ಓಲಾ ಕ್ಯಾಬ್ ಸಂಚಾರ ನಿಷೇಧ ಹಿಂಪಡೆದ ಕರ್ನಾಟಕ ಸರ್ಕಾರ

ಬೆಂಗಳೂರು, ಮಾರ್ಚ್ 24: ಓಲಾ ಕ್ಯಾಬ್ ಸಂಚಾರವನ್ನು ಆರು ತಿಂಗಳ ಅವಧಿಗೆ ನಿಷೇಧಿಸಿ, ಸೇವೆ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ.

ಈ ಕುರಿತಂತೆ ಸಾಮಾಜಿಕ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ, ಎಂದಿನಂತೆ ಓಲಾ ಕ್ಯಾಬ್ ಸಂಚರಿಸಲಿದೆ ಎಂದಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯು ಮಾರ್ಚ್ 18ರಂದು ನೋಟಿಸ್ ಜಾರಿಮಾಡಿತ್ತು. ಓಲಾ ಕಂಪನಿಯು ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ಅಗ್ರಿಗೇಟರ್ ರೂಲ್ಸ್ 2016ರನ್ನು ಉಲ್ಲಂಘಿಸಿದ ಆರೋಪ ಹೊತ್ತಿದೆ.

Karnataka lifts six-month ban on Ola, returns as usual

ಬಿಳಿ ನಾಮಫಲಕದ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಓಲಾ ಸಂಸ್ಥೆ ಈ ನಿಯಮವನ್ನು ಕಡೆಗಣಿಸಿ ಬಿಳಿ ನಾಮಫಲಕದ ವಾಹನಗಳನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ತಿಳಿಸಿದೆ. ಅಗ್ರಿಗೇಟರ್ ನಿಯಮದ 11(1)ಸೆಕ್ಷನ್ ಪ್ರಕಾರ ಆರು ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಆಯುಕ್ತ ವಿಪಿ ಇಕ್ಕೇರಿ ತಿಳಿಸಿದ್ದರು.

ಓಲಾ ಕಂಪನಿಯವರು ಬೈಕ್, ಟ್ಯಾಕ್ಸಿ,ಆಟೋಗಳನ್ನು ಅಕ್ರಮವಾಗಿ ಚಲಾಯಿಸುತ್ತಿದ್ದಾರೆ. ಹಲವು ಬಾರಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಓಲಾ ಕಂಪನಿಗೆ ಫೆಬ್ರವರಿ 15ರಂದು ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+