2017ಕ್ಕೆ ಕರ್ನಾಟಕ ವಿದ್ಯುತ್‌ ಸ್ವಾವಲಂಬಿ ರಾಜ್ಯ

ಬೆಂಗಳೂರು, ಜ.9 : ಕರ್ನಾಟಕದಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ವಿವಿಧ ವಿದ್ಯುತ್‌ ಯೋಜನೆಗಳು ಪ್ರಗತಿಯಲ್ಲಿದ್ದು, 2017ರ ವೇಳೆಗೆ ಕರ್ನಾಟಕ ವಿದ್ಯುತ್‌ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ವಿವಿಧ ವಿದ್ಯುತ್‌ ಉತ್ಪಾದನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಅನುಷ್ಠಾನ ವಿವಿಧ ಹಂತದಲ್ಲಿದೆ ಅವುಗಳು ಪೂರ್ಣಗೊಂಡರೆ ರಾಜ್ಯ ಸ್ವಾವಲಂಬಿಯಾಗಲಿದೆ ಎಂದರು.

ಬೆಂಗಳೂರಿನಲ್ಲಿ ಬುಧವಾರ ಭಾರತೀಯ ಎಲೆಕ್ಟ್ರಿಕ್‌ ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದಕರ ಒಕ್ಕೂಟ ಆಯೋಜಿಸಿರುವ ನಾಲ್ಕು ದಿನಗಳ ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್‌ ಉತ್ಪನ್ನಗಳ 11ನೇ ಪ್ರದರ್ಶನ 'ಎಲೆಕ್ರಾಮ-2014'ಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮುಯ್ಯ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಕ್ಷೇತ್ರದ 18 ಸಾವಿರ ಮೆ.ವ್ಯಾ. ಸಾಮರ್ಥ್ಯದ ವಿವಿಧ ವಿದ್ಯುತ್‌ ಯೋಜನೆಗಳು ರಾಜ್ಯದಲ್ಲಿ ಪ್ರಗತಿಯಲ್ಲಿದೆ ಎಂದು ಹೇಳಿದರು.

Siddaramaiah

ರಾಜ್ಯ ಸರ್ಕಾರ ಆರಂಭಿಸಿರುವ ಈ ಎಲ್ಲಾ ಯೋಜನೆಗಳು 2017ಕ್ಕೆ ಪೂರ್ಣಗೊಳ್ಳಲಿದ್ದು, ನಂತರ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಷ್ಟ್ರವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ವಿದ್ಯುತ್‌ ಉತ್ಪಾದನೆ ಹೊರತಾಗಿ ವಿದ್ಯುತ್‌ ನಷ್ಟ ತಪ್ಪಿಸಲು ಸರ್ಕಾರ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ. ಗ್ರಾಹಕ ಸ್ನೇಹಿ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತಂದಿದೆ ಎಂದರು.

ದೇಶದ ವಾರ್ಷಿಕ ಅಭಿವೃದ್ಧಿ ಮುಂದಿನ 20 ವರ್ಷಗಳಲ್ಲಿ ಶೇ.8ಕ್ಕೆ ತಲುಪಬೇಕಾದರೆ, ದೇಶದ ಒಟ್ಟು ವಿದ್ಯುತ್‌ ಉತ್ಪಾದನೆ 2032ರ ವೇಳೆಗೆ ನಾಲ್ಕು ಪಟ್ಟು ಹೆಚ್ಚಾಗಬೇಕು ಎಂದು ಅಂದಾಜಿಸಲಾಗಿದೆ. ಪ್ರಸರಣ ಮತ್ತು ವಿತರಣಾ ಜಾಲವನ್ನು ಮೇಲ್ದರ್ಜೆಗೇರಿಸುವ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

ವಿದ್ಯುತ್‌ ಉಪಕರಣಗಳ ಉತ್ಪಾದನೆಯಲ್ಲಿ ಜಗತ್ತಿನ ಇತರ ರಾಷ್ಟ್ರಗಳಿಗೆ ಪೈಪೋಟಿ ನೀಡಲು, ಭಾರತೀಯ ಉತ್ಪಾದಕರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.

30 ದೇಶಗಳು ಭಾಗಿ : ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಎಲೆಕ್ಟ್ರಿಕ್‌ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ಪ್ರಪಂಚದ ಅತಿ ದೊಡ್ಡ ಪ್ರದರ್ಶನ ಎನಿಸಿರುವ 'ಎಲೆಕ್ರಾಮ-2014' ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಜ.8 ರಿಂದ 12ರವರಗೆ 5 ದಿನಗಳ ಕಾಲ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುವ ಪ್ರದರ್ಶನದಲ್ಲಿ ಪ್ರಪಂಚದ 30 ದೇಶಗಳ ಪಾಲ್ಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+