಇಂದಿನ ನೀರಿನ ಸಂಗ್ರಹ: 27.167 ಟಿಎಂಸಿ
ಒಳಹರಿವು: 16,170 ಕ್ಯೂಸೆಕ್
ಹೊರ ಹರಿವು: 722 ಕ್ಯೂಸೆಕ್
* ಹಾರಂಗಿ ಅಣೆಕಟ್ಟಿನ ಇಂದಿನ ಸಂಗ್ರಹ
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ : 8.5 ಟಿಎಂಸಿ
ಇಂದಿನ ನೀರಿನ ಸಂಗ್ರಹ: 6.046 ಟಿಎಂಸಿ
ಒಳಹರಿವು : 2005 ಕ್ಯೂಸೆಕ್
ಹೊರಹರಿವು : 100 ಕ್ಯೂಸೆಕ್ಸ್
* ಕಬಿನಿ ಜಲಾಶಯದ ಅಪ್ಡೇಟ್ಸ್
ಒಟ್ಟು ನೀರು ಸಂಗ್ರಹ ಸಾಮರ್ಥ್ಯ : 19.52 ಟಿಎಂಸಿ
ಇಂದಿನ ನೀರಿನ ಸಂಗ್ರಹ: 17.44 ಟಿಸಿಎಂ
ಒಳಹರಿವು ಎಷ್ಟಿದೆ: 9024 ಕ್ಯೂಸೆಕ್ಸ್
ಹೊರಹರಿವು : 8000 ಕ್ಯೂಸೆಕ್ಸ್
ಡ್ಯಾಂ ಒಟ್ಟು ಸಂಗ್ರಹ: ಶೇಕಡಾ 89.34
ಹೇಮಾವತಿ ಅಣೆಕಟ್ಟು ನೀರು ಸಂಗ್ರಹ ವಿವರ
ಒಟ್ಟು ನೀರು ಸಂಗ್ರಹ ಸಾಮರ್ಥ್ಯ : 37.10 ಟಿಎಂಸಿ
ಇಂದಿನ ನೀರಿನ ಸಾಮರ್ಥ್ಯ: 23.802 ಟಿಎಂಸಿ
ಒಳಹರಿವು : 2174 ಕ್ಯೂಸೆಕ್
ಹೊರಹರಿವು ಎಷ್ಟಿದೆ: 1450 ಕ್ಯೂಸೆಕ್












Click it and Unblock the Notifications