Quantum City: ಬೆಂಗಳೂರಲ್ಲಿ ಕ್ಯೂ-ಸಿಟಿ ಸ್ಥಾಪನೆಗೆ ಸರ್ಕಾರ ಜಾಗ ಮಂಜೂರು, ಏನಿದು?

ಬೆಂಗಳೂರು, ಸೆಪ್ಟಂಬರ್ 08: ರಾಜಧಾನಿ ಬೆಂಗಳೂರಿನ ಹೆಸರುಘಟ್ಟದಲ್ಲಿ 'ಕ್ವಾಂಟಮ್ ನಗರಿ' (Quantum City /Q-City) ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ 6.17 ಎಕರೆ ಭೂಮಿಯನ್ನು ಮಂಜೂರು ಮಾಡಲು ಅನುಮೋದನೆ ನೀಡಿದೆ. ಅಧಿಖೃತ ಆದೇಶ ಹೊರಡಿಸುವ ಮೂಲಕ ರಾಜ್ಯವನ್ನು ಕ್ವಾಂಟಮ್ ಹಬ್ ಆಗಿಸಲು ಸುಭದ್ರ ಅಡಿಪಾಯ ಹಾಕಲಾಗಿದೆ.

ಅಧಿಕೃತ ಮಾಹಿತಿ ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು, ಕಳೆದ ತಿಂಗಳಷ್ಟೇ, ದೇಶ, ವಿದೇಶಗಳಿಂದ ಆಗಮಿಸಿದ್ದ ಸಂಶೋಧಕರು, ನೊಬೆಲ್ ವಿಜ್ಞಾನಿಗಳೊಂದಿಗೆ 'ಕ್ವಾಂಟಮ್ ಇಂಡಿಯಾ ಬೆಂಗಳೂರು: ಸಮ್ಮೇಳನ'ವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ, ನೀಡಿದ್ದ ವಾಗ್ದಾನದಂತೆ ಒಂದೇ ತಿಂಗಳಲ್ಲಿ ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿರುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ.

Karnataka Govt Approves Land for Quantum City in Bengaluru Project Details

ಯುವ ವಿಜ್ಞಾನಿಗಳು, ಸಂಶೋಧಕರನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ವಾಂಟಮ್ ನಗರಿಯಲ್ಲಿ, ಅಂತಾರಾಷ್ಟ್ರೀಯ ಗುಣಟ್ಟದ ಅತ್ಯಾಧುನಿಕ ಪ್ರಯೋಗಾಲಯಗಳು, ನಾವಿನ್ಯತಾ ಕೇಂದ್ರಗಳು ಕ್ವಾಂಟಮ್ ಎಚ್ ಪಿಸಿ ಡೇಟ ಕೇಂದ್ರ ಮುಂತಾದವುಗಳು ತಲೆಎತ್ತಲಿದ್ದು, 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಕ್ವಾಂಟಮ್ ನಮ್ಮ ಭವಿಷ್ಯದ ತಂತ್ರಜ್ಞಾನ. ಇದರ ಮಹತ್ವ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನು ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಸಂಶೋಧನೆ, ನವೋದ್ಯಮಗಳು ಮತ್ತು ಶೈಕ್ಷಣಿಕ-ಉದ್ಯಮ ಸಹಯೋಗವನ್ನು ಹೆಚ್ಚಿಸುವ ಗುರಿ ಉದ್ದೇಶದಿಂದ ಸರ್ಕಾರ "ಕ್ವಾಂಟಮ್ ಸಿಟಿ" (ಕ್ಯೂ-ಸಿಟಿ) ಸ್ಥಾಪನೆಗೆ ಮುಂದಾಗಿದೆ. 2035 ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಕ್ವಾಂಟಮ್ ಆರ್ಥಿಕತೆ ಅಭಿವೃದ್ಧಿಪಡಿಸುವ ರಾಜ್ಯದ ಮಹತ್ವಾಕಾಂಕ್ಷೆ ಸಹ ಹೊಂದಲಾಗಿದೆ.

ಈ ಕ್ಯೂ ಸಿಟಿಯಲ್ಲಿ ಆಧುನಿಕ ಪ್ರಯೋಗಾಲಯಗಳು ಇರಲಿವೆ. ಸ್ಟಾರ್ಟ್‌ಅಪ್‌ಗಳಿಗೆ ಇನ್ಕ್ಯೂಬೇಷನ್‌ ಸೌಲಭ್ಯಗಳು ಸಿಗಲಿವೆ. ಕೈಗಾರಿಕಾ ಶೈಕ್ಷಣಿಕ ಸಹಭಾಗಿತ್ವಕ್ಕೆ ಅಗತ್ಯವಾದ ಮೂಲಸೌಕರ್ಯ ಹೊಂದಿರುವ ನಗರವಾಗಲಿದ್ದು, ಬೆಂಗಳೂರು ಮತ್ತು ಕರ್ನಾಟಕಕ್ಕೆ ಮತ್ತೊಂದು ಕೊಡುಗಡೆ ನೀಡುವ ನಗರವಾಗಲಿದೆ.

ವಿಜ್ಞಾನ ಕೇಂದ್ರಕ್ಕೂ ಜಾಗ ಮಂಜೂರು

ಕ್ಯೂಸಿಟಿಗೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರ (ICTS-TIFR) ವಿಸ್ತರಣೆಗೆ 08 ಎಕರೆ ಪದೇಶವನ್ನು ಮಂಜೂರು ಮಾಡಲಾಗಿದೆ. ಇದು ಸೈದ್ಧಾಂತಿಕ ವಿಜ್ಞಾನಗಳಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+