• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರೋಗ್ಯ, ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ರಜೆ ಸರ್ಕಾರ ಆದೇಶ

|

ಬೆಂಗಳೂರು, ಮಾರ್ಚ್ 12: ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ರಜೆ ನೀಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.

ಆರೋಗ್ಯ ಇಲಾಖೆ ನೌಕರರಿಗೆ ಈ ಹಿಂದೆ ಇದ್ದಂತೆ ವಾರ್ಷಿಕ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಯನ್ನು ಮುಂದುವರೆಸಲು ಸೂಚನೆ ನೀಡಲಾಗಿದೆ.

ಆರೋಗ್ಯ, ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ರಜೆ

ಕರ್ನಾಟಕ ಸರ್ಕಾರ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರ ಸರ್ಕಾರಿ ರಜೆಯನ್ನು ಘೋಷಣೆ ಮಾಡಿತ್ತು. ಆದರೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರು ಶನಿವಾರವೂ ಕಾರ್ಯ ನಿರ್ವಹಣೆ ಮಾಡಬೇಕಿತ್ತು. ಆದ್ದರಿಂದ, ರಜೆಯಿಂದ ವಂಚಿತರಾಗುತ್ತಿದ್ದರು.

2019ರ ಜೂನ್ 13ರಂದು ರಾಜ್ಯ ಸರ್ಕಾರಿ ನೌಕರರಿಗೆ 2 ಮತ್ತು 4ನೇ ಶನಿವಾರ ರಜೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ನೌಕರರಿಗೆ ವಾರ್ಷಿಕ ಸಾಂದರ್ಭಿಕ ರಜೆಯನ್ನು 15 ರಿಂದ 10ಕ್ಕೆ ಇಳಿಕೆ ಮಾಡಲಾಗಿತ್ತು.

ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರು ಶನಿವಾರ ಕೆಲಸ ಮಾಡುತ್ತಾರೆ. ಮತ್ತೊಂದು ಕಡೆ ವಾರ್ಷಿಕ ರಜೆಯೂ 10ಕ್ಕೆ ಇಳಿಕೆಯಾಗಿತ್ತು. ಆದ್ದರಿಂದ, ವಾರ್ಷಿಕ ರಜೆಯನ್ನು 15ಕ್ಕೆ ಏರಿಕೆ ಮಾಡುವಂತೆ ಕರ್ನಾಟಕ ರಾಜ್ಯ ನೌಕರರ ಸಂಘ 27-11-2019ರಲ್ಲಿ ಮನವಿ ಮಾಡಲಾಗಿತ್ತು.

ಈ ಮನವಿಯ ಮೆರೆಗೆ ಇಂದು (12-03-2020) ಎರಡು ಇಲಾಖೆಯಲ್ಲಿ 2 ಮತ್ತು 4ನೇ ಶನಿವಾರ ಕೆಲಸ ಮಾಡುವವರಿಗೆ ವಾರ್ಷಿಕ 15 ರಜೆ ಸಿಗಲಿದೆ ಹಾಗೂ 2 ಪರಿಮಿತ ರಜೆ ಮುಂದುವರಿಕೆಯಾಗಲಿದೆ.

English summary
Karnataka government orders Health and education department employees will get 15 holiday in the year. Both department will work on 2nd and 4th Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X